ದಿ.ಅನಂತ್ ಕುಮಾರ್ ಅವರ ಇಬ್ಬರು ಅದಮ್ಯ ಚೇತನರನ್ನು ನೋಡಿದ್ದೀರಾ?

First Published Jun 3, 2020, 6:06 PM IST

ಕರ್ನಾಟಕ ಭಾರತೀಯ ಜನತಾ ಪಕ್ಷದ ಬೆನ್ನೆಲುಬಾಗಿ,ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸೋಲಿಲ್ಲದ ಸರದಾರನಾಗಿ , ದೆಹಲಿಯಯಲ್ಲಿ ಕರ್ನಾಟಕದ ಧ್ವನಿಯಾಗಿದ್ದವರು  ಅನಂತ್ ಕುಮಾರ್.
ಬಡವರ ಸೇವೆಗೆಂದೇ ಅದಮ್ಯ ಚೇತನ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದೆಷ್ಟೋ ಜನರ ಹಸಿವನ್ನು ನೀಗಿಸುತ್ತಿದ್ದ ಇವರು 2018 ರ 12 ನವೆಂಬರ್ ರಂದು ನಮ್ಮೆಲ್ಲರನ್ನು ಅಗಲಿದರು.ಅವರ ನಂತರ  
ಇದೀಗ ಈ ಸಂಸ್ಥೆಯನ್ನುಅನಂತ್ ಕುಮಾರ್ ಅವರ ಧರ್ಮಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಹಾಗು ಮಕ್ಕಳು ಮುನ್ನಡೆಸುತ್ತಿದ್ದಾರೆ.ಅನಂತ್ ಕುಮಾರ್ ಅವರ ಇಬ್ಬರು ಮಕ್ಕಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.