MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Karnataka Districts
• ‘ಶಾರದೆಯಾಗಿಯೇ ಬಾಳಿ, ಅಗತ್ಯ ಬಿದ್ರೆ ಕಾಳಿಯಾಗಿ’: ಮಹಿಳಾ ಸಬಲೀಕರಣದ ಚಿತ್ರ ಸಂದೇಶ ವೈರಲ್‌..!

‘ಶಾರದೆಯಾಗಿಯೇ ಬಾಳಿ, ಅಗತ್ಯ ಬಿದ್ರೆ ಕಾಳಿಯಾಗಿ’: ಮಹಿಳಾ ಸಬಲೀಕರಣದ ಚಿತ್ರ ಸಂದೇಶ ವೈರಲ್‌..!

ಮೂಡುಬಿದಿರೆ(ಅ.31): ತುಳುನಾಡು ಕರಾವಳಿಯಲ್ಲಿ ದಸರಾ, ಮಾರ್ನೆಮಿ ಎಂದರೆ ವೇಷಧಾರಿಗಳ, ಹುಲಿವೇಷಗಳ ಹಿಂಡು, ತಾಸೆ, ಬ್ಯಾಂಡ್‌ ವಾದ್ಯಗಳ ದಂಡು ಹೀಗೆ ಹಬ್ಬದ ಅಬ್ಬರದ ವರ್ಣಮಯ ಕ್ಷಣಗಳು ಸಾಮಾನ್ಯ. ಈ ಬಾರಿ ಕೋವಿಡ್‌ ಕಾರಣಕ್ಕೆ ಎಲ್ಲೆಲ್ಲೂ ಸರಳತೆ ಹೊದ್ದ ವಾತಾವರಣ. ಆದರೇನಂತೆ ನವದುರ್ಗೆಯರ ವೇಷಧಾರಿಗಳಾಗಿಯೇ ಹಲವು ಹಿರಿಯ, ಕಿರಿಯರು ಫೋಟೋ ವೀಡಿಯೋ ಶೂಟಿಂಗ್‌ ನಡೆಸಿ ಕರಾವಳಿಯ ಶಾರದೆ ಸಹಿತ ನವದುರ್ಗೆಯರ ವೇಷ, ಸಂದೇಶಗಳಿಗೆ ದನಿಯಾದದ್ದು, ಸಾಮಾಜಿಕ ಜಾಲತಾಣಗಳ ಮೂಲಕವೇ ಜಗದಗಲ 32 ಸಾವಿರಕ್ಕೂ ಅಧಿಕ ಮಂದಿಯ ಲೈಕ್‌ ಗಿಟ್ಟಿಸಿಕೊಂಡದ್ದು ಈ ಬಾರಿಯ ವಿಶೇಷ.

2 Min read
Kannadaprabha News | Asianet News
Published : Oct 31 2020, 10:00 AM IST
Share this Photo Gallery
• FB
• TW
• Linkdin
• Whatsapp
110

ಈ ಪೈಕಿ ರಥಬೀದಿಯ ಉತ್ಸಾಹೀ ಯುವ ಸಮೂಹವೊಂದು ಶಾರದೆ, ಕಾಳಿಯ ರೂಪದರ್ಶಿಯರ ಫೋಟೋ ಶೂಟ್‌ ನಡೆಸಿ ಶಾರದಾ ವಿಸರ್ಜನೆಯ ಭಾವುಕ ಕ್ಷಣಗಳನ್ನು ಸಚಿತ್ರವಾಗಿ ಕಟ್ಟಿಕೊಡುವ ಜತೆಗೆ ಮಹಿಳಾ ಸಬಲೀಕರಣದ ಸಂದೇಶವನ್ನೂ ಬಿತ್ತರಿಸಿದ್ದು ಈಗ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್‌ ಆಗಿದೆ.

210

ಈ ಬಾರಿ ನವರಾತ್ರಿ ನೀರಸವಾಗಬಾರದು ಎಂದೇ ಶಾರದೆ, ಕಾಳಿಯ ರೂಪದರ್ಶಿಯರ ಫೋಟೋ ಶೂಟ್‌ ನಡೆಸಿ ಸಾಮಾಜಿಕ ಜಾಲತಾಣಕ್ಕೆ ನೀಡಿತ್ತು. ಶಾರದೆಯ ವಿಸರ್ಜನೆಯ ಚಿತ್ರಣವನ್ನೂ ಶ್ರದ್ಧೆಯಿಂದ ಶೂಟ್‌ ಮಾಡಿ ಕ್ಲಿಕ್ಕಿಸಿದ ಚಿತ್ರಗಳು ಭರ್ಜರಿ ಲೈಕ್‌ ಪಡೆದಿರುವುದು ವಿಶೇಷ.

310

ಮಹಿಳೆ ಶಾರದೆಯಂತೆ ಸುಸಂಸ್ಕೃತೆ, ಸುಗುಣ ಸಂಪನ್ನೆ, ವಿದ್ಯಾವಂತೆ, ಸಾತ್ವಿಕತೆಯ ಪ್ರತಿರೂಪವಾಗಿರಬೇಕು. ಆದರೆ ಅಗತ್ಯ ಬಿದ್ದರೆ ಕಾಳಿಯೂ ಆಗಬೇಕು ಎನ್ನುವ ಸಂದೇಶ ದುರ್ಗೆಯ ಈ ಅವಳಿ ರೂಪಗಳ ಆಯ್ಕೆಯ ಹಿಂದಿರುವ ವಿಶೇಷ.

410

ಮಂಗಳೂರಿನ ಪ್ರಿಯಾ ಬಾಳಿಗಾ ಅವರ ಮೇಕಪ್‌ನಲ್ಲಿ ಸ್ಥಳೀಯ ಎಂ.ಕಾಂ. ವಿದ್ಯಾರ್ಥಿನಿ ಶೀತಲ್‌ ನಾಯಕ್‌ ಕಾಳಿಯಾಗಿ, ಸುರತ್ಕಲ್‌ನ ದಂತವೈದ್ಯೆ ಪ್ರೀತಿ ಶೆಣೈ ಅವರು ಪಾತ್ರಗಳಿಗೆ ಚೊಚ್ಚಲ ಪ್ರವೇಶದಲ್ಲೇ ಜೀವ ಭಾವ ತುಂಬಿರುವುದು ಚಿತ್ರಗಳಲ್ಲಿ ಸ್ಪಷ್ಟವಾಗಿದೆ.

510

ಶಾರದಾ ವಿಸರ್ಜನೆಯಲ್ಲಿ ಮಲ್ಲಿಗೆ ಮುಡಿದು ವೀಣೆ ಹಿಡಿದು ಹರಿವ ನೀರಿನೊಳಗೆ ಜಾರಿ ಮುಳುಗು ಹಾಕಿದ ಕಾರಣಕ್ಕಾಗಿಯೇ ಈ ಚಿತ್ರಗಳು ಜನಮನ ತಟ್ಟಿವೆ.

610

ಹೆಬ್ರಿ, ಮಾಳದ ಎಸ್ಟೇಟ್‌ಗಳಲ್ಲಿ ಗಂಟೆಗಟ್ಟಲೆ ಮೇಕಪ್‌ ಮಾಡಿಸಿಕೊಂಡು ಶ್ರದ್ಧೆ, ಬದ್ಧತೆಯಿಂದ ದಣಿವರಿಯದೇ ಓಡಾಡಿ, ಸಮಸ್ಯೆಗಳೆಲ್ಲವನ್ನೂ ಮೆಟ್ಟಿನಿಂತು ಚಿತ್ರಗಳಿಗೆ ಜೀವ ತುಂಬುವಲ್ಲಿ ರೂಪದರ್ಶಿಯರ ಜತೆಗೆ ಟೀಂವರ್ಕ್ ಗೆದ್ದಿದೆ.

710

ಕೆನರಾ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಪ್ರಸಾದ್‌ ಪೈ ಕ್ಯಾಮರಾ ಕಣ್ಣು, ವರುಣ್‌ ಆಚಾರ್ಯ, ಆನುಷ್‌ ಚಂದ್ರ, ರಾಕೇಶ್‌ ಬಾಳಿಗಾ ಅವರ ಚಿತ್ರೀಕರಣ ತಂಡ ಕಟ್ಟಿಕೊಟ್ಟ ದೇವಿಯ ವರ್ಣಾಲಂಕಾರ ಕಾನ್ಸೆಪ್ಟ್‌ ಫೋಟೋಗ್ರಫಿಯ ಹೊಸ ಸಾಧ್ಯತೆಗಳನ್ನು ಅನಾವರಣಗೊಳಿಸಿದೆ.

810

ಇದೇ ಮಾದರಿಯಲ್ಲಿ ಹಲವು ಮಂದಿ ನವದುರ್ಗೆ, ಶಾರದೆಯರ ವೇಷಧಾರಿಗಳಾಗಿ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡದ್ದು ಈ ಬಾರಿಯ ದಸರಾದ ವಿಶೇಷತೆ ಎಂದರೂ ತಪ್ಪಾಗಲಾರದು.

910

ಈ ಫೋಟೋಶೂಟ್‌ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌

1010

ಒಂದು ವಾರದ ಅವಧಿಯಲ್ಲಿ ಮಳೆ, ಹವಾಮಾನ, ಅನಿರೀಕ್ಷಿತ ಸವಾಲುಗಳೆಲ್ಲವನ್ನೂ ಜತೆಯಾಗಿ ಎದುರಿಸಿ ಕಾಳಿ, ಶಾರದೆ ಮಾತ್ರವಲ್ಲ ಶಾರದಾ ವಿಸರ್ಜನೆಯ ಮನೋಜ್ಞ ಚಿತ್ರಣವನ್ನು ಕ್ಯಾಮರಾದ ಮೂಲಕ ಕಟ್ಟಿಕೊಡುವ ಕನಸು ಕೊನೆಗೂ ನನಸಾಗಿದೆ. ನಮ್ಮ ಸಿದ್ಧತೆಗಿಂತ ಪಾತ್ರಧಾರಿಗಳ ಹಾಗೂ ತಂಡದ ಬದ್ಧತೆ ಯಶಸ್ಸಿಗೆ ಕಾರಣವಾಗಿದೆ ಎಂದು ಯುವ ವಿದ್ಯಾರ್ಥಿ ಛಾಯಾಗ್ರಾಹಕ ಪ್ರಸಾದ್‌ ಪೈ ತಿಳಿಸಿದ್ದಾರೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved