ಯಪ್ಪಾ ದೇವ್ರೇ... ಪ್ರತಿ ಗಂಟೆಗೆ ಭಾರತದಲ್ಲಿ ಎಷ್ಟು ಜನ ಸಾಯ್ತಾರೆ ಗೊತ್ತಾ?
ಬೆಂಗಳೂರು: ಜಗತ್ತಿನಲ್ಲಿ ಹುಟ್ಟು ಆಕಸ್ಮಿಕವೇ ಆದರೂ ಸಾವು ಖಚಿತ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಭೂಮಿಯ ಮೇಲೆ ಹುಟ್ಟಿದ ಪ್ರತಿ ವ್ಯಕ್ತಿಯೂ ಒಂದಲ್ಲ ಒಂದು ದಿನ ಸಾಯಲೇಬೇಕು. ನಾವಿಂದು ಯಾವ ದೇಶದಲ್ಲಿ ಪ್ರತಿ ಗಂಟೆಗೆ ಅತಿಹೆಚ್ಚು ಮಂದಿ ಕೊನೆಯುಸಿರೆಳೆತ್ತಾರೆ ಎನ್ನುವುದನ್ನು ನೋಡೋಣ ಬನ್ನಿ
1. ಚೀನಾ: 1,221
ಜಗತ್ತಿನ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎನಿಸಿಕೊಂಡಿರುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿ ಪ್ರತಿಗಂಟೆಗೆ ಬರೋಬ್ಬರಿ 1,221 ಮಂದಿ ಸಾವನ್ನಪ್ಪುತ್ತಾರೆ.
2. ಭಾರತ: 1,069
ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಬೃಹತ್ ದೇಶ ಎನಿಸಿಕೊಂಡಿರುವ ಭಾರತದಲ್ಲಿ ಪ್ರತಿಗಂಟೆಗೆ ಸರಾಸರಿ 1069 ಮಂದಿ ಇಹಲೋಕ ತ್ಯಜಿಸುತ್ತಾರೆ. ಈ ಮೂಲಕ ಭಾರತ ಎರಡನೇ ಸ್ಥಾನ ಪಡೆದಿದೆ.
3. ಅಮೆರಿಕ ಸಂಯುಕ್ತ ಸಂಸ್ಥಾನ: 332
ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕದಲ್ಲೂ ಸಾವಿನ ಸಂಖ್ಯೆ ಕಡಿಮೆಯೇನಿಲ್ಲ. ಅಮೆರಿಕ ಸಂಯುಕ್ತಾ ಸಂಸ್ಥಾನದಲ್ಲಿ ಪ್ರತಿಗಂಟೆಗೆ ಸರಾಸರಿ 332 ಜನ ಸಾವನ್ನಪ್ಪುತ್ತಾರೆ.
4. ನೈಜೀರಿಯಾ: 313
ಆಫ್ರಿಕಾದ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದು ಎನಿಸಿಕೊಂಡಿರುವ ನೈಜೀರಿಯಾದಲ್ಲಿ ಪ್ರತಿಗಂಟೆಗೆ ಸರಾಸರಿ 313 ಮಂದಿ ಸಾವನ್ನಪ್ಪುತ್ತಾರೆ> ಈ ಮೂಲಕ ನೈಜೀರಿಯಾ ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.
5. ಇಂಡೋನೇಷ್ಯಾ: 238
17 ಸಾವಿರ ದ್ವೀಪಗಳನ್ನು ಒಳಗೊಂಡಿರುವ ದ್ವೀಪರಾಷ್ಟ್ರ ಇಂಡೋನೇಷ್ಯಾದಲ್ಲಿ ಪ್ರತಿಗಂಟೆಗೆ 238 ಪಂದ್ಯ ಸರಾಸರಿಯಾಗಿ ಸಾವನ್ನಪ್ಪುತ್ತಾರೆ.
6. ರಷ್ಯಾ: 198
ವಿಸ್ತೀರ್ಣದಲ್ಲಿ ಅತಿದೊಡ್ಡ ರಾಷ್ಟ್ರ ಎನಿಸಿಕೊಂಡಿರುವ ರಷ್ಯಾದಲ್ಲಿ ಪ್ರತಿಗಂಟೆಗೆ 198 ಮಂದಿ ಸಾವನ್ನಪ್ಪುತ್ತಾರೆ. ಈ ಮೂಲಕ ರಷ್ಯಾ ಗಂಟೆಗೆ ಅತಿಹೆಚ್ಚು ಸಾವನ್ನಪ್ಪುವ ಮಂದಿಯ ರಾಷ್ಟ್ರಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ.
7. ಪಾಕಿಸ್ತಾನ:
ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಪ್ರತಿಗಂಟೆಗೆ ವಿವಿಧ ಕಾರಣಗಳಿಂದ 181 ಮಂದಿ ಕೊನೆಯುಸಿರೆಳೆಯುತ್ತಾರೆ> ಈ ಮೂಲಕ ಪಾಕಿಸ್ತಾನ ಏಳನೇ ಸ್ಥಾನ ಪಡೆದಿದೆ.
8. ಜಪಾನ್:
ಜಗತ್ತಿನ ಮುಂದುವರೆದ ದೇಶಗಳಲ್ಲಿ ಒಂದು ಎನಿಸಿಕೊಂಡಿರುವ ಜಪಾನ್‌ನಲ್ಲಿ ಪ್ರತಿ ಗಂಟೆಗೆ ಸರಾಸರಿ 180 ಮಂದಿ ಸಾವನ್ನಪ್ಪುತ್ತಾರೆ. ಈ ಮೂಲಕ ಜಪಾನ್ 8ನೇ ಸ್ಥಾನ ಪಡೆದಿದೆ.