MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಯಾದಗಿರಿ ಖಾಸಗಿ ಬಸ್ ಅಗ್ನಿ ದುರಂತ: 20 ಜೀವ ಉಳಿಸಿದ ಆಪದ್ಬಾಂಧವ ಉಮೇಶ್ ಬಿರಾದಾರ್ ಕಥೆ

ಯಾದಗಿರಿ ಖಾಸಗಿ ಬಸ್ ಅಗ್ನಿ ದುರಂತ: 20 ಜೀವ ಉಳಿಸಿದ ಆಪದ್ಬಾಂಧವ ಉಮೇಶ್ ಬಿರಾದಾರ್ ಕಥೆ

ಯಾದಗಿರಿಯಲ್ಲಿ ನಡೆದ ಖಾಸಗಿ ಬಸ್ ಮತ್ತು ಕಾರ್ ನಡುವಿನ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಇದೇ ಬಸ್‌ನಲ್ಲಿದ್ದ ಪ್ರಯಾಣಿಕ ಉಮೇಶ ಬಿರಾದಾರ್, ತಮ್ಮ ಪ್ರಾಣ ಪಣಕ್ಕಿಟ್ಟು ಬಸ್‌ನಲ್ಲಿದ್ದ 20 ಜನರನ್ನು ಹಾಗೂ ಕಾರಿನಲ್ಲಿದ್ದ ಏಕೈಕ ಬಾಲಕನನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

2 Min read
Author : Kannadaprabha News
Published : Apr 19 2026, 12:36 PM IST
Share this Photo Gallery
  • FB
  • TW
  • Linkdin
  • Whatsapp
15
 ಖಾಸಗಿ ಸ್ಲೀಪರ್‌ ಬಸ್‌ ಹಾಗೂ ಕಾರ್ ಅಪಘಾತ
Image Credit : Asianet News

ಖಾಸಗಿ ಸ್ಲೀಪರ್‌ ಬಸ್‌ ಹಾಗೂ ಕಾರ್ ಅಪಘಾತ

ಯಾದಗಿರಿ: ಖಾಸಗಿ ಸ್ಲೀಪರ್‌ ಬಸ್‌ ಹಾಗೂ ಕಾರು ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನೊಳಗಿದ್ದ 10 ಜನರ ಪೈಕಿ, ಒಂದೇ ಕುಟುಂಬದ 9 ಜನರು ದುರ್ಮರಣಕ್ಕೀಡಾಗಿದ್ದಾರೆ. ಈ ವೇಳೆ, ಇಡೀ ದುರಂತದಲ್ಲಿ ಉಳಿದ ಏಕೈಕ ಬಾಲಕ ಸೇರಿದಂತೆ ಬಸ್‌ನೊಳಗಿದ್ದ 20 ಜನರನ್ನು ರಕ್ಷಿಸುವ ಮೂಲಕ ಸಹ ಪ್ರಯಾಣಿಕ ಉಮೇಶ ಬಿರಾದಾರ್‌ ಅವರು ಆಪದ್ಬಾಂಧವರಂತೆ ಕಾರ್ಯ ನಿರ್ವಹಿಸಿದ್ದಾರೆ.

25
ಉಮೇಶ ಬಿರಾದಾರ್‌
Image Credit : Asianet News

ಉಮೇಶ ಬಿರಾದಾರ್‌

ಉಮೇಶ ಬಿರಾದಾರ್‌ ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ಬಸ್‌ನ ಒಳಗಿದ್ದರು. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ ವಿಭಾಗದಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಡಿಯುವ ನೀರು ಪೂರೈಕೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದಿದ್ದ ವಿಶೇಷ ಸಭೆಯಲ್ಲಿ ತಮ್ಮ ಮೇಲಧಿಕಾರಿಗಳ ಜೊತೆ ಪಾಲ್ಗೊಂಡು, ಗುರುವಾರ ಸಂಜೆ ಖಾಸಗಿ ಬಸ್‌ ಮೂಲಕ ಕಲಬುರಗಿಗೆ ಅವರು ಬರುತ್ತಿದ್ದರು.

Related Articles

Related image1
ಎರಡು ಕಾರ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ನಜ್ಜುಗುಜ್ಜು
Related image2
ಕಾರ್‌, ಸರ್ಕಾರಿ ಬಸ್, ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಲಾರಿ: ರಸ್ತೆಯಲ್ಲಿ ಹೆಣಗಳು ಚೆಲ್ಲಾಪಿಲ್ಲಿ
35
 ಜೀವ ರಕ್ಷಿಸಿದ ಆಪತ್ಬಾಂಧವ
Image Credit : Asianet News

ಜೀವ ರಕ್ಷಿಸಿದ ಆಪತ್ಬಾಂಧವ

ಯಾದಗಿರಿಯ ಈ ಭೀಕರ ಅಪಘಾತದಲ್ಲಿ ಪ್ರತ್ಯಕ್ಷದರ್ಶಿಯಷ್ಟೇ ಅಲ್ಲ, ತಮ್ಮದೇ ಜೀವ ಪಣಕ್ಕಿಟ್ಟು ಉಳಿದವರ ಜೀವ ರಕ್ಷಿಸಿದ ಆಪತ್ಬಾಂಧವ. ಅಂದಿನ ಕರಾಳ ಘಟನೆಯ ಬಗ್ಗೆ ತಮ್ಮನ್ನು ಸಂಪರ್ಕಿಸಿದ "ಕನ್ನಡಪ್ರಭ"ದೊಂದಿಗೆ ಅವರು ಮಾತನಾಡಿದ್ದಾರೆ.

45
ಬದುಕುಳಿದ ಏಕೈಕ ಬಾಲಕ
Image Credit : Asianet News

ಬದುಕುಳಿದ ಏಕೈಕ ಬಾಲಕ

ಅಪಘಾತದ ತೀವ್ರತೆಗೆ ನುಜ್ಜುಗುಜ್ಜಾಗಿದ್ದ ಕಾರಿನೊಳಗೆ ಸಿಲುಕಿದವರ ಉಸಿರು ನಿಂತಿರುವ ಲಕ್ಷಣಗಳು ಗೋಚರಿಸಿದ್ದ ಬೆನ್ನಲ್ಲೇ, ಮಗು ಅಳುತ್ತಿರುವ (10 ವರ್ಷದ ವಿರಾಟ್ ಅಪಘಾತದಲ್ಲಿ ಬದುಕುಳಿದ ಏಕೈಕ ಬಾಲಕ) ಶಬ್ದ ಕೇಳಿ, ಹರಸಾಹಸ ಪಟ್ಟು ಸ್ಥಳೀಯರ ನೆರವಿನೊಂದಿಗೆ ಹೊರಗೆ ತೆಗೆದರು. ಅಷ್ಟರಲ್ಲಾಗಲೇ, ಬೆಂಕಿಯ ಕೆನ್ನಾಲಿಗೆಗಳು ಎಲ್ಲೆಡೆ ಆವರಿಸಿಕೊಳ್ಳತೊಡಗಿದಾಗ, ಅಪಾಯ ಲೆಕ್ಕಿಸದೆ ಮಗುವನ್ನು ಎತ್ತಿಕೊಂಡು ಬಂದ ಉಮೇಶ, ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸುವವರೆಗೆ ಜವಾಬ್ದಾರಿ ಹಾಗೂ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ: ಯಾದಗಿರಿ ಬಳಿ ಬಸ್ ಮತ್ತು ಕಾರು ನಡುವೆ ಭಯಾನಕ ಅಪಘಾತ: ಕಾರಲ್ಲಿದ್ದ 6 ಮಂದಿ ಸುಟ್ಟು ಭಸ್ಮ!

55
9 ಮಂದಿಯ ವಿಧಿವಿಧಾನ ಪೂರ್ಣ
Image Credit : Asianet News

9 ಮಂದಿಯ ವಿಧಿವಿಧಾನ ಪೂರ್ಣ

ರಾಯಚೂರು ಜಿಲ್ಲೆ ಪಕ್ಕದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಿಣಿ ಸಮೀಪದ ಶಾಂತಪುರ ಕ್ರಾಸ್‌ ಬಳಿ ಸಂಭವಿಸಿದ ಕಾರು - ಖಾಸಗಿ ಬಸ್ ನಡುವಿನ ಅಪಘಾತದಲ್ಲಿ ಉಂಟಾದ ಬೆಂಕಿಯಿಂದ ಮೃತಪಟ್ಟ ಒಂದೇ ಕುಟುಂಬದ 9 ಜನರ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಭಾವುಕರಾಗಿದ್ದರು. ಕಳೆದ ಮೂರು ದಶಕಗಳಿಂದ ಕೃಷ್ಣ ನಾಯಕ ಅವರ ಒಟನಾಡವಿದ್ದು, ಇಡೀ ಕುಟುಂಬವೇ ಅಪಘಾತದಲ್ಲಿ ಮೃತಪಟ್ಟಿರುವುದು ತೀವ್ರ ನೋವುಂಟು ಮಾಡಿದೆ. ಮೃತರಿಗೆ ಭಗವಂತ ಶಾಂತಿ ಕರುಣಿಸಲಿ, ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಇದನ್ನೂ ಓದಿ: ಯಾದಗಿರಿ: ಚಾಲಕನಿಂದಲೇ ಸರ್ಕಾರಿ ಬಸ್ ಕಳ್ಳತನ! ಕುಡಿದ ಮತ್ತಿನಲ್ಲಿ KKRTC ಬಸ್ ಎಸ್ಕೇಪ್‌ ಮಾಡಿದ ಕಿಲಾಡಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಯಾದಗಿರಿ
ಅಪಘಾತ

Latest Videos
Recommended Stories
Recommended image1
ಸಿಂಧನೂರು: ಗ್ರಾಹಕರಂತೆ ಬಂದ ಬುರ್ಖಾದಾರಿ ಮಹಿಳೆಯರು ಬಟ್ಟೆ ಕದ್ದು ಎಸ್ಕೇಪ್, ಸಿಸಿಟಿವಿಯಲ್ಲಿ ಬಯಲಾಯ್ತು ಕಳ್ಳಿಯರ ಕೈಚಳಕ!
Recommended image2
ಎರಡು ಕಾರ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ನಜ್ಜುಗುಜ್ಜು
Recommended image3
ಕಾರ್‌, ಸರ್ಕಾರಿ ಬಸ್, ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಲಾರಿ: ರಸ್ತೆಯಲ್ಲಿ ಹೆಣಗಳು ಚೆಲ್ಲಾಪಿಲ್ಲಿ
Related Stories
Recommended image1
ಎರಡು ಕಾರ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ನಜ್ಜುಗುಜ್ಜು
Recommended image2
ಕಾರ್‌, ಸರ್ಕಾರಿ ಬಸ್, ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಲಾರಿ: ರಸ್ತೆಯಲ್ಲಿ ಹೆಣಗಳು ಚೆಲ್ಲಾಪಿಲ್ಲಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved