ಪೇಜಾವರ ಮಠದ ಉತ್ತರಾಧಿಕಾರಿಯಾದ ಮೊದಲ ಬಾರಿಗೆ ವಿಶ್ವಪ್ರಸನ್ನ ತೀರ್ಥರಿಂದ ಚಾತುರ್ಮಾಸ್ಯ ವ್ರತ
ಉಡುಪಿಯ ಪೇಜಾವರ ಮಠಾಧೀಶರು, ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನ ವಿಶ್ವಸ್ಥರೂ ಆಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ವ್ರತ ಸಂಕಲ್ಪ ಸ್ವೀಕರಿಸಿದರು.ಪೇಜಾವರ ಮಠದ ಉತ್ತರಾಧಿಕಾರಿಯಾದ ಬಳಿಕ ವಿಶ್ವಪ್ರಸನ್ನ ತೀರ್ಥರು ಇದೇ ಮೊದಲ ಬಾರಿಗೆ ಚಾತುರ್ಮಾಸ್ಯ ವ್ರತ ನಡೆಸಿದರು. ಈ ವ್ರತದ ಮಹತ್ವ ಏನು..? ಎನ್ನುವುದನ್ನ ಫೋಟೋಗಳ ಸಮೇತ ತಿಳಿಯಿರಿ.
ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭಾನುವಾರ ಚಾತುರ್ಮಾಸ್ಯ ವ್ರತ ಸಂಕಲ್ಪ ಸ್ವೀಕರಿಸಿದರು.
ಮ್ಮ ಅತ್ಯಂತ ಪ್ರೀತಿಯ ತಾಣವಾಗಿರುವ ನೀಲಾವರ ಗೋಶಾಲೆಯ ಆವರಣದಲ್ಲಿರುವ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವ್ರತ ಆಚರಿಸಿದರು
ಗುರು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಗಲಿದ ನಂತರ ಪೇಜಾವರ ಮಠದ ಉತ್ತರಾಧಿಕಾರಿಯಾಗಿ ಶ್ರೀಗಳು ನಡೆಸಿತ್ತಿರುವ ಪ್ರಥಮ ಚಾತುರ್ಮಾಸ್ಯ ವ್ರತವೂ ಹೌದು.
ಸುಮಾರು 15 ವರ್ಷಗಳ ಹಿಂದೆ ನಿರ್ಮಾಣವಾದ ಸುಮಾರು 1500 ಕ್ಕೂ ಅಧಿಕ ಗೋವುಗಳ ಆಶ್ರಯತಾಣವಾಗಿ ಈ ನೀಲಾವರ ಗೋಶಾಲೆಯಲ್ಲಿ ಶ್ರೀಗಳು ನಡೆಸುತ್ತಿರುವ ಪ್ರಥಮ ಚಾತುರ್ಮಾಸ್ಯ ವ್ರತ ಇದಾಗಿದೆ.
ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಮಠಾದೀಶರು ನಾಲ್ಕು ತಿಂಗಳ ಕಾಲ ಒಂದೆಡೆಯಲ್ಲಿ ನೆಲೆಸಿ, ಆರಾಧನ, ಅಧ್ಯಯನ, ಅಧ್ಯಾಪನ, ಪ್ರವಚನಗಳಲ್ಲಿ ತೊಡಗುತ್ತಾರೆ.
ಈಗ ಅಯೋಧ್ಯೆ ರಾಮಮಂದಿರದ ವಿಶ್ವಸ್ಥ ಮಂಡಳಿಯ ಸದಸ್ಯರೂ ಅಗಿರುವುದರಿಂದ ಶ್ರೀಮಠದ ಆರಾಧ್ಯಮೂರ್ತಿ ಶ್ರೀ ರಾಮ ವಿಠಲ ದೇವರೊಂದಿಗೆ ನೀಲಾವರದಂತಹ ಗ್ರಾಮೀಣ ಭಾಗದಲ್ಲಿ ಚಾತುರ್ಮಾಸ್ಯ ನಡೆಸುತ್ತಿರುವುದು ಆ ಭಾಗದ ಜನತೆಗೆ ಒಂದು ವಿಶೇಷ ಸಂತೋಷಕ್ಕೆ ಕಾರಣವಾಗುತ್ತಿದೆ.
ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ವೃತದ ಸಂಕಲ್ಪವನ್ನು ಮಾಡಿದರು.
ಇನ್ನು ಗೋಶಾಲೆಯಲ್ಲಿ ಶ್ರೀಗಳೇ ಸುಂದರವಾದ ಪುಷ್ಕರಿಣಿಯನ್ನು ನಿರ್ಮಿಸಿ ಅದರ ನಡುವೆ ಕಾಲೀಯಕೃಷ್ಣನ ಸುಂದರ ಗುಡಿ ನಿರ್ಮಾಣ ಮಾಡಿರುವುದರಿಂದ ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನೂ ಶ್ರೀಗಳ ಅಲ್ಲೇ ನಡೆಸುತ್ತಿರುವುದೂ ಆ ಭಾಗದ ಜನತೆಗೆ ಸ್ಮರಣೀಯವೆನಿಸಲಿದೆ.