ಗಂಗಾವತಿ: ಕೊರೋನಾ ಭೀತಿ, ಮನೆ ಮನೆಯಲ್ಲಿ ರಾಧೆ ಕೃಷ್ಣಾವತಾರ..!
ಗಂಗಾವತಿ(ಆ.12): ಮಹಾಮಾರಿ ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಕೃಷ್ಣಾಷ್ಟಮಿಯನ್ನು ವಿಶಿಷ್ಟ ರೀತಿಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಸರಳವಾಗಿ ಆಚರಿಸಲಾಗಿದೆ.
ಪ್ರತಿ ವರ್ಷ ಶಾಲೆಗಳಲ್ಲಿ ಶ್ರೀ ಕೃಷ್ಣರಾಧೆಯರ ವೇಷ ಭೂಷಣ ಧರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತಿತ್ತು. ಪ್ರಸ್ತುತ ಕೊವೀಡ್ ಸೋಂಕು ಹರುಡುತ್ತಿರುವ ಹಿನ್ನೆಲೆಯಲ್ಲಿ ಪಾಲಕರು ಮನೆ ಮನೆಯಲ್ಲಿ ಮಕ್ಕಳಿಗೆ ಶ್ರೀಕೃಷ್ಣ ರಾಧೆಯರ ವೇಷ ಭೂಷಣ ಧರಿಸಿ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ.
ರಾಧೆಯ ವೇಷ ಭೂಷಣ ಧರಿಸಿ ಗಮನ ಸೆಳೆದ ತಾಲೂಕಿನ ಕೇಸರಹಟ್ಟಿಯಲ್ಲಿ ಮಲ್ಲಿಕಾರ್ಜುನ ಚೆಕೋಟಿ ಎನ್ನುವರ ಪುತ್ರಿ ಸನ್ನಿಧಿ
ಗಂಗಾವತಿ ನಗರದ ಕರೂಣ ರೂರಲ್ ಡೆವಲಪಮೆಂಟ್ ಸೊಸೈಟಿಯಲ್ಲಿ ವೈಭವ ಪ್ಯಾಟಿ ವಿಜಯ ಯಾದವ ಎನ್ನುವ ಒಂದು ವರ್ಷದ ಮಗುವಿಗೆ ಶ್ರೀಕೃಷ್ಣನ ವೇಷ ಭೂಷಣ ಧರಿಸಲಾಗಿತ್ತು. ಗಂಗಾವತಿಯ ಬಿ.ಕೆ. ರಾಘವೇಂದ್ರ ಎನ್ನುವರ ಪುತ್ರಿ ಸಂಪ್ರಿತ್ ಬಿ.ಕೆ ಎನ್ನುವ ಬಾಲಕ ಕೃಷ್ಣನ ವೇಷ ಗಮನ ಸೆಳೆಯಿತು. ಕೇಸರಹಟ್ಟಿಗ್ರಾಮದ ಶ್ರೀ ಕೃಷ್ಣನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಸರಳ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ನಗರದ ಸತ್ಯನಾರಾಯಣ ಪೇಟೆಯ ಪೇಜಾವರ ಮಠದ ವಿಜಯ ಧ್ವಜ ವಿದ್ಯಾಪೀಠದಲ್ಲಿ ಶ್ರೀಕೃಷ್ಣಾಷ್ಟಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶ್ರೀಕೃಷ್ಣನಿಗೆ ಅಗ್ರ್ಯೆ ಬಿಡುವದರ ಮೂಲಕ ಕೃಷ್ಣನಾಷ್ಟಮಿಯನ್ನು ಆಚರಿಸಿದರು. ವಿವಿಧ ದೇವಸ್ಥಾನಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.