ತ್ರಿವರ್ಣ ಧ್ವಜದ ಮೇಲೆ ಸಹಿ ಹಾಕಲ್ಲ, ಚಿನ್ನದ ಜೊತೆ ವಿಶ್ವದ ಮನಗೆದ್ದ ನೀರಜ್ ಚೋಪ್ರಾ!
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಿ ಚಿನ್ನದ ಪದಕ ಗೆದ್ದಿದ್ದಾರೆ. ಗೆಲುವಿನ ಬಳಿಕ ತ್ರಿವರ್ಣ ಧ್ವಜದ ಮೇಲೆ ಆಟೋಗ್ರಾಫ್ ಕೇಳಿದ ಹಂಗೇರಿಯಾ ಅಭಿಮಾನಿಗೆ ನೀಡಿದ ಉತ್ತರ ಎಲ್ಲರ ಮನಗೆದ್ದಿದೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಸಾಧನೆ ಮಾಡಿದ್ದಾರೆ. ಜಾವಲಿನ್ ಥ್ರೋನಲ್ಲಿ ನೀರಜ್ ಬಂಗಾರ ಮುಡಿಗೇರಿಸಿದ್ದಾರೆ. ನೀರಜ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಗೆಲುವಿನ ಬಳಿಕ ನೀರಜ್ ಚೋಪ್ರಾ ಒಂದೊಂದು ನಡೆಯು ಎಲ್ಲರ ಮನಗೆದ್ದಿದೆ.
ಚಿನ್ನದ ಸಾಧನೆ ಬಳಿಕ ನೀರಜ್ ಚೋಪ್ರಾ ಜೊತೆ ಸೆಲ್ಫಿ ಕ್ಲಿಕ್ಲಿಸಿಕೊಳ್ಳಲು, ಆಟೋಗ್ರಾಫ್ ಪಡೆಯಲು ಮುಗಿಬಿದ್ದಿದ್ದಾರೆ. ಇದೇ ವೇಳೆ ಹಂಗೇರಿಯಾ ಅಭಿಮಾನಿ ನೀರಜ್ ಬಳಿ ಆಟೋಗ್ರಾಫ್ ಕೇಳಿದ್ದಾರೆ.
ಹಿಂದಿ ಮಾತನಾಡುವ ಹಂಗೇರಿಯಾ ಅಭಿಮಾನಿ ತ್ರಿವರ್ಣ ಧ್ವಜದ ಮೇಲೆ ಆಟೋಗ್ರಾಫ್ ನೀಡುವಂತೆ ಮನವಿ ಮಾಡಿದ್ದಾಳೆ. ಆದರೆ ತಕ್ಷಣವೇ ಉತ್ತರ ನೀಡಿದ ನೀರಜ್ ಚೋಪ್ರಾ, ತ್ರಿವರ್ಣ ಧ್ವಜದ ಮೇಲೆ ಸಹಿ ಹಾಕಲ್ಲ ಎಂದಿದ್ದಾರೆ.
ನಿಮಗೆ ಆಟೋಗ್ರಾಫ್ ನೀಡುತ್ತೇನೆ. ಆದರೆ ಧ್ವಜದ ಮೇಲೆ ಸಹಿ ಹಾಕಿ ಅಗರೌವ ತೋರಲ್ಲ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ. ಬಳಿಕ ಹಂಗೇರಿಯಾ ಅಭಿಮಾನಿಯ ಟಿ ಶರ್ಟ್ ಮೇಲೆ ಸಹಿ ಹಾಕಿದ್ದಾರೆ.
ಜೋನಾಥನ್ ಸೆಲ್ವರಾಜ್ ಅನ್ನೋ ಟ್ವಿಟರ್ ಖಾತೆಯಲ್ಲಿ ಈ ಕುರಿತ ಮಾಹಿತಿ ಹಾಗೂ ಫೋಟೋವನ್ನು ಹಂಚಿಕೊಳ್ಳಲಾಗಿದೆ. ನೀರಜ್ ಚೋಪ್ರಾ ನಡೆಗೆ ವಿಶ್ವಲೇ ಸಲಾಂ ಹೇಳಿದೆ.
ಭಾರತೀಯ ತ್ರಿವರ್ಣ ಧ್ವಜಕ್ಕೆ ನೀರಜ್ ಚೋಪ್ರಾ ನೀಡಿದ ಗೌರವ ನಮಗೆಲ್ಲಾ ಮಾದರಿಯಾಗಿದೆ. ನೀರಜ್ ಚೋಪ್ರಾ ಪ್ರತಿಯೊಬ್ಬರಿಗೂ ಮಾದರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಬೆಳ್ಳಿ ಗೆದ್ದ ಪ್ರತಿಸ್ಪರ್ಧಿ ಪಾಕಿಸ್ತಾನದ ಅರ್ಶದ್ ನದೀಮ್ ಕರೆದು ತ್ರಿವರ್ಣ ಧ್ವಜದ ಪಕ್ಕದಲ್ಲಿ ನಿಲ್ಲಿಸಿ ಫೋಟೋ ತೆಗೆಸಿಕೊಂಡಿದ್ದರು. ಈ ನಡೆ ಕೂಡ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಟ್ರಾಕ್ ಅಂಡ್ ಫೀಲ್ಡ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ.