- Home
- Karnataka Districts
- Hubballi: ಸಾರ್ವಕಾಲಿಕ ಆದಾಯ ದಾಖಲಿಸಿದ ನೈಋತ್ಯ ರೈಲ್ವೆ: ಸಾವಿರಾರು ಕೋಟಿಯ ಹೊಸ ಮೈಲಿಗಲ್ಲು
Hubballi: ಸಾರ್ವಕಾಲಿಕ ಆದಾಯ ದಾಖಲಿಸಿದ ನೈಋತ್ಯ ರೈಲ್ವೆ: ಸಾವಿರಾರು ಕೋಟಿಯ ಹೊಸ ಮೈಲಿಗಲ್ಲು
ಹುಬ್ಬಳ್ಳಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ನೈಋತ್ಯ ರೈಲ್ವೆಯು ಪ್ರಸಕ್ತ ಸಾಲಿನಲ್ಲಿ ಗಳಿಸಿದ ಆದಾಯ ಎಷ್ಟು ಎಂಬುದನ್ನು ಘೋಷಿಸಿದೆ. ವಂದೇ ಭಾರತ್ ಸೇರಿದಂತೆ ಹೊಸ ರೈಲುಗಳ ಸೇರ್ಪಡೆ, 'ಕವಚ್' ಸುರಕ್ಷತಾ ವ್ಯವಸ್ಥೆ ಮತ್ತು 'ಮೇರಿ ಸಹೇಲಿ' ಯಂತಹ ಯೋಜನೆಗಳ ಮೂಲಕ ಪ್ರಯಾಣಿಕರ ಅನುಭವವನ್ನು ಸುಧಾರಿಸಿದೆ.

ನೈಋತ್ಯ ರೈಲ್ವೆ
ಹುಬ್ಬಳ್ಳಿ ನಗರದ ಕ್ಲಬ್ ರಸ್ತೆಯಲ್ಲಿರುವ ರೈಲ್ವೆ ಸ್ಪೋರ್ಟ್ಸ್ ಮೈದಾನದಲ್ಲಿ ಸೋಮವಾರ ನೈಋತ್ಯ ರೈಲ್ವೆ ವತಿಯಿಂದ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.
6,939 ಕೋಟಿ ಒಟ್ಟು ಆದಾಯ
ಈ ವೇಳೆ ಮಾತನಾಡಿದ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆಯು ₹6,939 ಕೋಟಿ ಒಟ್ಟು ಆದಾಯ ಗಳಿಸಿದೆ. ಪ್ರಯಾಣಿಕರ ವಿಭಾಗದಲ್ಲಿ ಸಾರ್ವಕಾಲಿಕ ಗರಿಷ್ಠ ಎನಿಸಿದ ₹2,543 ಕೋಟಿ, ಸರಕು ಸಾಗಾಣಿಕೆಯಲ್ಲಿ ಡಿಸೆಂಬರ್ ಅವಧಿವರೆಗಿನ ದಾಖಲೆಯ ₹3,976 ಕೋಟಿ ಆದಾಯ ಹೊಂದಿದೆ ಎಂದರು.
481 ವಿಶೇಷ ರೈಲು ಹಾಗೂ 614 ಹೆಚ್ಚುವರಿ ಬೋಗಿ
ಬೇಡಿಕೆಗೆ ತಕ್ಕಂತೆ 481 ವಿಶೇಷ ರೈಲು ಹಾಗೂ 614 ಹೆಚ್ಚುವರಿ ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆಗಾಗಿ 3,692 ಕಿಮೀ ವ್ಯಾಪ್ತಿಯಲ್ಲಿ 'ಕವಚ್' ಅಳವಡಿಸಲು ಅನುಮೋದನೆ ನೀಡಲಾಗಿದೆ. 2 ವಂದೇ ಭಾರತ್ ಸೇರಿದಂತೆ 10 ಹೊಸ ರೈಲುಗಳ ಸೇವೆ ಆರಂಭಿಸಲಾಗಿದೆ.
164 ನಿಲ್ದಾಣಗಳಲ್ಲಿ 2,179 ಸಿಸಿ ಕ್ಯಾಮೆರಾ
'ಆಪರೇಷನ್ ನನ್ಹೆ ಫರಿಸ್ತೆ' ಅಡಿಯಲ್ಲಿ 487 ಮಕ್ಕಳು ಮತ್ತು 54 ದುರ್ಬಲರನ್ನು ರಕ್ಷಿಸಿದೆ. 'ಮೇರಿ ಸಹೇಲಿ' ಯೋಜನೆಯಡಿ 3.3 ಲಕ್ಷ ಮಹಿಳಾ ಪ್ರಯಾಣಿಕರಿಗೆ ನೆರವು ನೀಡಲಾಗಿದೆ. ನಿಗಾ ವ್ಯವಸ್ಥೆಗಾಗಿ 164 ನಿಲ್ದಾಣಗಳಲ್ಲಿ 2,179 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Indian Railways: ರೈಲಿನಲ್ಲಿ ಬಿಳಿ ಬೆಡ್‌ಶೀಟ್‌ಗಳನ್ನೇ ಯಾಕೆ ಕೊಡ್ತಾರೆ, ಅದರ ಹಿಂದಿನ ರಹಸ್ಯ ಇದೇ..
ಸಾಂಸ್ಕೃತಿಕ ಕಾರ್ಯಕ್ರಮ
ನಂತರ ನಡೆದ ಶ್ವಾನದಳದ ಸಾಹಸ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಗೆದ್ದವು. ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್, ಹುಬ್ಬಳ್ಳಿ ಡಿಆರ್‌ಎಂ ಬೇಲಾ ಮೀನಾ, ಡಾ. ಸಂಜೀಲಾ ಮಾಥುರ್ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕರಾವಳಿ ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ ನೀಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ

