ಹೈಕಮಾಂಡ್ ಹೇಳುವ ಮೊದಲೇ ಶ್ರೀರಾಮುಲು ಮಹತ್ವದ ನಿರ್ಧಾರ; ಕೊಟ್ಟ ಮಾತು ತಪ್ಪಿದ್ರಾ ಮಾಜಿ ಸಚಿವ?
BJP High command: ಮಾಜಿ ಸಚಿವ ಶ್ರೀರಾಮುಲು ಅವರ ನಡೆಗೆ ಸ್ಥಳೀಯ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2028ರ ಚುನಾವಣೆಗೆ ಶ್ರೀರಾಮುಲು ಸ್ಪರ್ಧಿಸುವ ವಿಚಾರ ಸ್ಥಳೀಯ ಮುಖಂಡರಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ.
16

Sriramulu
Former Minister B Sriramulu: ಮಾಜಿ ಸಚಿವ ಬಿ.ಶ್ರೀರಾಮುಲು ರಾಜ್ಯ ಬಿಜೆಪಿ ಮುಖಂಡರ ಮೇಲೆ ಮುನಿಸಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಮತ್ತೊಂದೆಡೆ ಬಿಜೆಪಿ ಭಿನ್ನರು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ.
26
2028ರ ವಿಧಾನಸಭಾ ಚುನಾವಣೆ
2028ರ ವಿಧಾನಸಭಾ ಚುನಾವಣೆಗೆ ಮೂರು ವರ್ಷ ಬಾಕಿ ಇರುವಾಗಲೇ, ನಾನು ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವೆ ಎಂಬ ಹೇಳಿಕೆಯನ್ನು ಶ್ರೀರಾಮುಲು ನೀಡಿದ್ದಾರೆ. ಈಗಾಗಲೇ ತಾವು ಸ್ಪರ್ಧೆ ಮಾಡಬೇಕೆಂಬ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀರಾಮುಲು ಸಕ್ರಿಯರಾಗಿದ್ದಾರೆ. ಕ್ಷೇತ್ರದಲ್ಲಿನ ಮದುವೆ, ಸಾವು ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಶ್ರೀರಾಮುಲು ತೆರಳುತ್ತಿದ್ದಾರೆ. ಆದ್ರೆ ಶ್ರೀರಾಮುಲು ಅವರ ದಿಢೀರ್ ಈ ನಡೆ ಸ್ಥಳೀಯ ಮುಖಂಡರಲ್ಲಿಅಸಮಾಧಾನವನ್ನುಂಟು ಮಾಡಿದೆ.
36
ಎರಡು ಗುಂಪಾಗಿ ಪಾದಯಾತ್ರೆ
ಹೌದು, 2028ರ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧೆ ಮಾಡೋದಾಗಿ ಮಾಜಿ ಶ್ರೀರಾಮುಲು ಘೋಷಿಸಿಕೊಂಡಿದ್ದಾರೆ. ಶನಿವಾರ ಕೊಟ್ಟೂರು ಜಾತ್ರೆಗೆ ಕೂಡ್ಲಿಗಿಯಿಂದ ಕೊಟ್ಟೂರು ಪಾದಯಾತ್ರೆ ವಿಚಾರದಲ್ಲಿ ಬಿಜೆಪಿ ಎರಡು ಗುಂಪಾಗಿ ಪಾದಯಾತ್ರೆ ಮಾಡಿವೆ. ಶ್ರೀರಾಮುಲು ನೇತೃತ್ವದಲ್ಲಿ ಒಂದು ಗುಂಪು, ಮುಂದಿನ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೂರ್ಯಪಾಪಣ್ಣ ನೇತೃತ್ವದಲ್ಲಿ ಮತ್ತೊಂದು ಗುಂಪಿನಲ್ಲಿ ಪಾದಯಾತ್ರೆ ಮಾಡಿದೆ.
46
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ
2028ರ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಿಸುವ ಇಂಗಿತವನ್ನು ಶ್ರೀರಾಮುಲು ವ್ಯಕ್ತಪಡಿಸಿದ್ದಾರೆ. ಅದರೆ ಶ್ರೀರಾಮುಲು ಕೂಡ್ಲಿಗಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಬಿಡಲ್ಲ ಎಂದು ಸ್ಥಳೀಯ ಮುಖಂಡರು ಹೇಳುತ್ತಿದ್ದಾರೆ,
56
ಶ್ರೀರಾಮುಲು ನಡೆಗೆ ತೀವ್ರ ಅಕ್ರೋಶ
ಶ್ರೀರಾಮುಲು ನಡೆಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಮುಖಂಡರು ರಾಜ್ಯ ನಾಯಕರ ಗಮನಕ್ಕೆ ತರಲು ಮುಂದಾಗಿದ್ದಾರೆ. ಈಗಾಗಲೇ ರಾಜಕೀಯ ಗೊಂದಲದಲ್ಲಿರೋ ಶ್ರೀರಾಮುಲುಗೆ ಇದೀಗ ಕೂಡ್ಲಿಗಿ ಬಿಜೆಪಿ ಮುಖಂಡರ ಮನವೊಲಿಕೆ ದೊಡ್ಡ ಸವಾಲಾಗಿದೆ.
66
ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ
ಶ್ರೀರಾಮುಲು ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿರುವ ಸೂರ್ಯ ಪಾಪಣ್ಣ, ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದರು. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ, ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ಹೇಳಿದ್ದಾರೆ. ಕೂಡ್ಲಿಗಿಯಿಂದ ಕೊಟ್ಟೂರು ಪಾದಯಾತ್ರೆಯಲ್ಲಿ ಯಾವುದೇ ಬಣಗಳಿಲ್ಲ ಎಂದು ಸೂರ್ಯಪಾಪಣ್ಣ ಸ್ಪಷ್ಟಪಡಿಸಿದರು.
Latest Videos