ಅಬ್ಬಬ್ಬಾ..ಅಂಬಾನಿ ಫ್ಯಾಮಿಲಿ ಫೇವರಿಟ್ ಹಾಲಿಡೇ ರೆಸಾರ್ಟ್ ಇಷ್ಟೊಂದು ಕಾಸ್ಟ್ಲೀನಾ?
ಅಂಬಾನಿ ಫ್ಯಾಮಿಲಿ ವಾಸಿಸೋ 15000 ಕೋಟಿ ರೂ. ಬೆಲೆಯ ಅಂಟಿಲಿಯಾ ಪ್ರಪಂಚದ ಲಕ್ಸುರಿಯಸ್ ಬಂಗಲೆಗಳಲ್ಲಿ ಒಂದಾಗಿದೆ. ಇದಲ್ಲದೆ ಅಂಬಾನಿ ಕುಟುಂಬದ ನೆಚ್ಚಿನ ಹಾಲಿಡೇ ರೆಸಾರ್ಟ್ ಒಂದಿದೆ. ಇದರ ಒಂದಿನದ ಬಾಡಿಗೆಯಲ್ಲೇ ನೂರಾರು ಬೃಹತ್ ಕಂಪೆನಿಗಳನ್ನು ಕಟ್ಬೋದು.
ಮುಖೇಶ್ ಅಂಬಾನಿ, ನೀತಾ ಅಂಬಾನಿ ಮತ್ತು ಅವರ ಮಕ್ಕಳು ತಮ್ಮ ಅಲ್ಟ್ರಾ ಐಷಾರಾಮಿ ಜೀವನಶೈಲಿ ಮತ್ತು ಅವರ ದುಬಾರಿ ಅಭಿರುಚಿಗೆ ಹೆಸರುವಾಸಿಯಾಗಿದ್ದಾರೆ. 15000 ಕೋಟಿ ರೂ. ಬೆಲೆಯ ಅಂಟಿಲಿಯಾ ಪ್ರಪಂಚದ ಲಕ್ಸುರಿಯಸ್ ಬಂಗಲೆಗಳಲ್ಲಿ ಒಂದಾಗಿದೆ. ಇದಲ್ಲದೆ ಅಂಬಾನಿ ಕುಟುಂಬದ ಅದ್ಧೂರಿ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯುತ್ತವೆ.
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ COVID-19 ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಮಕ್ಕಳೊಂದಿಗೆ ಕುಟುಂಬಗಳನ್ನು ಸುರಕ್ಷಿತವಾಗಿರಿಸಲು ಭಾರತವನ್ನು ತೊರೆಯಲು ನಿರ್ಧರಿಸಿದರು. ಬಿಲಿಯನೇರ್ ಕುಟುಂಬವು ಸ್ವಿಸ್ ಆಲ್ಪ್ಸ್‌ನಲ್ಲಿರುವ ರೆಸಾರ್ಟ್‌ನಲ್ಲಿ ತಂಗಿದ್ದರು. ಅಲ್ಲಿನ ಕೋಣೆಯ ವೈಭೋಗತನ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ.
ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮೂವರು ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ಮತ್ತು ಸಂಗಾತಿ, ಮೊಮ್ಮಕ್ಕಳೊಂದಿಗೆ ಸ್ವಿಸ್ ಆಲ್ಪ್ಸ್‌ನಲ್ಲಿರುವ ಬರ್ಗೆನ್‌ಸ್ಟಾಕ್ ರೆಸಾರ್ಟ್ ಎಂಬ ಅದ್ದೂರಿ ರೆಸಾರ್ಟ್‌ಗೆ ಕರೆದೊಯ್ದರು. ಬಿಲಿಯನೇರ್ ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ಸೆಪ್ಟೆಂಬರ್ 2020 ರಲ್ಲಿ ರೆಸಾರ್ಟ್‌ನಲ್ಲಿ ತಂಗಿತ್ತು.
ಬಿಸಿನೆಸ್ ಇನ್‌ಸೈಡರ್ ಉಲ್ಲೇಖಿಸಿರುವ ಮೂಲಗಳ ಪ್ರಕಾರ, ಪ್ರೆಸಿಡೆನ್ಶಿಯಲ್ ಸೂಟ್‌ನ ಬೆಲೆಯು ಒಂದು ರಾತ್ರಿ USD 28,000 ರಿಂದ ಪ್ರಾರಂಭವಾಗುತ್ತದೆ. ರಾಯಲ್ ಸೂಟ್ ಒಂದು ರಾತ್ರಿ USD 46,000 ದಿಂದ ಪ್ರಾರಂಭವಾಗುತ್ತದೆ, ಅಂದರೆ ಮುಖೇಶ್ ಮತ್ತು ನೀತಾ ಅಂಬಾನಿ ತಮ್ಮ ಸ್ವಿಸ್ ಆಲ್ಪ್ಸ್ ರಿಟ್ರೀಟ್‌ಗೆ ಪ್ರತಿ ರಾತ್ರಿ USD 74,000 ಖರ್ಚು ಮಾಡಿದ್ದಾರೆ. ದಿನಕ್ಕೆ ಸುಮಾರು 61 ಲಕ್ಷ ರೂ.
ಬರ್ಗೆನ್‌ಸ್ಟಾಕ್ ರೆಸಾರ್ಟ್ ಸಾಕಷ್ಟು ಪ್ರಮಾಣದ ವೆಲ್‌ನೆಸ್ ರಿಟ್ರೀಟ್ ಆಯ್ಕೆಗಳು ಮತ್ತು ಪ್ಯಾಕೇಜ್‌ಗಳನ್ನು ಹೊಂದಿದೆ, ಇದು USD 46,000 ರಿಂದ ಪ್ರಾರಂಭವಾಗಿ ಹೋಟೆಲ್‌ನಲ್ಲಿ ರಾತ್ರಿಗೆ 38 ಲಕ್ಷ ರೂ. ಇದು ಬಿಲಿಯನೇರ್ ಅಂಬಾನಿ ಕುಟುಂಬದ ನೆಚ್ಚಿನ ರೆಸಾರ್ಟ್‌ಗಳಲ್ಲಿ ಒಂದಾಗಿದೆ, ಅವರು ಆಗಾಗ್ಗೆ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಈ ಹೋಟೆಲ್ ಟಾಪ್ ಉದ್ಯಮಿಗಳಿಗೆ ಪ್ರಮುಖ ಸ್ಥಳವಾಗಿದೆ. ಸೆಲೆಬ್ರಿಟಿಗಳು ಮತ್ತು ಹಾಲಿವುಡ್ ನಟರನ್ನು ಆಕರ್ಷಿಸಲು 1873ರಲ್ಲಿ ಇದನ್ನು ನಿರ್ಮಿಸಲಾಯಿತು. ಒಂಬತ್ತು ವರ್ಷಗಳ ಸುದೀರ್ಘ ನವೀಕರಣದ ನಂತರ 2017ರಲ್ಲಿ ಇದನ್ನು ಪುನಃ ತೆರೆಯಲಾಯಿತು. 10 ಬಾರ್‌ಗಳು, ಬಹು ರೆಸ್ಟೋರೆಂಟ್‌ಗಳು, ಇನ್-ಹೌಸ್ ಜಕುಝಿಸ್ ಸೇರಿದಂತೆ ಹಲವಾರು ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ.
ಹಾಗೆಯೇ, ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿಯ ಕುಟುಂಬ ವಾಸಿಸೋದು 15000 ಕೋಟಿ ರೂಪಾಯಿಯ ಐಷಾರಾಮಿ ಬಂಗಲೆಯಲ್ಲಿ. ಅಂಟಿಲಿಯಾ ಎಂದು ಕರೆಯಲ್ಪಡುವ ಈ ಮನೆ ಹಲವು ವಿಶೇಷತೆಗಳಿಂದ ಕೂಡಿದೆ. ಇಲ್ಲಿನ ಡೋರ್ ಸೇಫ್ಟಿ, ಮನೆಯೊಳಗಿರುವ ವ್ಯವಸ್ಥೆ, ಸ್ವಿಮ್ಮಿಂಗ್ ಪೂಲ್, ಕೆಲಸಗಾರರ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ.
27 ಅಂತಸ್ತಿನ ಕಟ್ಟಡದಲ್ಲಿ ಮುಕೇಶ್ ಅಂಬಾನಿ ಕುಟುಂವವು ವಾಸಿಸುತ್ತದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ಇದ್ದಾರೆ. ಅಂಬಾನಿ ಮನೆ ಅಂಟಿಲಿಯಾ ಭಾರತದಲ್ಲೇ ಅತೀ ಸೇಫೆಸ್ಟ್ ಬಂಗಲೆ ಎಂದು ಗುರುತಿಸಿಕೊಂಡಿದೆ. ಭೂಕಂಪನವಾದರೂ ಈ ಕಟ್ಟಡ ಅಲುಗಾಡಲು ಸಾಧ್ಯವಿಲ್ಲ. ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿರುವ ಈ ಬಂಗಲೆಯ ಭದ್ರತೆ ಸಹ ಫುಲ್ ಸೆಕ್ಯೂರ್ಡ್ ಆಗಿದೆ.
ಐಷಾರಾಮಿ ಮನೆಯು 173 ಮೀಟರ್ ಎತ್ತರ ಮತ್ತು 37,000 ಚದರ ಮೀಟರ್‌ಗಳಲ್ಲಿ ಹರಡಿಕೊಂಡಿದೆ. ಎತ್ತರದ ಕಟ್ಟಡವು ಬಹು ಅಂತಸ್ತಿನ ಕಾರ್ ಪಾರ್ಕಿಂಗ್, 9 ಹೈ ಸ್ಪೀಡ್ ಎಲಿವೇಟರ್‌ಗಳು ಮತ್ತು ಸಿಬ್ಬಂದಿಗೆ ವಿಶೇಷ ಸೂಟ್‌ಗಳನ್ನು ಹೊಂದಿದೆ. 2012ರಿಂದ ಈವರೆಗೂ ಕೂಡಾ ಈ ಅಂಟಿಲಿಯಾ ಮನೆಯು ತನ್ನ ಐಷಾರಾಮಿ ವ್ಯವಸ್ಥೆಯಿಂದಲೇ ಅತೀ ಜನಪ್ರಿಯವಾಗಿದೆ.