ಕೊರೋನಾ ಎಫೆಕ್ಟ್: ಆರ್ಥಿಕ ಸಂಕಷ್ಟದಿಂದ ಪಾರಾಗಲು ಇಡ್ಲಿ ವ್ಯಾಪಾರಿಯಾದ ಶಿಕ್ಷಕ

First Published 19, Aug 2020, 3:42 PM

ಯಾದಗಿರಿ(ಆ.19): ಕೊರೋನಾ ಎಫೆಕ್ಟ್ ಅನೇಕರ ಬದುಕು ಕಸಿದುಕೊಂಡು, ಕೆಲವು ದುರಂತ ಬವಣೆಗಳಿಗೂ ಸಾಕ್ಷಿಯಾಗಿದೆ. ಶಿಕ್ಷಣ, ಉದ್ಯೋಗ, ಕೃಷಿ, ವ್ಯಾಪಾರ, ಮಾರುಕಟ್ಟೆ, ಆರೋಗ್ಯ, ಮುಂತಾದ ಕ್ಷೇತ್ರಗಳಲ್ಲಿ ಭಾರಿ ಹೊಡೆತವೂ ಬಿದ್ದಿದೆ.

ಐದು ತಿಂಗಳ ಹಿಂದಷ್ಟೇ ಪೆನ್ನು ಹಿಡಿದು ಸಾವಿರಾರು ಶಾಲಾ ಮಕ್ಕಳಿಗೆ ಗಣಿತದ ಲೆಕ್ಕ ಬಿಡಿಸಿಕೊಡುತ್ತಿದ್ದ ಶಿಕ್ಷಕ ಹಾಗೂ ಶಿಕ್ಷಣ ಸಂಸ್ಥೆಯ ಮಾಲೀಕರೂ ಆದ ವ್ಯಕ್ತಿಯೊಬ್ಬರು ಇದೀಗ ರಸ್ತೆಯಲ್ಲಿ ಇಡ್ಲಿ ಬಂಡಿ ಶುರುವಿಟ್ಟುಕೊಂಡು, ಆರ್ಥಿಕ ಸಂಕಷ್ಟದಿಂದ ಪಾರಾಗಲು ಹಾಗೂ ಬದುಕಿನ ಹೊಸ ಭರವಸೆಯನ್ನೂ ಕಂಡುಕೊಂಡಿದ್ದಾರೆ. ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪ್ರತಾಪಗಿರಿ ವೆಂಕಟಸುಬ್ಬಯ್ಯ ಶಾಸ್ತ್ರೀ (ಪಿವಿಎಸ್‌) ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹಾಗೂ ಗಣಿತ ಶಿಕ್ಷಕರಾಗಿರುವ ಸಂತೋಷ, ಕೋವಿಡ್‌-19 ಸಂದರ್ಭದಲ್ಲಾದ ಆರ್ಥಿಕ ನಷ್ಟದಿಂದ ಪಾರಾಗಲು ಇದೀಗ ಬೀದಿ ಬದಿಯ ವ್ಯಾಪಾರಕ್ಕಿಳಿದಿದ್ದಾರೆ.

ಅನುದಾನ ರಹಿತ ಪಿವಿಎಸ್‌ ಆಂಗ್ಲ ಮಾಧ್ಯಮ ಪಬ್ಲಿಕ್‌ ಶಾಲೆ ಅಂದರೆ ಈ ಭಾಗದಲ್ಲಿ ಬಡವರ ಶಾಲೆಯೆಂದೇ ಫೇಮಸ್ಸು. 1 ರಿಂದ 5ನೇ ತರಗತಿವರೆಗೆ ಕಳೆದ 15 ವರ್ಷಗಳಿಂದ ಶಾಲೆ ನಡೆಸುತ್ತ ಬಂದಿರುವ ಇವರ ಸಂಸ್ಥೆಯಲ್ಲಿ ಬಡ ಮಕ್ಕಳಿಗೆ ಅತೀ ಕಡಮೆ ವೆಚ್ಚದಲ್ಲಿ ಶಿಕ್ಷಣ ನೀಡುವ ಯತ್ನ ಮಾಡಿದವರು. ಒಮ್ಮೊಮ್ಮೆ, ತಮ್ಮಲ್ಲಿ ಶಿಕ್ಷಣ ಅರಸಿ ಬರುವ ಕಡುಬಡವರಿಗೆ ಉಚಿತವಾಗಿಯೇ ವ್ಯವಸ್ಥೆ ಕಲ್ಪಿಸಿದವರು.

ಕೋವಿಡ್‌-19 ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಿತು. ಆರಂಭದಿಂದಲೂ ‘ವ್ಯಾಪಾರದ‘ ಬದಲು ಶಿಕ್ಷಣದ ಬಗ್ಗೆಯೇ ಮುತುವರ್ಜಿ ವಹಿಸಿದ್ದ ಸಂತೋಷ್‌ ಅವರಿಗೆ ಈ ಸಂದರ್ಭ ಮತ್ತಷ್ಟೂ ಕಷ್ಟಕರವೆನಿಸಿತು. ಮಕ್ಕಳ ಪ್ರವೇಶಾತಿ ವಿಚಾರದಲ್ಲಿ ಸರ್ಕಾರದ ನಿರ್ಧಾರಗಳು ಶಾಲೆ ಶುರು ಮಾಡುವುದೋ ಅಥವಾ ಬಿಡುವುದೋ ಎಂಬ ಗೊಂದಲ ಮೂಡಿಸಿದವು. ಆರ್ಥಿಕ ಸ್ಥಿತಿಗತಿ ಅರಿತ ಅವರು ಬೀದಿಬದಿಯಲ್ಲಿ ಇಡ್ಲಿ, ವಡೆ, ಪೂರಿ ಸಾಗು ವ್ಯಾಪಾರ ಆರಂಭಿಸಿಯೇ ಬಿಟ್ಟರು. ಕೆಂಭಾವಿ ಪಟ್ಟಣದ ಯಡಿಯಾಪೂರ ರಸ್ತೆಯ ಬಳಿ ಪುಟ್ಟದೊಂದು ಮೊಬೈಲ್‌ ಕ್ಯಾಂಟೀನ್‌ ಶುರು ಮಾಡಿ ಬಾಲಾಜಿ ಟಿಫಿನ್ಸ್‌ ಹೆಸರಿಟ್ಟರು. ಗೆಳೆಯರ ಬಳಗ ಇವರಿಗೆ ನೆರವು ಬಂತು. ಆರ್ಥಿಕವಾಗಿ ಹೆಚ್ಚೇನೂ ಗಳಿಸದ ಸಂತೋಷ್‌, ಶಾಲೆಯ ಮಕ್ಕಳನ್ನು ಕರೆತರಲೆಂದೇ ತಂದಿದ್ದ ಟಾಟಾ ಮ್ಯಾಜಿಕ್‌ ವಾಹನ ಇವರಿಗೆ ಮೊಬೈಲ್‌ ಕ್ಯಾಂಟೀನ್‌ ಆಗಿದೆ.

ಇಡ್ಲಿ, ವಡೆ, ಉಪ್ಪಿಟ್ಟು ಮಾರಾಟ ಮಾಡಿದ ಮೇಲೆ ಇದೀಗ ದಿನಕ್ಕೆ ಎರಡು ಸಾವಿರ ರುಪಾಯಿಗಳ ವ್ಯಾಪಾರವಾಗುತ್ತದೆ ಎನ್ನುತ್ತಾರೆ ಸಂತೋಷ್‌. ಕೋವಿಡ್‌-19 ಸಂದರ್ಭದಲ್ಲಿ ಸಂಕಷ್ಟಎದುರಾದರೂ, ಹೊಸ ಪ್ರಯತ್ನದ ಮೂಲಕ ಬದುಕು ಕಟ್ಟಿಕೊಳ್ಳುವಲ್ಲಿ ದಾಪುಗಾಲು ಇಡುತ್ತ, ಸ್ವಾಭಿಮಾನಿ ಬದುಕು ಸಾಗಿಸುತ್ತಿರುವ ಸಂತೋಷ್‌ ಅವರ ಜೀವನ ಅನೇಕರಿಗೆ ಮಾದರಿಯಾಗಲಿ.

ಕೋವಿಡ್‌ ಸಂದರ್ಭ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಕಳೆದ 15 ವರ್ಷಗಳಿಂದ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೆ. ಈಗ ಸಹಜವಾಗಿ ಸಂಕಷ್ಟ ಎದುರಾದಾಗ, ಸ್ನೇಹಿತರ ಸಲಹೆ ಮೇರೆಗೆ ಒಂದೊಳ್ಳೆ ಬದುಕನ್ನು ಕಂಡುಕೊಂಡಿದ್ದೇನೆ ಎಂದು ಮೊಬೈಲ್‌ ಕ್ಯಾಂಟೀನ್‌ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯ ಮಾಲೀಕ ಸಂತೋಷ್‌ ಅವರು ತಿಳಿಸಿದ್ದಾರೆ.

loader