ಹದ್ದಿನ ಕಳೇಬರದಲ್ಲಿ ಸೆನ್ಸರ್: ಆತಂಕದಲ್ಲಿ ಜನತೆ
ವಿಜಯಪುರ(ಏ.27): ಕೊರೋನಾ ವೈರಸ್ ಆತಂಕದಲ್ಲಿರುವ ಜಿಲ್ಲೆಯ ಜನರಿಗೆ ಇದೀಗ ಅತ್ಯಾಧುನಿಕ ಸೆನ್ಸಾರ್ ಸಾಧನ ಅಳವಡಿಲಾಗಿದ್ದ ಹದ್ದಿನ ಕಳೇಬರವೊಂದು ಪತ್ತೆಯಾಗಿರುವುದು ಮತ್ತಷ್ಟು ಆತಂಕ ಉಂಟು ಮಾಡಿದೆ. ಬಸವನ ಬಾಗೇವಾಡಿ ತಾಲೂಕಿನ ಯಂಬತ್ನಾಳ ಗ್ರಾಮದಲ್ಲಿರುವ ರೈತ ಚೋಪ್ಲು ಲಮಾಣಿಯವರ ಹೊಲದಲ್ಲಿ ಭಾನುವಾರ ಬೆಳಗ್ಗೆ ಈ ಕಳೇಬರ ಪತ್ತೆಯಾಗಿದೆ. ಆದರೆ ಇದರ ಮೂಲದ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.
ಹದ್ದಿನ ಎರಡೂ ಕಾಲುಗಳಿಗೆ ಹಾಕಲಾಗಿದ್ದ ಕೋಳ
ಹದ್ದಿನ ಕಾಲುಗಳಿಗೆ ಅಳವಡಿಸಿದ ಅತ್ಯಾಧುನಿತ ಸೆನ್ಸಾರ್ ಮಾದರಿಯ ಸಲಕರಣೆ
ಕೇಂದ್ರ, ರಾಜ್ಯ ಸರ್ಕಾರದ ಯಾವುದಾದರೂ ವೈಜ್ಞಾನಿಕ ಸಂಶೋಧನೆ ಕೇಂದ್ರದವರು ಈ ಹದ್ದನ್ನು ಪರೀಕ್ಷೆಗಾಗಿ ಹಾರಿ ಬಿಟ್ಟಿದ್ದಾರಾ? ಈ ಹದ್ದು ಹಾರಿಕೊಂಡು ನಿತ್ರಾಣವಾಗಿ ಬಂದು ಈ ಹೊಲದಲ್ಲಿ ಬಿದ್ದಿದೆಯಾ? ಎಂಬ ಚರ್ಚೆ
ಹದ್ದನ್ನು ಶತ್ರು ರಾಷ್ಟ್ರ ಗೂಢಚರ್ಯೆ ನಡೆಸುವ ಸಲುವಾಗಿ ಇದನ್ನು ಹಾರಿಬಿಟ್ಟಿತ್ತಾ ಎಂಬ ಚರ್ಚೆಗಳೂ ನಡೆಯುತ್ತಿವೆ