ನಟ ವಿಷ್ಣು ವಿಶಾಲ್ ಜೊತೆ ಸಪ್ತಪದಿ ತುಳಿದ ಬ್ಯಾಡ್ಮಿಂಟನ್ ಸ್ಟಾರ್ ಜ್ವಾಲಾ ಗುಟ್ಟಾ!
ಬ್ಯಾಡ್ಮಿಂಟನ್ ಸ್ಟಾರ್ ಜ್ವಾಲಾ ಗುಟ್ಟಾ ದಕ್ಷಿಣದ ನಟ ವಿಷ್ಣು ವಿಶಾಲ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಇವರ ಮದುವೆ ಪೋಟೋಗಳು ವೈರಲ್ ಅಗಿವೆ. ಈ ಜೋಡಿಗಿದು 2ನೇ ಮದುವೆ. ಈ ಕೊರೋನಾ ಗಲಾಟೆಯಲ್ಲಿ ಇವರಿಬ್ಬರ ಮದುವೆ ಸಂಭ್ರಮ ಹೇಗಿತ್ತು?
ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ತಮಿಳು ನಟ ವಿಷ್ಣು ವಿಶಾಲ್ ಜೊತೆ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಖಾಸಗಿ ಸಮಾರಂಭದಲ್ಲಿ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಸಮ್ಮುಖದಲ್ಲಿ ಈ ಜೋಡಿ ಗುರುವಾರ ಹೈದರಾಬಾದ್‌ನಲ್ಲಿ ಸಪ್ತಪದಿ ತುಳಿಯಿತು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.
ಕಾನೂನು ಪ್ರಕಾರ ಮದುವೆಗೆ ಸಹಿ ಹಾಕುತ್ತಿರುವ ಕಪಲ್.
ಅವರ ಮದುವೆಯ ಫೋಟೋಗಳು ಸಖತ್ ವೈರಲ್ ಆಗಿವೆ.
ತಮ್ಮ ಮದುವೆಯ ಸಂಗೀತ ಸಮಾರಂಭವನ್ನು ಬುಧವಾರ ನಡೆಸಿದರು.
ಜ್ವಲಾ ಹಾಗೂ ವಿಷ್ಣು ಅವರು ರಿಲೆಷನ್‌ಶಿಪ್‌ನಲ್ಲಿದ್ದ ದಿನಗಳಿಂದಲೂ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.
ಈ ಮೊದಲು ವಿಷ್ಣು ವಿಶಾಲ್ 2010ರಲ್ಲಿ ಚಿತ್ರ ನಿರ್ಮಾಪಕಿ ರಜಿನಿ ನಟರಾಜ್ ಅವರನ್ನು ಮದುವೆಯಾಗಿದ್ದು ಒಬ್ಬ ಮಗನಿದ್ದಾನೆ. ಈ ಜೋಡಿ 2018ರಲ್ಲಿ ಡಿವೋರ್ಸ್ ಪಡೆಯಿತು. ಜ್ವಾಲಾ ಗುಟ್ಟಾ ಅವರು ಶಟ್ಲರ್ ಚೇತನ್ ಆನಂದ್ ಅವರನ್ನು ಈ ಮೊದಲು ವರಿಸಿದ್ದರು. 2011ರಲ್ಲಿ ಅವರಿಗೆ ಡಿವೋರ್ಸ್ ನೀಡಿದ್ದರು.