ಈದ್ ಸಂಭ್ರಮಾಚರಣೆಯ ಮುದ್ದಾದ ಫೋಟೋ ಹಂಚಿಕೊಂಡ ಸಾನಿಯಾ ಮಿರ್ಜಾ
ದುಬೈ: ಜಗತ್ತಿನಾದ್ಯಂತ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಈದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ತಾರಾ ಜೋಡಿಯಾದ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ದುಬೈನಲ್ಲಿ ಈದ್ ಹಬ್ಬ ಆಚರಿಸಿದ್ದಾರೆ. ಈ ಸಂದರ್ಭದಲ್ಲಿನ ಕೆಲವು ಮುದ್ದಾದ ಫೋಟೋಗಳ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೋಯೆಬ್ ಮಲಿಕ್ ಹಾಗೂ ಇಜಾನ್ ಮಲಿಕ್ ಜತೆ ದುಬೈನಲ್ಲಿ ಈದ್ ಹಬ್ಬ ಆಚರಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಂಡ ಮಿರ್ಜಾ-ಮಲಿಕ್ ಜೋಡಿ
2010ರ ಏಪ್ರಿಲ್ 12ರಂದು ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್‌ರನ್ನು ವಿವಾಹವಾಗಿದ್ದ ಹೈದರಾಬಾದಿನ ಮೂಗುತಿ ಸುಂದರಿ
2018ರ ಅಕ್ಟೋಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ಸಾನಿಯಾ ಮಿರ್ಜಾ.
ತಾಯಿಯಾದ ಬಳಿಕ ಸ್ಪರ್ಧಾತ್ಮಕ ಟೆನಿಸ್ ಟೂರ್ನಿಯಿಂದ ದೂರವೇ ಉಳಿದಿರುವ ಸಾನಿಯಾ ಮಿರ್ಜಾ
ಸದ್ಯ ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ಶೋಯೆಬ್ ಮಲಿಕ್ ತಮ್ಮ ಕುಟುಂಬದ ಜತೆ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.