ಬಾಗಲಕೋಟೆ: ತಾಯಿ ಸೇರಿ ಮನೆ ಮಂದಿಗೆಲ್ಲಾ ಕೊರೋನಾ ಬಂದ್ರೂ ಸಮಾಜ ಸೇವೆ ಬಿಡದ ಯುವಕ
ಬಾಗಲಕೋಟೆ(ಮೇ.20): ಹೆತ್ತ ತಾಯಿ ಸೇರಿ ಮನೆ ಮಂದಿಯೆಲ್ಲಾ ಮಹಾಮಾರಿ ಕೊರೋನಾದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರೆ, ಮನೆ ಮಗ ಕೊರೋನಾ ಪೀಡಿತರ ನೆರವಿಗಾಗಿ ಆಸ್ಪತ್ರೆ ಎದುರೇ ಸಾಮಾಜಿಕ ಸೇವೆಯಲ್ಲಿ ನಿರತರಾಗುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಹೆತ್ತ ತಾಯಿ ಸೇರಿ ಮನೆ ಮಂದಿಯೆಲ್ಲಾ ಕೋವಿಡ್ ಆಗಿ ಆಸ್ಪತ್ರೆ ಸೇರಿದ್ರೂ ಸಾಮಾಜಿಕ ಸೇವೆ ಬಿಡದ ಯುವಕ ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ಕೆ.ರಾಘವೇಂದ್ರ
ಕೊರೋನಾದ ಮಧ್ಯೆ ಜನರ ಸೇವೆ ಮಾಡುತ್ತಾ ಧೈರ್ಯ ತುಂಬುತ್ತಿರುವ ರಾಘವೇಂದ್ರ
ಜಿಲ್ಲೆಯ ಗುಳೇದಗುಡ್ಡ ಬಳಿ 11 ಎಕರೆ ಜಮೀನು ಲೀಜ್ ಪಡೆದು ವ್ಯವಸಾಯ ಮಾಡುತ್ತಿರುವ ಯುವಕ
ಜಮೀನಿನಲ್ಲಿ ಬೆಳೆದ ಎಲ್ಲ ಎಳೆನೀರು ಸೇರಿ ವಿವಿಧ ರೀತಿಯ ಹಣ್ಣು ಹಂಪಲು ಸೇರಿದಂತೆ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡುತ್ತಿರುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿರುವ ರಾಘವೇಂದ್ರ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಕಾರ್ಯಕರ್ತನಾಗಿ ಪಳಗಿರುವ ರಾಘವೇಂದ್ರನಿಂದ ನಿತ್ಯವೂ ನಡೆಯುತ್ತಿದೆ ಸಹಾಯಹಸ್ತ
ಈ ಹಿಂದೆ 7 ವರ್ಷ ದೇಶದ ಸೈನಿಕನಾಗಿಯೂ ಸೇವೆ ಸಲ್ಲಿಸಿ, ಕಾರಣಾಂತರಗಳಿಂದ ಬಿಟ್ಟು ಬಂದು ಕಳೆದ 10 ವರ್ಷಗಳಿಂದ ಸಾಮಾಜಿಕ ಸೇವೆ
ಇದರ ಜೊತೆಗೆ ಉಚಿತ ಸೈನಿಕ ತರಬೇತಿ ಶಾಲೆ ತೆರೆದು ಯುವಕರಿಗೆ ಮಾರ್ಗದರ್ಶನ ಕೂಡ ಮಾಡಿದ ಮಾಡಿರೋ ರಾಘವೇಂದ್ರ
ವಯಸ್ಸು 38 ಆದ್ರೂ ಇನ್ನೂ ಮದುವೆಯಾಗದೇ ಜೀವನದಲ್ಲಿ ಜನರಿಗೆ ಸಹಾಯದಿಂದಲೇ ಏನಾದ್ರೂ ಸಾಧಿಸಬೇಕೆಂಬ ಹಠ ಹೊತ್ತ ಛಲಗಾರ
ಕೊರೋನಾ ವಾರಿಯರ್ಸ್‌ಗಳಿಗೆ, ಕೋವಿಡ್ ರೋಗಿಗಳಿಗೆ ಹಾಗೂ ಅವರ ಸಂಬಂಧಿಗಳಿಗೆ ಸಹಾಯ ಮಾಡುತ್ತಿರುವ ರಾಘವೇಂದ್ರ