MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • Mysuru pak: ಮೈಸೂರು ಪಾಕಗಿದೆ ರಾಜಮನೆತನದ ರೋಚಕ ಹಿನ್ನೆಲೆ, ಈ ಮೂರು ಪದಾರ್ಥಗಳಿದ್ರೆ ಸಾಕು ಮನೆಯಲ್ಲೇ ತಯಾರಿಸಿ!

Mysuru pak: ಮೈಸೂರು ಪಾಕಗಿದೆ ರಾಜಮನೆತನದ ರೋಚಕ ಹಿನ್ನೆಲೆ, ಈ ಮೂರು ಪದಾರ್ಥಗಳಿದ್ರೆ ಸಾಕು ಮನೆಯಲ್ಲೇ ತಯಾರಿಸಿ!

ಭಾರತದಲ್ಲಿ ಸಿಹಿತಿಂಡಿಗಳಿಗೆ ಕೊರತೆಯೇ ಇಲ್ಲ. ಕೆಲವರಿಗೆ ರಸಗುಲ್ಲಾ ಇಷ್ಟವಾದ್ರೆ, ಮತ್ತೆ ಕೆಲವರಿಗೆ ಜಿಲೇಬಿ ಅಂದ್ರೆ ಜೀವ ಬಿಡ್ತಾರೆ. ಇನ್ನು ಕರ್ನಾಟಕ ಭಾಗದವರಿಗೆ ಮೈಸೂರು ಪಾಕ ಎಂದರೆ ಇಷ್ಟ. ಮೈಸೂರು ಪಾಕ ತಯಾರಿಸುವುದು ಸುಲಭ. ಕೇವಲ ಈ ಮೂರು ಪದಾರ್ಥಗಳಿಂದ ತಯಾರಿಸಬಹುದು!

3 Min read
Author : Ravi Janekal
Published : Oct 18 2026, 11:31 AM IST
Share this Photo Gallery
  • FB
  • TW
  • Linkdin
  • Whatsapp
17
ಭಾರತದ 'ಸಿಹಿ ತಿಂ'ಡಿಗಳ ರಾಜ' ಎಂದು ಯಾವುದನ್ನ ಕರೆಯಲಾಗುತ್ತೆ?
Image Credit : AI

ಭಾರತದ 'ಸಿಹಿ ತಿಂ'ಡಿಗಳ ರಾಜ' ಎಂದು ಯಾವುದನ್ನ ಕರೆಯಲಾಗುತ್ತೆ?

ಭಾರತದಲ್ಲಿ ಸಿಹಿತಿಂಡಿಗಳಿಗೆ ಕೊರತೆಯೇ ಇಲ್ಲ. ಕೆಲವರಿಗೆ ರಸಗುಲ್ಲಾ ಇಷ್ಟವಾದ್ರೆ, ಮತ್ತೆ ಕೆಲವರಿಗೆ ಜಿಲೇಬಿ ಅಂದ್ರೆ ಜೀವ ಬಿಡ್ತಾರೆ. ಇನ್ನು ಕೆಲವರಿಗೆ ಪೇಡಾ ಎಂದ್ರೆ ಊಟೇ ಬೇಡಾ!ಭಾರತದ ಸಿಹಿತಿಂಡಿಗಳು ಹಬ್ಬಗಳಿಗೆ ವಿಶೇಷ ಮೆರುಗು ನೀಡುತ್ತವೆ. ಸಿಹಿತಿಂಡಿಗಳಿಲ್ಲದೆ ಹಬ್ಬಗಳೇ ಇಲ್ಲ. ಸಿಹಿ-ತಿಂಡಿಗೂ ಹಬ್ಬಕ್ಕೂ ಎಂಥದೋ ಬಿಡಿಸಲಾಗದ ನಂಟು. ಭಾರತದಲ್ಲಿ ಮುಕ್ಕೂಟಿ ದೇವರುಗಳಿರುವಂತೆ ಮುಕ್ಕೋಟಿ ಸಿಹಿ ತಿನಿಸುಗಳಿವೆ. ಅವೆಲ್ಲವುಗಳ ಹೊರತಾಗಿಯೂ ದಕ್ಷಿಣ ಭಾರತದಲ್ಲಿ ಅದ್ಭುತವಾಗಿ ರುಚಿಯುಳ್ಳ, ರಾಜಮನೆತನದ ಹಿನ್ನೆಲೆಯುಳ್ಳ ಒಂದು ಸಿಹಿ ತಿನಿಸಿದೆ ಅದನ್ನ 'ಸಿಹಿ ತಿಂಡಿಗಳ ರಾಜ' ಎಂದೇ ಕರೆಯಲಾಗುತ್ತೆ. ಅದು ಯಾವುದು? ಅದರ ಹಿನ್ನೆಲೆ ಏನು ಎಂಬುದು ಇಲ್ಲಿ ವಿವರಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಮೈಸೂರು ಪಾಕ ಹಿನ್ನೆಲೆ ಏನು?
Image Credit : AI

ಮೈಸೂರು ಪಾಕ ಹಿನ್ನೆಲೆ ಏನು?

ನೀವು ದಕ್ಷಿಣ ಭಾರತೀಯರಾಗಿದ್ದರೆ ಅದರಲ್ಲೂ ಕರ್ನಾಟಕದ ಮೈಸೂರು ಭಾಗದವರಾಗಿದ್ದರೆ ಆ ಸಿಹಿತಿಂಡಿಯನ್ನ ಊಹಿಸಿಯೇ ಇರುತ್ತೀರಿ. ಹೌದು ನಾವು ಹೇಳಲು ಹೊರಟಿರುವುದು ಅದೇ ಸಿಹಿತಿಂಡಿಗಳ ರಾಜ ಮೈಸೂರು ಪಾಕ್. ಓಹ್! ಮೈಸೂರಿಗೂ ಪಾಕ್‌ಗೂ ಎತ್ತೆಣಿಂದೆತ್ತ ಸಂಬಂಧವಯ್ಯ ಅನ್ನೋ ಪ್ರಶ್ನೆ ಕಾಡುತ್ತಲ್ಲವ? ಹೌದು ಮೈಸೂರು ಪಾಕಗೂ ಪಾಕಿಸ್ತಾನಕ್ಕೂ ನಂಟಿಲ್ಲ. ಆದರೆ ಬಹುತೇಕರು ಅದನ್ನ ಮೈಸೂರು ಪಾಕ್ ಎಂದೇ ಕರೆಯುವುದರಿಂದಾಗಿಯೇ ಹಿಂಗೊಂದು ತರಲೇ ಪ್ರಶ್ನೆ ಹುಟ್ಟಿಕೊಳ್ಳುತ್ತೆ.

ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಹುಟ್ಟಿ ಇಂದು 'ದಾವಣಗೆರೆ ಬೆಣ್ಣೆ ದೋಸೆ' ಎಂದು ಹೇಗೆ ಜನಪ್ರಿಯವಾಗಿದೆಯೋ ಹಾಗೆಯೇ ಮೈಸೂರು ಪಾಕ ಮೈಸೂರಿನಲ್ಲೇ ಹುಟ್ಟಿಕೊಂಡು ಇಂದು ದೇಶಾದ್ಯಂತ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಸಿಹಿ ತಿಂಡಿ ಮೈಸೂರು ಪಾಕ.

Related Articles

Related image1
Sweet Rename: ಪಾಕ್ ಹೆಸರಿನ ಸಿಹಿ ತಿಂಡಿಗಳಿಗೆ 'ಶ್ರೀ' ಹೆಸರು...ಈಗ ಮೈಸೂರು ಪಾಕ್ ಆಯ್ತು 'ಮೈಸೂರು ಶ್ರೀ'
Related image2
ಮಿಠಾಯಿ ಅಂಗಡಿಗೆ ಹಠಾತ್ ಭೇಟಿ; ಜಾಮೂನು ತಿಂದು ಸ್ಟಾಲಿನ್‌ಗೆ ಮೈಸೂರು ಪಾಕ್ ತಿನ್ನಿಸಿದ ರಾಹುಲ್ ಗಾಂಧಿ!
37
ಮೈಸೂರು ಪಾಕ ಹೇಗೆ ತಯಾರಿಸಲಾಗುತ್ತೆ?
Image Credit : AI

ಮೈಸೂರು ಪಾಕ ಹೇಗೆ ತಯಾರಿಸಲಾಗುತ್ತೆ?

ಈ ವಿಶೇಷ ಸಿಹಿತಿಂಡಿಯನ್ನ ಕೇವಲ ಮೂರು ಪದಾರ್ಥ ಬಳಸಿಕೊಂಡು ತಯಾರಿಸಲಾಗುತ್ತೆ. ಮೈಸೂರು ಪಾಕ್‌ನ ಅತ್ಯಂತ ಆಸಕ್ತಿದಾಯಕ ವಿಷವೆಂದರೆ ಇದನ್ನು ತಯಾರಿಸಲು ಹೆಚ್ಚಿನ ಆಹಾರ ಪದಾರ್ಥಗಳೇ ಬೇಕಿಲ್ಲ. ಕಡಲೆಹಿಟ್ಟು(ಬೇಸನ್), ಸಕ್ಕರೆ, ತುಪ್ಪ.. ಈ ಮೂರು ಮುಖ್ಯವಾಗಿ ಇದ್ದರೆ ಸಾಕು.

ಆದರೆ ಈ ಮೂರು ಪದಾರ್ಥಗಳನ್ನ ಸರಿಯಾದ ಪ್ರಮಾಣದಲ್ಲಿ ಸೇರಿಸುವುದು, ತಯಾರಿಸುವ ವಿಧಾನವೇ ಅದರ ರುಚಿಯನ್ನ ಇತರೆ ಸಿಹಿತಿಂಡಿಗಳಿಗಿಂತ ವಿಶೇಷವಾಗಿಸುತ್ತದೆ. ಕೆಲವು ಬಗೆಯ ಮೈಸೂರು ಪಾಕ್‌ಗಳು ಸ್ವಲ್ಪ ಕ್ರಿಸ್ಪಿಯಾಗಿ, ಉದುರು ಉದುರಾಗಿ ಇರುತ್ತದೆ. ಇನ್ನು ಕೆಲವು ಮೈಸೂರು ಪಾಕ್ ಬಾಯಿಗಿಟ್ಟರೆ ಕರಗಿಹೋಗುವಷ್ಟು ಮೃದುವಾಗಿರುತ್ತದೆ. ಈ ವಿಶಿಷ್ಟ ಗುಣವೇ ಇತರೆ ಸಿಹಿತಿಂಡಿಗಳಿಗಿಂತ ವಿಶಿಷ್ಠವಾಗಿಸುತ್ತದೆ.

47
ಮೈಸೂರು ಪಾಕಗಿದೆ ರಾಜಮನೆತನದ ನಂಟು!
Image Credit : AI

ಮೈಸೂರು ಪಾಕಗಿದೆ ರಾಜಮನೆತನದ ನಂಟು!

ಮೈಸೂರು ಪಾಕ ಹುಟ್ಟಿದ ಬಗ್ಗೆ ಅನೇಕ ಐತಿಹಾಸಿಕ ಕತೆಗಳೇ ಇವೆ. ಅದರ ಇತಿಹಾಸದ ಬಗ್ಗೆ ಜನಪ್ರಿಯ ಕಥೆಯೊಂದಿಗೆ ಅದರ ಪ್ರಕಾರ ಹೇಳುವುದಾದರೆ, ಮೈಸೂರು ಪಾಕ ಮೈಸೂರಿನ ಒಡೆಯರ್ ರಾಜವಂಶದ ರಾಜಮನೆತನದ ಅಡುಗೆ ಮೇನುವಿನ ಮುಖ್ಯವಾದ ಸಿಹಿತಿಂಡಿಯಾಗಿದೆ. ಮೊದಲಿಗೆ ಮೈಸೂರು ಪಾಕವನ್ನು ರಾಜಮನೆತನಕ್ಕಾಗಿ ತಯಾರಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ.

57
ಸಿಹಿತಿಂಡಿಗಳ ರಾಜ ಮೈಸೂರು ಪಾಕ್
Image Credit : AI

ಸಿಹಿತಿಂಡಿಗಳ ರಾಜ ಮೈಸೂರು ಪಾಕ್

ಅರಮನೆಯಲ್ಲಿದ್ದ ಅಡುಗೆಭಟರು ಸಾಮಾನ್ಯ ಅಡುಗೆ ಪದಾರ್ಥಗಳನ್ನು ಪ್ರಯೋಗಿಸಿ ರಾಜಮನೆತನವು ಇಷ್ಟಪಡುವ ಈ ಸಿಹಿತಿಂಡಿ ತಯಾರಿಸಿದ್ದರು. ಇದು ಕ್ರಮೇಣ ಸಿಹಿತಿಂಡಿ ಪರಿಮಳ ಅರಮನೆ ಗೋಡೆಗಳನ್ನು ದಾಟಿ ಹರಡಿತು. ಬಳಿಕ ಇದನ್ನು ಸಾಮಾನ್ಯರು, ಸ್ಥಳೀಯರು ತಯಾರಿಸಲಾರಂಭಿಸಿದರು, ಮೈಸೂರು ಪಾಕ ಅಂಗಡಿಗಳೇ ಆರಂಭವಾದವು. ಇದರ ಜನಪ್ರಿಯತೆ ಹೆಚ್ಚಾಗಿ ಮೈಸೂರು ಪಾಕ್ ಕರ್ನಾಟಕದ ಪಾಕಶಾಲೆಯ ಸಂಪ್ರದಾಯದ ಅವಿಭಾಜ್ಯ ಅಂಗವಾಯಿತು.

67
ಕೇವಲ ಈ ಪದಾರ್ಥಗಳಿಂದ ಮೈಸೂರು ಪಾಕ ತಯಾರಿಸಿ!
Image Credit : AI

ಕೇವಲ ಈ ಪದಾರ್ಥಗಳಿಂದ ಮೈಸೂರು ಪಾಕ ತಯಾರಿಸಿ!

ಕೇವಲ ಮೂರು ಪದಾರ್ಥಗಳಿಂದ ಮೈಸೂರು ಪಾಕ್ ತಯಾರಿಸುವುದು ಸುಲಭ ಅನಿಸಬಹುದು. ಆದ್ರೆ ಆ ಮೂರು ಪದಾರ್ಥಗಳನ್ನ ಸರಿಯಾದ ಪ್ರಮಾಣದಲ್ಲಿ ಸೇರಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಮೈಸೂರು ಪಾಕ ತಯಾರಿಸುವುದು ಒಂದು ಕಲೆ. ಅದರ ರುಚಿ, ಸ್ವಾದ ಮೂರು ಪದಾರ್ಥಗಳನ್ನ ಹೇಗೆ ಸಮಪ್ರಮಾಣದಲ್ಲಿ ಬಳಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಕಡಲೆ ಹಿಟ್ಟು (ಬೇಸನ್), ಸಕ್ಕರೆ ಮತ್ತು ತುಪ್ಪದ ಪ್ರಮಾಣ ಮತ್ತು ಅದನ್ನು ಬೇಯಿಸುವ ಸಮಯವೇ ಈ ಸಿಹಿತಿಂಡಿಯ ಟೆಕ್ಸ್ಚರ್ ಹೇಗಿರಬೇಕು ಎಂಬುದನ್ನು ನಿರ್ಧರಿಸುತ್ತವೆ.

ಸರಿಯಾಗಿ ಮಿಶ್ರಣ ಮಾಡದಿದ್ರೆ ಸಿಹಿತಿಂಡಿಯ ರುಚಿ ಮತ್ತು ಅದರ ರಚನೆ ಎರಡೂ ಮೈಸೂರು ಪಾಕನಂತೆ ಇರುವುದಿಲ್ಲ. ಇದೇ ಕಾರಣಕ್ಕೆ ಅನುಭವಿ ಸಿಹಿತಿಂಡಿ ತಯಾರಕರು ಇದನ್ನು ಮಾಡುವಾಗ ಬಹಳ ಎಚ್ಚರಿಕೆ ವಹಿಸುತ್ತಾರೆ. ಕೆಲವು ಅಂಗಡಿಗಳಲ್ಲಿ ಸಾಂಪ್ರಾದಾಯಿಕ ಆಕಾರದಲ್ಲಿರುವ ತುಂಡು ಮೈಸೂರು ಪಾಕ ಸಿಗುತ್ತವೆ. ಇನ್ನು ಕೆಲವು ಶಾಪ್‌ಗಳಲ್ಲಿ ಬಾಯಲ್ಲಿಟ್ಟರೆ ಕರಗುವಷ್ಟು ಬೆಣ್ಣೆಯಂತೆ ಮೃದುವಾಗಿರುವ ಮೈಸೂರು ಪಾಕವೂ ಸಿಗುತ್ತೆ.

77
ಮೈಸೂರು ಪಾಕ ಹಬ್ಬದಲ್ಲಿ ವಿಶೇಷ ತಿಂಡಿ
Image Credit : AI

ಮೈಸೂರು ಪಾಕ ಹಬ್ಬದಲ್ಲಿ ವಿಶೇಷ ತಿಂಡಿ

ಮೈಸೂರು ಪಾಕ್ ರುಚಿಗಾಗಿ ಮಾತ್ರವಲ್ಲ. ಪ್ರೀತಿಪಾತ್ರರಿಗೆ, ಅತಿಥಿಗಳಿಗೆ, ದಸರಾ ಹಬ್ಬದ ಸಮಯದಲ್ಲಿ ಉದ್ಯೋಗಿಗಳಿಗೆ ಗಿಫ್ಟ್ ಕೊಡುವಾಗಲೂ ಮೈಸೂರು ಪಾಕ ಹೆಚ್ಚು ಕೊಡಲಾಗುತ್ತದೆ. ಹಬ್ಬ, ಮದುವೆ, ಕುಟುಂಬದ ಕಾರ್ಯಕ್ರಮಗಳಲ್ಲಿ ಮೈಸೂರು ಪಾಕಗೆ ಮೊದಲ ಸ್ಥಾನ. ಇದಕ್ಕೆ ಕಾರಣವೆಂದರೆ ಇತರೆ ತಿನಿಸುಗಳಿಗೆ ಹೋಲಿಸಿದರೆ ಇದರ ರುಚಿಯೇ ವಿಶಿಷ್ಟ, ಜೊತೆಗೆ ಸಂಪ್ರಾದಾಯಿಕ ಹಿನ್ನೆಲೆ ಇರೋದ್ರಿಂದ ಮೈಸೂರು ಪಾಕ ಹೆಚ್ಚಾಗಿ ಬಡಿಸಲಾಗುತ್ತೆ.

ಮೈಸೂರು ಪಾಕ್ ಜನಪ್ರಿಯತೆಗೆ ಕಾರಣವೇನು?

ಮೈಸೂರು ಪಾಕ್‌ನ ಜನಪ್ರಿಯತೆಯು ಕೇವಲ ಅದರ ಸಿಹಿಯಿಂದ ಮಾತ್ರವಲ್ಲದೆ, ಅದರ ಶ್ರೀಮಂತ ಪರಂಪರೆ, ಅದನ್ನು ತಯಾರಿಸುವ ಕಲೆ ಮತ್ತು ಅದರ ವಿಶಿಷ್ಟವಾದ ರಚನೆಯಿಂದಲೂ (texture) ಬಂದಿದೆ. ಇನ್ನು ವಿಶೇಷವೆಂದರೆ ಇದನ್ನು ತಯಾರಿಸಲು ಹೆಚ್ಚು ಆಹಾರ ಪದಾರ್ಥಗಳೇ ಬೇಕಿಲ್ಲ. ಕೇವಲ ಮೂರು ನಾಲ್ಕು ಪದಾರ್ಥಗಳಿಂದ ತಯಾರಿಸಿದರೂ ಇದರ ರುಚಿಯು ವಿಶೇಷವಾಗಿರುತ್ತದೆ. ಮೈಸೂರು ಪಾಕ ರಾಜಮನೆತನದ ಅಡುಗೆಮನೆಯಲ್ಲಿ ಹುಟ್ಟಿದ್ದರೂ ಇಂದು ತಲೆಮಾರುಗಳಿಂದಲೂ ರಾಯಲ್ ಆಗಿಯೆ ಉಳಿದಿದೆ. ಅದಕ್ಕೆ ಕಾರಣ ಮೈಸೂರು ಪಾಕನ ವಿಶಿಷ್ಟ ರುಚಿ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಅಡುಗೆಮನೆ ಸಲಹೆಗಳು
ಮೈಸೂರು ದಸರಾ
ಹಬ್ಬ
ಆಹಾರ
 

Latest Videos
Recommended Stories
Recommended image1
ಒಡೆದ ಹಿಮ್ಮಡಿ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು.. ಅಲ್ಲಿ ಇಲ್ಲಿ ಏಕೆ ಹುಡುಕೋದು?
Recommended image2
ದೋಸೆ, ಚಪಾತಿ, ಮುದ್ದೆ, ಅನ್ನಕ್ಕೆ ಹೇಳಿಮಾಡಿಸಿದ 'ಚಿಕನ್ ಸುಕ್ಕ'.. ಮಾಡೋ ಸುಲಭ ವಿಧಾನ ಇಲ್ಲಿದೆ
Recommended image3
Food: ಹೆಚ್ಚು ಮಸಾಲೆ ಬೇಕಾಗಿಲ್ಲ, ಅತ್ಯಂತ ರುಚಿಕರ ಘೀ ರೈಸ್‌ ಮನೆಯಲ್ಲೇ ಮಾಡುವುದು ಹೇಗೆ? ಇಲ್ಲಿದೆ ರೆಸಿಪಿ!
Related Stories
Recommended image1
Sweet Rename: ಪಾಕ್ ಹೆಸರಿನ ಸಿಹಿ ತಿಂಡಿಗಳಿಗೆ 'ಶ್ರೀ' ಹೆಸರು...ಈಗ ಮೈಸೂರು ಪಾಕ್ ಆಯ್ತು 'ಮೈಸೂರು ಶ್ರೀ'
Recommended image2
ಮಿಠಾಯಿ ಅಂಗಡಿಗೆ ಹಠಾತ್ ಭೇಟಿ; ಜಾಮೂನು ತಿಂದು ಸ್ಟಾಲಿನ್‌ಗೆ ಮೈಸೂರು ಪಾಕ್ ತಿನ್ನಿಸಿದ ರಾಹುಲ್ ಗಾಂಧಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved