ಕಲಬುರಗಿ: 'ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ'
ಕಲಬುರಗಿ(ಜು.10): ನಗರದ ಎಂ.ಎಸ್.ಕೆ.ಮಿಲ್- ಅಫಜಲ್ಪುರ ಮುಖ್ಯ ರಸ್ತೆಯಲ್ಲಿ 26.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಣ್ಣಿ ತರಕಾರಿ ಮಾರುಕಟ್ಟೆ ಸಂಕೀರ್ಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು(ಶನಿವಾರ) ಅಡಿಗಲ್ಲು ಹಾಕಿದ್ದಾರೆ.
ಕೆಕೆಆರ್‌ಡಿಬಿ ಮತ್ತು ಕುಡಾ ಸಹಯೋಗದಲ್ಲಿ ನಗರದಲ್ಲಿ ತಲೆ ಎತ್ತಲಿರುವ ನೂತನ ತರಕಾರಿ ಮಾರುಕಟ್ಟೆ
ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ ಕಾಂಗ್ರೆಸ್ ಶಾಸಕ ಎಮ್.ವೈ.ಪಾಟೀಲ್
ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಉಲ್ಲಂಘನೆಯಾಗಿದೆ ಎಂದು ಎಮ್.ವೈ.ಪಾಟೀಲ್ ದೂರು
ಇದು ಮುಖ್ಯಮಂತಿಗಳ ಸರ್ಕಾರಿ ಕಾರ್ಯಕ್ರಮವಿದ್ದರು ಬಿಜೆಪಿ ಕಾರ್ಯಕ್ರಮದಂತಿದೆ: ಪಾಟೀಲ್
ಶಾಸಕರಲ್ಲದವರು ಕೂಡ ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇದಿಕೆ ಮೇಲೆ ಕುರ್ಚಿಯಲ್ಲಿ ಕುಳಿತುಕೊಂಡಿರುವದು ಇದು ಶಿಷ್ಟಾಚಾರ ಉಲ್ಲಂಘನೆಯಲ್ಲದೆ ಮತ್ತೇನು?: ಕಾಂಗ್ರೆಸ್ ಶಾಸಕ ಎಮ್.ವೈ. ಪಾಟೀಲ್ ಪ್ರಶ್ನೆ