ಐರನ್‌ಮ್ಯಾನ್ ರೇಸ್ ಪೂರ್ಣಗೊಳಿಸಿದ ಮೊದಲ ಜನಪ್ರತಿನಿಧಿ; ದಾಖಲೆ ಬರೆದ ತೇಜಸ್ವಿ ಸೂರ್ಯ!
1900 ಮೀಟರ್ ಈಜು, 90 ಕಿಲೋಮೀಟರ್ ಸೈಕ್ಲಿಂಗ್, 21.1 ಕಿ.ಮಿ ಓಟ. ಗೋವಾದಲ್ಲಿ ನಡೆದ ವಿಶೇಷ ಹಾಗೂ ಅತ್ಯಂತ ಸವಾಲಿನ ಐರನ್‌ಮ್ಯಾನ್ ರೇಸ್ ಪೂರ್ಣಗೊಳಿಸಿದ ಸಂಸದ ತೇಜಸ್ವಿ ಸೂರ್ಯ ಹೊಸ ದಾಖಲೆ ಬರೆದಿದ್ದಾರೆ.
ಈಜು, ಓಟ, ಹಾಗೂ ಸೈಕ್ಲಿಂಗ್ ಟ್ರಯಥ್ಲಾನ್ ರಿಲೇ ಸ್ಪರ್ಧೆ ಅತೀ ಹೆಚ್ಚಿನ ಸವಾಲಿನ ಕ್ರೀಡೆಯಾಗಿದೆ. ಫಿಟ್ನೆಸ್ ಪರೀಕ್ಷಿಸುವ ಈ ಕ್ರೀಡೆಯಲ್ಲಿ ಸಂಸದ ತೇಜಸ್ವಿ ಸೂರ್ಯ ದಾಖಲೆ ಬರೆದಿದ್ದಾರೆ. ಗೋವಾದಲ್ಲಿ ಆಯೋಜನೆಗೊಂಡ ಗೋವಾ 70.3 ಐರನ್‌ಮ್ಯಾನ್ ರಿಲೇಯನ್ನು ತೇಜಸ್ವಿ ಸೂರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಐರನ್‌ಮ್ಯಾನ್ ಟ್ರಯಥ್ಲಾನ್ ರೇಸ್ ಯಶಸ್ವಿಯಾಗಿ ಪೂರ್ಣಗೊಲಿಸಿ ಮೊದಲ ಜನಪ್ರತಿನಿಧಿಸಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬರೋಬ್ಬರಿ 90 ಕಿಲೋಮೀಟರ್ ಸೈಕ್ಲಿಂಗ್, 1900 ಮೀಟರ್ ಈಜು ಹಾಗೂ 21.1 ಕಿಲೋಮೀಟರ್ ಓಟವನ್ನು 8 ಗಂಟೆ 27 ನಿಮಿಷದಲ್ಲಿ ತೇಜಸ್ವಿ ಸೂರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಫಿಟ್ನೆಸ್, ಆರೋಗ್ಯಕರ ಜೀವನಶೈಲಿ ಹಾಗೂ ಡಿಡಿಕೇಶನ್ ಮೂಲಕ ಸಂಸದ ತೇಜಸ್ವಿ ಸೂರ್ಯ ಕಠಿಣ ಸವಾಲನ್ನು ಗೆದ್ದಿದ್ದಾರೆ. ತಮ್ಮ ಈ ಸಾಧನೆಯನ್ನು ಕರಿಣ ಪರಿಶ್ರಮ ವಹಿಸಿ ದೇಶದ ಕೀರ್ತಿ ಪತಾಕೆ ಹಾರಿಸುವ ಕ್ರೀಡಾಪಟುಗಳಿಗೆ ಅರ್ಪಿಸಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ ತೇಜಸ್ವಿ ಸೂರ್ಯ ಸಂತಸ ವ್ಯಕ್ತಪಡಿಸಿದ್ದಾರೆ. 70.3 ಗೋವಾ ಐರನ್‌ಮ್ಯಾನ್ ಕ್ರೀಡೆಗೆ ಸುಮಾರು 50ಕ್ಕೂ ಹೆಚ್ಚು ದೇಶಗಳಿಂದ ಕ್ರೀಡಾಪಟುಗಳನ್ನು ಆಕರ್ಷಿಸಿದೆ. ಇದು ದೇಶ ಹಾಗೂ ವಿದೇಶಗಳಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಬಯಸುವ ಹಾಗೂ ಉತ್ಸಾಹಿಗಳಿಗೆ ಅತ್ಯತ್ತಮ ವೇದಿಕೆಯಾಗಿದೆ ಎಂದಿದ್ದಾರೆ.
ಐರನ್‌ಮ್ಯಾನ್ ರೇಸ್ ಹಲವು ಸವಾಲುಗಳಿಂದ ಕೂಡಿದ ಕ್ರೀಡೆ. ದೈಹಿಕ ಫಿಟ್ನೆಸ್ ಜೊತೆಗೆ ಮಾನಸಿಕ ಸದೃಢತೆ ಕೂಡ ಅತೀ ಮುಖ್ಯ. ಇದಕ್ಕಾಗಿ ಕಠಿಣ ತರಬೇತಿ ಡೆದಿದ್ದೇನೆ. ಕಠಿಣ ಸವಾಲು ಯಶಸ್ವಿಯಾಗಿ ಪೂರ್ಣಗೊಳಿಸಿರುವು ಸಂತಸವಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯ ಫಿಟ್ ಇಂಡಿಯಾ ಆಂದೋಲನದ ಕೊಡುಗೆಯನ್ನು ಸ್ಮರಿಸಿದ್ದಾರೆ.
ಫಿಟ್ ಇಂಡಿಯಾ ಆಂದೋಲದ ದೇಶದಲ್ಲಿ ಫಿಟ್ನೆಸ್ ಹಾಗೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ನೆರವಾಗಿದೆ. ಇದೇ ವೇಳೆ ಯುವ ಸಮೂಹ ಫಿಟ್ನೆಸ್ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಉತ್ತಮ ಜೀವನಶೈಲಿ, ಕ್ರೀಡೆ ಮೂಲಕ ಆರೋಗ್ಯಕಾಪಾಡಿಕೊಳ್ಳಲು ಸಲಹೆ ನೀಡಿದ್ದಾರೆ.