ಸೂಪರ್ ಮಾಡೆಲ್‌ಗಳಿಗಿಂತ ಕಡಿಮೆ ಇಲ್ಲ ಈ ಕ್ರೀಡಾಪಟುಗಳು!
ಈ ದಿನಗಳಲ್ಲಿ ಮಹಿಳಾ ಕ್ರೀಡಾಪಟುಗಳು ಫಿಟ್‌ನೆಸ್‌ನಲ್ಲಿ ಯಾವುದೇ ಪುರಷರಿಗಿಂತ ಕಡಿಮೆಯಿಲ್ಲ. ಕಠಿಣ ಪರಿಶ್ರಮ ಹಾಗೂ ವರ್ಕೌಟ್‌ಗಳಿಂದ ಫಿಟ್ ಆಗಿರುವ ಇವರು ಯಾವುದೇ ಮಾಡೆಲ್‌ಗಳಿಂಗಿಂತ ಕಡಿಮೆ ಇಲ್ಲ. ಮಾರಿಯಾ ಶರಪೋವಾನಿಂದ ಅನಾ ಇವನೊವಿಕ್ ವರೆಗೆ ಹಲವರನ್ನು ಸೂಪರ್ ಮಾಡೆಲ್ ಅನ್ನಬಹುದು.
ಸ್ಪೋರ್ಟ್‌ನಲ್ಲಿ ಫಿಟ್‌ನೆಸ್ ವಿಷಯಕ್ಕೆ ಬಂದರೆ ಮಹಿಳೆಯರು ಪುರಷರಿಗೆ ಸಮವಾಗಿದ್ದಾರೆ.
ಇತ್ತೀಚಿಗೆ ಹಲವು ಮಹಿಳೆಯರು ಕ್ರೀಡಾಪಟುಗಳು ಕ್ರೀಡಾ ಜಗತ್ತನ್ನು ಬೆಚ್ಚಿಬೀಳಿಸಿದ್ದಾರೆ. ಆಟದ ಜೊತೆಗೆ ಅವರ ಗ್ಲಾಮರ್‌ನಿಂದ ಸಹ ಫೇಮಸ್ ಆಗಿದ್ದಾರೆ. ಇವರಲ್ಲಿ ಕೆಲವರು ಮಾಡೆಲಿಂಗ್‌ನಲ್ಲಿ ಸಹ ತೊಡಗಿಸಿಕೊಂಡಿದ್ದಾರೆ.
ಮಾರಿಯಾ ಶರಪೋವಾ:
ರಷ್ಯಾದ ಟೆನಿಸ್ ಸೆನ್ಸೇಷನ್ ಮಾರಿಯಾ ಶರಪೋವಾ ಬಗ್ಗೆ ತಿಳಿಯದವರೇ ಇಲ್ಲ. ಐದು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಶರಪೋವಾರ ಟೆನ್ನಿಸ್ ಕೆರಿಯರ್ ಜೊತೆಗೆ ಬ್ಯೂಟಿಯೂ ಎಲ್ಲರ ಗಮನ ಸೆಳೆದಿದೆ. ಈಗಾಗಲೇ ಮಾಡೆಲಿಂಗ್‌ನಲ್ಲಿರುವ ಶರಫೋವಾ ಈಗ ಅವರು ನಿವೃತ್ತರಾಗಿದ್ದು ಅದನ್ನು ಫುಲ್ ಟೈಮ್‌ಗೆ ಮುಂದುವರಿಸಬಹುದು.
ಅನಾ ಇವನೊವಿಕ್:
ಮಾಜಿ ಸರ್ಬಿಯಾದ ಟೆನಿಸ್ ತಾರೆ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿದ್ದಾರೆ. 2008ರ ಫ್ರೆಂಚ್ ಓಪನ್ ಚಾಂಪಿಯನ್ ಅನಾ ಇವನೊವಿಕ್ ಅತ್ಯಂತ ಸುಂದರವಾದ ಟೆನಿಸ್ ಮಹಿಳೆಯರಲ್ಲಿ ಒಬ್ಬರು. ಇಂದಿಗೂ ಬೊಲ್ಡ್ ಲುಕ್‌ನಿಂದ ಎಲ್ಲರ ಗಮನ ಸೆಳೆಯುವ ಅನಾ ಪರ್ಫೇಕ್ಟ್ ಬಿಕಿನಿ ಬಾಡಿ ಹೊಂದಿದ್ದಾರೆ.
ಹಿಲರಿ ನೈಟ್:
ಅಮೆರಿಕಾದ ಐಸ್ ಹಾಕಿಯ ಫಾರ್ವರ್ಡ್ ಪ್ಲೇಯರ್ ಹಿಲರಿ ಒಲಿಂಪಿಕ್ಸ್‌ನಲ್ಲಿ ಯುಎಸ್ಎ ಪ್ರತಿನಿಧಿಸಿದ್ದರು. ಇವರು ಅನೇಕ ಪುರಸ್ಕಾರಗಳನ್ನು ಗೆದ್ದಿದ್ದಾರೆ. ಇವರ ಬಿಕಿನಿಯ ಫೋಟೋಶೂಟ್‌ಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸ್ಕೈಲಾರ್ ಡಿಗ್ಗಿನ್ಸ್:
ವಿಮೆನ್ಸ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಶನ್‌ನಲ್ಲಿ ಫೀನಿಕ್ಸ್ ಮರ್ಕ್ಯುರಿ ಟೀಮ್‌ಗೆ ಪಾಯಿಂಟ್ ಗಾರ್ಡ್ ಆಗಿ ಆಡುವ ಅಮೆರಿಕನ್, ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಇವರು. ಸ್ಕೈಲಾರ್‌ಳ ಹಾಟ್‌ನೆಸ್ ಅನ್ನು ಈ ಫೋಟೋವೇ ತಿಳಿಸುತ್ತದೆ. ಪರ್ಫೇಕ್ಟ್ ಬಾಡಿ ಹೊಂದಿರುವ ಈಕೆ ಈಗಾಗಲೇ ವೋಗ್ ಮತ್ತು ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಸ್ವಿಮ್‌ಸೂಟ್ ಮ್ಯಾಗ್‌ಜೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾಳೆ.
ಎಲ್ಲೆನ್ ಹೂಗ್:
ಈ ಪಟ್ಟಿಯಲ್ಲಿರುವ ಇನ್ನೊಬ್ಬ ಹಾಕಿ ಆಟಗಾರ್ತಿ. ನೆದರ್ಲ್ಯಾಂಡ್ಸ್ ಅನ್ನು ಪ್ರತಿನಿಧಿಸುವ ಈಕೆಯ ನಾಯಕತ್ವದಲ್ಲಿ ತಂಡ ಬೆಳ್ಳಿ ಮತ್ತು ಕಂಚುಗಳ ಜೊತೆಗೆ ಒಂಬತ್ತು ಚಿನ್ನದ ಪದಕಗಳನ್ನು ಗೆದ್ದಿದೆ. ಫಿಟ್ ಆಂಡ್ ಹಾಟ್ ಆಗಿರುವ ಎಲ್ಲೆನ್ ಹೂಗ್ ಖಂಡಿತ ಮಾಡೆಲಿಂಗ್ ಟ್ರೈ ಮಾಡಬಹುದು.
ರೊಂಡಾ ರೌಸೆ:
ಮಾಜಿ ಮಿಕ್ಸ್‌ಡ್ ಮಾರ್ಷಲ್ ಆರ್ಟ್ ಕಲಾವಿದೆ ಹಾಗೂ ಪ್ರಸ್ತುತ ವೃತ್ತಿಪರ ಕುಸ್ತಿಪಟು ಆಗಿರುವ ರೊಂಡಾ ನಿಸ್ಸಂದೇಹವಾಗಿ ಅತ್ಯಂತ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರು. ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಮತ್ತು ಒಲಿಂಪಿಕ್ ಕಂಚು ಗೆದ್ದಿದ್ದಾರೆ. ಪರ್ಫೇಕ್ಟ್ ಫಿಸಿಕ್ ಹಾಗೂ ಪವರ್ ಹೊಂದಿರುವ ಇವರು 2012ರಲ್ಲಿ ESPN ಬಾಡಿ ಮ್ಯಾಗ್‌ಜೀನ್ ಹಾಗೂ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಸ್ವಿಮ್‌ಸೂಟ್ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದಾರೆ.