ಚೊಚ್ಚಲ ಭಾಷಣದಲ್ಲೇ ದೇಶದ ಗಮನ ಸೆಳೆದ ಯುವ ಎಂಪಿಗಳಿವರು!

First Published 29, Jun 2019, 1:30 PM IST

ಇದೇ ಮೊದಲ ಬಾರಿಗೆ ಅತಿ ಹೆಚ್ಚು ಯುವ ಮುಖಗಳು ಸಂಸತ್‌ ಪ್ರವೇಶಿಸಿದ್ದಾರೆ. 542 ಸಂಸದರ ಪೈಕಿ ಸುಮಾರು 64 ಎಂಪಿಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಈ ಲೋಕಸಭೆಯ ಮತ್ತೊಂದು ವಿಶೇಷ. ಅದಕ್ಕಿಂತ ಪ್ರಮುಖ ವಿಷಯ ಎಂದರೆ ಈ ಯುವ ಮುಖಗಳು ತಮ್ಮ ಚೊಚ್ಚಲ ಭಾಷಣದಲೇ ಇಡೀ ದೇಶದ ಗಮನ ಸೆಳೆದಿದ್ದಾರೆ. ರಾಜ್ಯದ ಅಗತ್ಯತೆಗಳನ್ನು ಕೇಂದ್ರ ಮುಂದೆ ಪ್ರಸ್ತಾಪಿಸಿ, ತಮ್ಮನ್ನು ಚುನಾಯಿಸಿದ ಮತದಾರರಿಂದ ಶಹಬ್ಬಾಸ್‌ಗಿರಿ ಪಡೆದಿದ್ದಾರೆ. ಆ ಯುವ ಮುಖಗಳ ಕಿರು ಪರಿಚಯ ಇಲ್ಲಿದೆ.

ಸಂಸತ್ತಿನ ಚೊಚ್ಚಲ ಭಾಷಣದಲ್ಲೇ ತಮ್ಮ ವಾಕ್ಚಾತುರ್ಯವನ್ನು ಪ್ರದರ್ಶಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ  ಬ್ಯಾಂಕಿಂಗ್‌ ನೇಮಕಾತಿಯಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕೆಂದು ಲೋಕಸಭೆಯಲ್ಲಿ ಒತ್ತಾಯಿಸಿ ಗಮನ ಸೆಳೆದಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಂಡ್ಯ ಭಾಗದ ರೈತರಿಗೆ ಎರಡು ಟಿಎಂಸಿ ನೀರು ಕೊಡಿ ಎಂದು ಕೇಂದ್ರದ ಬಳಿ ಮನವಿ ಮಾಡಿಕೊಳ್ಳುವ ಮೂಲಕ ರಾಜ್ಯದ ಜನರ ಮನಸ್ಸು ಗೆದ್ದರು.

ಅಮರಾವತಿ ಸಂಸದೆ ನವನೀತ್ ಕೌರ್ ಮಹಾರಾಷ್ಟ್ರಕ್ಕೆ ಬೇರೆ ರಾಜ್ಯಗಳಿಗೆ ನೀಡುವ ಮಹತ್ವ ನೀಡುತ್ತಿಲ್ಲ.  ಅಂಗವಿಕಲರು, ವಿಧವೆಯರು, ವೃದ್ಧರ ಮಾಸಾಶನವನ್ನು  ಕೇಂದ್ರ ಸರ್ಕಾರ 2000 ಕ್ಕೆ ಏರಿಕೆ ಮಾಡಬೇಕು ಎಂದು ಪ್ರಧಾನಿಯವರಲ್ಲಿ ಮನವಿ ಮಾಡಿದರು

ಬಾಸಿರ್‌ಹಟ್ ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ಮೊದಲ ಬಾರಿ ಸಂಸತ್‌ ಪ್ರವೇಶಿಸುವಾಗ ಜೀನ್ಸ್‌ ಧರಿಸಿ ಬಂದು ಟ್ರೋಲ್‌ಗೆ ಒಳಗಾಗಿದ್ದರು.

ಪ.ಬಂ ಜಾಧವಪುರ ಎಂಪಿ ಮಿಮಿ ಚಕ್ರವರ್ತಿ ಪ್ರಮಾಣ ವಚನ ವೇಳೆ ‘ವಂದೇ ಮಾತರಂ’ ಮತ್ತು ‘ಜೈ ಹಿಂದ್‌’ ಎಂದು ಪಠಿಸುವ ಮೂಲಕ ಗಮನ ಸೆಳೆದರು.

ಪಶ್ಚಿಮ ಬಂಗಾಳದ ಕೃಷ್ಣನಗರದ ಟಿಎಂಸಿಯ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಮಾಡಿದ ಚೊಚ್ಚಲ ಭಾಷಣ ದೇಶದ ವಾಸ್ತವ ಪರಿಸ್ಥಿತಿಯನ್ನು ತೆರದಿಟ್ಟಿದ್ದಲ್ಲದೆ, ಎಲ್ಲಡೆ ವೈರಲ್ ಆಗಿದೆ.

ಒಡಿಶಾ ಕೋಂಜಾರ್‌ ಎಂಪಿ ಚಂದ್ರಾಣಿ ಮುರ್ಮು 17ನೇ ಲೋಕಸಭೆಯ ಅತ್ಯಂತ ಕಿರಿಯ ಸಂಸದೆ. ಬಿಜೆಪಿ ಎಂಪಿ ಅನಂತ್‌ ನಾಯಕ ಅವರನ್ನು 67,882 ಮತಗಳ ಅಂತರದಲ್ಲಿ ಮಣಿಸುವ ಮೂಲಕ ಸಂಸತ್‌ ಪ್ರವೇಶಿಸಿದ್ದಾರೆ.

ಕೇರಳ ಅಲ್ತೂರು ಎಂಪಿ ರಮ್ಯಾ ಹರಿದಾಸ್ 48 ವರ್ಷಗಳ ಬಳಿಕ ಕೇರಳದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯ್ಬೊಬ್ಬರು ಲೋಕಸಭೆಗೆ ಪ್ರವೇಶಿಸಿದ್ದು ಕೇರಳ ಕಾಂಗ್ರೆಸ್‌ ಮಟ್ಟಿಗೆ ಒಂದು ಇತಿಹಾಸವೇ.

ಆಂಧ್ರದ ಅರಕು ಎಂಪಿ ಗೊಡ್ಡೆತಿ ಮಾಧವಿ ರಾಜಕೀಯ ಪ್ರವೇಶಕ್ಕೂ ಮುನ್ನ ದೈಹಿಕ ಶಿಕ್ಷಕಿಯಾಗಿ ಕಾರ‍್ಯ ನಿರ್ವಹಿಸುತ್ತಿದ್ದರು. 6 ಬಾರಿ ಸಂಸದರಾಗಿದ್ದ ಕೇಂದ್ರ ಸಚಿವ ಕೃಷ್ಣ ಚಂದ್ರ ದಿಯೋ ಅವರನ್ನು 2,24,098 ಮತಗಳ ಅಂತರದಿಂದ ಸೋಲಿಸಿ ಎಲ್ಲರ ಗಮನ ಸೆಳೆದಿದ್ದಾರೆ.

loader