'ಉತ್ತರ'ದೊಂದಿಗೆ ಕರುನಾಡು: ಸಂತ್ರಸ್ತರ ಕೈಸೇರಿತು ಕನ್ನಡಿಗರ ಪರಿಹಾರ ಸಾಮಗ್ರಿ...!
ನೊಂದವರ ಕಣ್ಣೀರು ಒರೆಸಲು ಮುಂದಾದ ಸುವರ್ಣನ್ಯೂಸ್- ಕನ್ನಡಪ್ರಭ 'ಉತ್ತರ'ದೊಂದಿಗೆ ಕರುನಾಡು ಎಂಬ ಅಭಿಯಾನವನ್ನು ಆರಂಭಿಸಿತ್ತು. ಈ ಮೂಲಕ ಮಳೆರಾಯನ ಅಬ್ಬರಕ್ಕೆ ತತ್ತರಿಸಿ, ಆಶ್ರಯ ಕಳೆದುಕೊಂಡು ಪರಿಹಾರ ಕೆಂದ್ರ ಸೇರಿರುವ ನಮ್ಮ ನಾಡಿನ ಜನರ ಸಹಾಯಕ್ಕಾಗಿ ಸಾಮಾಗ್ರಿ ನೀಡಲು ಕರೆ ನೀಡಿತ್ತು. ಈ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಪ್ರವಾಹಕ್ಕೆ ನಲುಗಿರುವ ಸಂತ್ರಸ್ತರಿಗೆ ಬೇಕಾದ ನೀರು, ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿ 'ನಿಮ್ಮೊಂದಿಗೆ ನಾವಿದ್ದೇವೆ' ಎಂಬ ಸಂದೇಶ ಸಾರಿದ್ದಾರೆ. ಕನ್ನಡಿಗರ ಈ ಪ್ರೀತಿ, ಅಭಯಕ್ಕೆ ಸಲಾಂ, ನೀವು ನೀಡಿದ ಸಾಮಾಗ್ರಿಗಳು ಸಂತ್ರಸ್ತರ ಕೈ ಸೇರಿವೆ. ಇಲ್ಲಿವೆ ಕೆಲ ಚಿತ್ರಗಳು
'ಉತ್ತರ'ದೊಂದಿಗೆ ಕರುನಾಡು: ನೆರೆ ಸಂತ್ರಸ್ತರೊಂದಿಗೆ ಸುವರ್ಣ ನ್ಯೂಸ್-ಕನ್ನಡಪ್ರಭ ಅಭಿಯಾನ ಆರಂಭ
ಸಂಸತ್ರಸ್ತರ ನೆರವಿಗೆ ಮಿಡಿದ ಹೃದಯ
'ನಾಳೆ ಇದೇ ಪರಿಸ್ಥಿತಿ ನಮಗೆದುರಾಗಬಹುದು, ಆಗ ಅವರೇ ಅಲ್ವೇ ನಮಗೆ ಸಹಾಯ ಮಾಡಬೇಕು?'
’ನಾವೆಲ್ಲಾ ಕನ್ನಡಿಗರು, ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ’
'ಅವರ ಪರಿಸ್ಥಿತಿ ನೋಡಲಾಗ್ತಿಲ್ಲ...., ಹೇಗಾದ್ರೂ ಮಾಡಿ ಈ ಸಾಮಾಗ್ರಿಗಳನ್ನು ತಲುಪಿಸಿ'
'ಬಲಗೈ ಮಾಡಿದ ಸಹಾಯ ಎಡಗೈಗೆ ತಿಳಿಯೋದು ಬೇಡ'
'ಉತ್ತರ'ದೊಂದಿಗೆ ಕರುನಾಡು ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ
ಪ್ರವಾಹ ಸಂತ್ರಸ್ತರಿಗಾಗಿ ಸಾಮಾಗ್ರಿಗಳನ್ನು ಹೊತ್ತು ಹೊರಟ ಮೊದಲ ಕ್ಯಾಂಟರ್
ಕೃಷ್ಣೆಯ ಅಬ್ಬರಕ್ಕೆ ತತ್ತರಿಸಿದ ಬೆಳಗಾವಿ ಮಂದಿ: ಕುಂದಾನಗರಿಯ ಪರಿಹಾರ ಕೇಂದ್ರದತ್ತ ಪಯಣ
ಬೆಳಗಾವಿಯ ಶಾಲೆಯೊಂದರಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಸಾಮಾಗ್ರಿ ವಿತರಣೆ
ಸಾರ್ಥಕವಾದ ಸುವರ್ಣ ಕನ್ನಡಪ್ರಭ ನೆರವು ಕಾರ್ಯಕ್ರಮ. ಬಾಗಲಕೋಟೆ ಜಿಲ್ಲೆಯ ನಂದಗಾವ ಗ್ರಾಮದಲ್ಲಿ ಸಂತ್ರಸ್ತರಿಗೆ ಆಹಾರ ಸಾಮಗ್ರಿ ವಿತರಣೆ ಮಾಡಲಾಯಿತು.
ಕನ್ನಡಪ್ರಭ , ಸುವರ್ಣ ನ್ಯೂಸ್ ಸಂತ್ರಸ್ತರ ನೆರವಿನ ಕರೆಗೆ ಕೊಪ್ಪಳದಲ್ಲಿ ಸ್ಪಂದನೆ. 50 ಸಾವಿರ ರುಪಾಯಿ ಸಾಮಗ್ರಿ ಸಂಗ್ರಹಿಸಿ ನೀಡಿದ ಕೊಪ್ಪಳ ಜೆಸ್ಕಾಂ ನೌಕರರು ಮತ್ತು ಗುತ್ತಿಗೆದಾರರು
ನೆರೆ ಸಂತ್ರಸ್ತರಿಗಾಗಿ ಮಿಡಿದ ದಾವಣಗೆರೆ ಜಿಲ್ಲೆಯ ಜನತೆ
ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿದ ಬೀದರ್ ಜಿಲ್ಲೆಯ ಜನತೆ
ಪ್ರವಾಹ ಸಂತ್ರಸ್ತರ ಕೈ ಸೇರಿತು ನಿಮ್ಮ ಸಹಾಯ
ಕನ್ನಡಿಗರಿಗಾಗಿ ಮಿಡಿದ ಕನ್ನಡಿಗರ ಹೃದಯ, ಮಾನವೀಯತೆ ಮೆರೆದ ನಿಮಗೆ ಕೋಟಿ ಕೋಟಿ ಧನ್ಯವಾದ. ಆತಂಕಪಡಬೇಡ 'ಉತ್ತರ', ನಿಮ್ಮೊಂದಿಗೆ ನಾವಿದ್ದೇವೆ.