ಖ್ಯಾತ ಗಾಲ್ಫರ್‌ ಟೈಗರ್‌ ವುಡ್ಸ್‌ ಕಾರು ಭೀಕರ ಅಪಘಾತ..! ನೂರಾರು ಅಡಿ ಪ್ರಪಾತಕ್ಕೆ ಬಿದ್ದ ಕಾರು

First Published Feb 24, 2021, 10:40 AM IST

ನ್ಯೂಯಾರ್ಕ್‌: ಅಮೆರಿಕದ ಖ್ಯಾತ ವೃತ್ತಿಪರ ಗಾಲ್ಫರ್‌ ಟೈಗರ್ ವುಡ್ಸ್‌ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದ್ದು, ಗಂಭೀರ ಗಾಯಗೊಂಡಿರುವ ವುಡ್ಸ್‌ರನ್ನು ಲಾಸ್‌ ಏಂಜಲೀಸ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಮಂಗಳವಾರ(ಫೆ.23) ಈ ಅವಘಡ ಸಂಭವಿದ್ದು, ಟೈಗರ್‌ ವುಡ್ಸ್ ಪ್ರಯಾಣಿಸುತ್ತಿದ್ದ ಕಾರು ನೂರಾರು ಅಡಿ ಪ್ರಪಾತಕ್ಕೆ ಬಿದ್ದಿದ್ದು, ಅಕ್ಷರಶಃ ನುಜ್ಜು-ಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರು ಅಪಘಾತದ ರಬಸಕ್ಕೆ ಟೈಗರ್‌ ವುಡ್ಸ್‌ ಕಾಲುಗಳೆರಡು ಗಾಯಕ್ಕೆ ತುತ್ತಾಗಿವೆ.