ಒಲಿಂಪಿಕ್ಸ್‌ನಲ್ಲಿ ಪದಕ ಭರವಸೆ ಮೂಡಿಸಿರುವ ಆಟಗಾರ ಸಾಯಿ ಪ್ರಣೀತ್ !
ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆರಂಭವಾಗಲಿದ್ದು, ಭಾರತದಿಂದ ಈ ಬಾರಿ 127 ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶೂಟಿಂಗ್, ಬಾಕ್ಸಿಂಗ್, ಕುಸ್ತಿ ಹಾಗೂ ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ಭಾರತದ ಅಥ್ಲೀಟ್‌ಗಳಿಂದ ಪದಕಗಳನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ ಬ್ಯಾಡ್ಮಿಂಟನ್ ಆಟಗಾರ ಬಿ. ಸಾಯಿ ಪ್ರಣೀತ್ ಹೆಚ್ಚಿನ ಭರವಸೆ ಮೂಡಿಸಿದ್ದಾರೆ. ಸಾಯಿ ಪ್ರಣೀತ್ ಕಿರು ಪರಿಚಯ ಇಲ್ಲಿದೆ.
10 ಆಗಸ್ಟ್ 1992ರಲ್ಲಿ ಆಂಧ್ರಪ್ರದೇಶದದಲ್ಲಿ ಜನಿಸಿರುವ ಭಮೀಡಿಪತಿ ಸಾಯಿ ಪ್ರಣೀತ್ ಯಂಗ್ ಪ್ರಾಮಿಸಿಂಗ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ.
ಪ್ರಸ್ತುತ ಗೋಪಿ ಚೆಂದ್ ಅಕಾಡೆಮಿಯ ಸ್ಟೂಡೆಂಟ್ ಆಗಿರುವ ಪ್ರಣೀತ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ಗೆಲ್ಲುವ ಫೇವರೇಟ್ ಆಟರಾರರಲ್ಲಿ ಒಬ್ಬರು.
2019 ರಲ್ಲಿ ನಡೆದ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಯಿ ಪ್ರಣೀತ್.
1983 ರಲ್ಲಿ ಪ್ರಕಾಶ್ ಪಡುಕೋಣೆ ಅವರು ಪದಕ ಗೆದ್ದ 36 ವರ್ಷಗಳಲ್ಲಿ ನಂತರ ಈ ಪದಕ ಗಳಿಸಿದ ಮೊದಲ ಭಾರತೀಯ ಪುರುಷ ಶಟ್ಲರ್ ಎನಿಸಿಕೊಂಡಿದ್ದಾರೆ.
2010ರ ಬಿಡಬ್ಲ್ಯೂಎಫ್ ಜ್ಯೂನಿಯರ್ ವರ್ಲ್ಡ್ ಚಾಂಪಿಯನಶಿಪ್‌ನಲ್ಲಿ ಸಹ ಕಂಚಿನ ಪದಕವನ್ನು ಗೆದ್ದಿದ್ದಾರೆ.
2019 ರಲ್ಲಿ ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಸಾಯಿ ಪ್ರಣೀತ್ ಅವರಿಗೆ.
2017ರ ಸಿಂಗಪುರ್ ಓಪನ್‌ನ ವಿನ್ನರ್ ಆಗಿ ಹೊರಹೊಮ್ಮಿದ್ದರು 29 ವರ್ಷದ ಈ ಆಟಗಾರ.
ಇಷ್ಟೇ ಅಲ್ಲದೇ 2016ರ ಕೆನಡಿಯನ್ ಓಪನ್ ಹಾಗೂ 2017 ರ ಥೈಲ್ಯಾಂಡ್ ಓಪನ್ ವಿನ್ನರ್ ಆಗಿದ್ದು.
2017ರ ಸೈಯದ್ ಮೋದಿ ಇಂಟರ್‌ನ್ಯಾಷನಲ್‌ನ ಟೂರ್ನಿಮೆಂಟ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು.
ಪತ್ನಿ ಶ್ವೇತಾ ಜಯಂತಿ ಜೊತೆ ಸಾಯಿ ಪ್ರಣೀತ್.