ಪ್ರೇಮಿಗಳ ದಿನ : ಠಾಣೆಗೆ ಕರೆಸಿ ಭಜರಂಗದಳದ ಮುಖಂಡಗೆ ಎಚ್ಚರಿಕೆ
ಫೆಬ್ರವರಿ 14 ರಂದು ಪ್ರೇಮಿಗಳ ದಿನ ಆಚರಣೆ ಮಾಡುತ್ತಿದ್ದು ಪ್ರೇಮಿಗಳ ದಿನದ ಹಿನ್ನೆಲೆ ಭಜರಂಗ ದಳದ ಮುಖಂಡನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗಿದೆ.
ಪ್ರೇಮಿಗಳ ದಿನ : ಭಜರಂಗದಳದ ಮುಖಂಡನ ವಿಚಾರಣೆ
ಭಜರಂಗದಳದ ಮಂಗಳೂರು ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ವಿಚಾರಣೆ. ಪ್ರೇಮಿಗಳ ದಿನ ಅಚರಿಸದಂತೆ ಕರೆ ಕೊಟ್ಟಿದ್ದ ಪುನೀತ್ ಅತ್ತಾವರ
ಹೂವಿನ ಅಂಗಡಿ, ಗಿಫ್ಟ್ ಸೆಂಟರ್ ಗಳಿಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಮಾರಾಟ ಮಾಡದಂತೆ ಎಚ್ಚರಿಕೆ ಕೊಟ್ಟಿದ್ದ ಮುಖಂಡ
ಪತ್ರಿಕಾ ಹೇಳಿಕೆ ಮತ್ತು ಸಾಮಾಜಿಕ ತಾಣಗಳಲ್ಲಿ ಎಚ್ಚರಿಕೆ ಕೊಟ್ಟಿದ್ದ ಹಿನ್ನೆಲೆ. ಠಾಣೆಗೆ ಕರೆಸಿ ಪಾಂಡೇಶ್ವರ ಪೊಲೀಸರಿಂದ ಪುನೀತ್ ವಿಚಾರಣೆ
ಬಳಿಕ ಸಿಆರ್ ಪಿಸಿ 107ರನ್ವಯ ಬಾಂಡ್ ಪಡೆದು ಬಿಟ್ಟ ಪೊಲೀಸರು
ಶಾಂತಿ ಕದಡಿ, ಅಹಿತಕರ ಘಟನೆ ನಡೆದರೆ ಪ್ರಕರಣ ದಾಖಲಿಸುವ ಎಚ್ಚರಿಕೆ. ಹಲವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ಕೊಟ್ಟಿರುವ ಮಂಗಳೂರು ಪೊಲೀಸರು
ಪ್ರೇಮಿಗಳ ದಿನಾಚರಣೆ ವಿರೋಧಿಸಿರುವ ಭಜರಂಗದಳ. ಮಂಗಳೂರಿನ ಮಾಲ್, ಬೀಚ್ ಸೇರಿ ಪ್ರವಾಸಿ ಸ್ಥಳಗಳಿಗೆ ನಾಳೆ ಭದ್ರತೆಗೆ ಸೂಚನೆ