Lay’s ಚಿಪ್ಸ್ ಪ್ಯಾಕೆಟ್ ಅರ್ಧ ಖಾಲಿ ಯಾಕೆ? ಒಳಗೆ ಗಾಳಿ ಅಲ್ಲ, ಈ ಅನಿಲ ಇರುತ್ತೆ!
ನಿಮಗೆ ಗೊತ್ತೇ? ಅಂಗಡಿಯಿಂದ Lay’s ಸೇರಿದಂತೆ ಯಾವುದೇ ಚಿಪ್ಸ್ ಪ್ಯಾಕೆಟ್ ಖರೀದಿಸಿದಾಗ ಅದರಲ್ಲಿ ಅರ್ಧದಷ್ಟು ಖಾಲಿ ಜಾಗ ಇರುವುದನ್ನು ನೀವು ಗಮನಿಸಿರಬಹುದು. ಹಾಗಾದರೆ ಕಂಪನಿಗಳು ಪ್ಯಾಕೆಟ್ ಅನ್ನು ಸಂಪೂರ್ಣವಾಗಿ ಚಿಪ್ಸ್‌ನಿಂದ ತುಂಬದೆ ಇಷ್ಟು ಜಾಗವನ್ನು ಏಕೆ ಬಿಡುತ್ತವೆ?

Lay’s
ನಿಮಗೆ ಗೊತ್ತೇ? ಅಂಗಡಿಯಿಂದ Lay’s ಸೇರಿದಂತೆ ಯಾವುದೇ ಚಿಪ್ಸ್ ಪ್ಯಾಕೆಟ್ ಖರೀದಿಸಿದಾಗ ಅದರಲ್ಲಿ ಅರ್ಧದಷ್ಟು ಖಾಲಿ ಜಾಗ ಇರುವುದನ್ನು ನೀವು ಗಮನಿಸಿರಬಹುದು. ಹಾಗಾದರೆ ಕಂಪನಿಗಳು ಪ್ಯಾಕೆಟ್ ಅನ್ನು ಸಂಪೂರ್ಣವಾಗಿ ಚಿಪ್ಸ್‌ನಿಂದ ತುಂಬದೆ ಇಷ್ಟು ಜಾಗವನ್ನು ಏಕೆ ಬಿಡುತ್ತವೆ? ಇದರ ಹಿಂದೆ ಒಂದು ಆಸಕ್ತಿದಾಯಕ ಕಾರಣವಿದೆ.
ಪ್ಯಾಕೆಟ್‌ನಲ್ಲಿ ಸಾಮಾನ್ಯ ಗಾಳಿ ಇರುವುದಿಲ್ಲ!
ಚಿಪ್ಸ್ ಪ್ಯಾಕೆಟ್‌ಗಳನ್ನು ಸಾಮಾನ್ಯ ಗಾಳಿ ಅಥವಾ ಆಮ್ಲಜನಕದಿಂದ ತುಂಬುವುದಿಲ್ಲ. ಬದಲಾಗಿ, ಅವುಗಳಲ್ಲಿ ಸಾರಜನಕ (Nitrogen) ಅನಿಲವನ್ನು ತುಂಬಲಾಗುತ್ತದೆ. ಸಾರಜನಕವು ಸಾಮಾನ್ಯ ಪರಿಸ್ಥಿತಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರದ ಅನಿಲವಾಗಿರುವುದರಿಂದ ಚಿಪ್ಸ್‌ನ ಗುಣಮಟ್ಟವನ್ನು ಕಾಪಾಡಲು ಇದು ಸಹಾಯಕವಾಗುತ್ತದೆ.
ಆಮ್ಲಜನಕ ಇದ್ದರೆ ಏನಾಗುತ್ತೆ?
ಚಿಪ್ಸ್‌ನಲ್ಲಿ ಎಣ್ಣೆ ಇರುವುದರಿಂದ ಪ್ಯಾಕೆಟ್‌ನೊಳಗೆ ಆಮ್ಲಜನಕ ಹೆಚ್ಚಿದ್ದರೆ, ಎಣ್ಣೆ ಆಕ್ಸಿಡೈಸ್ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಚಿಪ್ಸ್‌ನ ರುಚಿ ಮತ್ತು ವಾಸನೆಯಲ್ಲಿ ಬದಲಾವಣೆ ಉಂಟಾಗಬಹುದು. ಹೀಗಾಗಿ ಪ್ಯಾಕೆಟ್‌ನೊಳಗಿನ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡಿ, ಅದರ ಬದಲಿಗೆ ಸಾರಜನಕವನ್ನು ಬಳಸಲಾಗುತ್ತದೆ.
ಚಿಪ್ಸ್ ಫ್ರೆಶ್ ಆಗಿರಲು ಸಾರಜನಕದ ಪಾತ್ರ
ಪ್ಯಾಕೆಟ್‌ನಲ್ಲಿರುವ ಸಾರಜನಕವು ಚಿಪ್ಸ್‌ಗೆ ಒಂದು ರೀತಿಯ ರಕ್ಷಣಾತ್ಮಕ ವಾತಾವರಣವನ್ನು ಒದಗಿಸುತ್ತದೆ. ಇದರಿಂದ ಚಿಪ್ಸ್‌ನ ತಾಜಾತನ, ರುಚಿ ಮತ್ತು ಗುಣಮಟ್ಟವನ್ನು ಕಾಪಾಡಲು ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ, ಪ್ಯಾಕೆಟ್‌ನಲ್ಲಿರುವ ಈ ಹೆಚ್ಚುವರಿ ಜಾಗವು ಚಿಪ್ಸ್ ಸಾಗಣೆ ಮತ್ತು ನಿರ್ವಹಣೆ ಸಂದರ್ಭದಲ್ಲಿ ಅವು ಸುಲಭವಾಗಿ ಪುಡಿಯಾಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ, ಚಿಪ್ಸ್ ಪ್ಯಾಕೆಟ್ ಅರ್ಧ ಖಾಲಿಯಂತೆ ಕಾಣುವುದು ಕಂಪನಿಗಳು ಕಡಿಮೆ ಚಿಪ್ಸ್ ಹಾಕಿರುವುದರಿಂದ ಮಾತ್ರವಲ್ಲ. ಚಿಪ್ಸ್‌ನ ತಾಜಾತನ ಮತ್ತು ರಕ್ಷಣೆಗಾಗಿ ಪ್ಯಾಕೆಟ್‌ನೊಳಗೆ ಸಾರಜನಕವನ್ನು ಬಳಸಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.