ಐಫೋನ್ 17 ಬಿಡುಗಡೆಗೂ ಮೊದಲೇ ಐಫೋನ್ 16 ಬೆಲೆ ಬರೋಬ್ಬರಿ 13,000 ರೂ ಕಡಿತ
ಐಫೋನ್ 17 ಬಿಡುಗಡೆಗೆ ಕೆಲ ತಿಂಗಳು ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ 2024ರಲ್ಲಿ ಬಿಡುಗಡೆಯಾದ ಐಫೋನ್ 16 ಬೆಲೆ ಬರೋಬ್ಬರಿ 13,000 ರೂಪಾಯಿ ಕಡಿತಗೊಂಡಿದೆ.
- FB
- TW
- Linkdin
Follow Us

ಐಫೋನ್ ಬ್ರ್ಯಾಂಡ್‌ಗೆ ಭಾರತ ಸೇರಿದಂತೆ ವಿಶ್ವದಲ್ಲೇ ಭಾರಿ ಬೇಡಿಕೆ ಇದೆ. ಹೆಚ್ಚು ಸುರಕ್ಷತಿ, ಗುಣಮಟ್ಟ ಸೇರಿದಂತೆ ಹಲವು ಕಾರಣಗಳಿಂದ ದುಬಾರಿ ಐಫೋನ್ ಖರೀದಿಸುತ್ತಾರೆ. ಇದೀಗ ಐಫೋನ್ 17 ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಐಫೋನ್ 16 ಅಂದರೆ 2024ರಲ್ಲಿ ಬಿಡುಗಡೆಯಾಗಿ ದಾಖಲೆ ಮಾರಾಟ ಕಂಡಿದ್ದ ಐಫೋನ್ 16 ಬೆಲೆಯಲ್ಲಿ ಭಾರಿ ಕುಸಿತವಾಗಿದೆ.
ಐಪೋನ್ 16 ಖರೀದಿಸಲ ಬಯಸವಲಿರಿಗೆ ಅಮೇಜಾನ್‌ನಲ್ಲಿ ಬರೋಬ್ಬರಿ 13,000 ರೂಪಾಯಿ ಕಡಿತಗೊಂಡಿದೆ. ಅಮೇಜಾನ್ ಭಾರಿ ಡಿಸ್ಕೌಂಟ್ ಮೂಲಕ ಐಫೋನ್ 16 ನೀಡುತ್ತಿದೆ. 79,900 ರೂಪಾಯಿ ಆರಂಭಿಕ ಬೆಲೆಯ ಐಫೋನ್ 16 ಇದೀಗ ಡಿಸ್ಕೌಂಟ್ ಬಳಿಕ 66,500 ರೂಪಾಯಿಗೆ ಇಳಿಕೆಯಾಗಿದೆ. ಅಮೆಜಾನ್ ಎಲ್ಲಾ ಆಫರ್ ಮೂಲಕ ಖರೀದಿಸಿದರೆ ಈ ಆರಂಭಿಕ ಬೆಲೆಯಲ್ಲಿ ಐಫೋನ್ 16 ಲಭ್ಯವಿದೆ.
ಅಮೆಜಾನ್ ಮೂಲಕ ಐಫೋನ್ 16 ಖರೀದಿಸುವವರಿಗೆ ಫ್ಲ್ಯಾಟ್ ಡಿಸ್ಕೌಂಟ್ 6,900 ರೂಪಾಯಿ ಸಿಗಲಿದೆ. ಇದು ಯಾವುದೇ ಷರತ್ತಿಲ್ಲದ ಆಫರ್. ಇನ್ನು ಬ್ಯಾಂಕ್ ಆಫರ್ ಮೂಲಕ ಅಂದರೆ ಅಮೆಜಾನ್ ಪೆ ಐಸಿಐಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಫ್ಲ್ಯಾಟ್ ಡಿಸ್ಕೌಂಟ್ ಜೊತೆಗೆ 2,500 ರೂಪಾಯಿ ಇನ್‌ಸ್ಟಾಂಟ್ ಡಿಸ್ಕೌಂಟ್ ಸಿಗಲಿದೆ. ಇದರ ಜೊತೆಗೆ ಕ್ಯಾಶ್‌ಬ್ಯಾಕ್ ಆಫರ್ ಕೂಡ ಲಭ್ಯವಿದೆ. ಅಮೆಜಾನ್ ಪ್ರೈಂ ಸದಸ್ಯರಿಗೆ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಿದೆ.
ಅಮೇಜಾನ್ ಪ್ರೈಂ ಸದಸ್ಯರಲ್ಲದಿದ್ದರೆ ಶೇಕಡಾ 3 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ. ಈ ಎಲ್ಲಾ ಆಫರ್ ಮೂಲಕ ಐಫೋನ್ 16 (128GB) ಫೋನ್ ಖರೀದಿಸಿದರೆ 66,500 ರೂಪಾಯಿಗೆ ಲಭ್ಯವಿದೆ. ಐಸಿಐಸಿ ಬ್ಯಾಂಕ್, ಎಸ್‌ಬಿಐ ಬ್ಯಾಂಕ್ ಸೇರಿದಂತೆ ಕೆಲ ಬ್ಯಾಂಕ್ 4,000 ರೂಪಾಯಿ ಡಿಸ್ಕೌಂಟ್ ನೀಡುತ್ತಿದೆ.
ಐಫೋನ್ 17 ಲಾಂಚ್‌ಗೆ ಕೆಲ ತಿಂಗಳು ಮಾತ್ರ ಬಾಕಿ. ಐಫೋನ್ 17 ಮೇಲಿನ ನಿರೀಕ್ಷೆಗಳು ಹೆಚ್ಚಾಗಿದೆ. ಕೆಲ ದಿನಗಳಲ್ಲಿ ಐಫೋನ್ 16 ಬೆಲೆ ಮತ್ತಷ್ಟು ಕಡಿತಗೊಳ್ಳಲಿದೆ ಎನ್ನಲಾಗುತ್ತಿದೆ. ಸದ್ಯ ಇಕಾಮರ್ಸ್ ಆಫರ್ ಮೂಲಕ ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿಸಲು ಸಾಧ್ಯವಿದೆ. ಆ್ಯಪಲ್ ಯಾವುದೇ ಬೆಲೆ ಕಡಿತ ಮಾಡಿಲ್ಲ.