ರಾಜ್ಯದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಜೋರಾಯ್ತು ಅಭಿಯಾನ : ಟ್ವಿಟ್ಟರ್ ವಾರ್
First Published Apr 6, 2021, 11:57 AM IST
ರಾಜ್ಯದಲ್ಲಿ ಮತ್ತೊಂದು ಪ್ರತ್ಯೇಕ ರಾಜ್ಯದ ಕೂಗು ಜೋರಾಗಿದೆ. ತುಳುನಾಡು ಜನರು ತಮ್ಮದೇ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಈಗಾಗಲೇ ಟ್ವಿಟ್ಟರ್ ಅಭಿಯಾನ ಕೂಡ ಆರಂಭವಾಗಿದೆ.
ಬರೋಬ್ಬರಿ 84 ಸಾವಿರಕ್ಕೂ ಅಧಿಕ ಮಂದಿಯಿಂದ ತುಳುರಾಜ್ಯಕ್ಕಾಗಿ ಟ್ವೀಟ್ ಮಾಡಿದ್ದು, ಪ್ರಧಾನಿ, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಸಂಸದರಿಗೆ ಟ್ವೀಟ್ ಮಾಡಿ ಆಗ್ರಹಿಸಲಾಗಿದೆ.

ಕರಾವಳಿಯಲ್ಲಿ ಪ್ರತ್ಯೇಕ ತುಳು ರಾಜ್ಯಕ್ಕಾಗಿ ಟ್ವಿಟ್ಟರ್ ಅಭಿಯಾನ

ದ.ಕ, ಉಡುಪಿ ಮತ್ತು ಕಾಸರಗೋಡು ಸೇರಿಸಿ ತುಳು ರಾಜ್ಯ ಘೋಷಿಸಲು ಆಗ್ರಹ

ಬರೋಬ್ಬರಿ 84 ಸಾವಿರಕ್ಕೂ ಅಧಿಕ ಮಂದಿಯಿಂದ ತುಳುರಾಜ್ಯಕ್ಕಾಗಿ ಟ್ವೀಟ್

ಪ್ರಧಾನಿ, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಸಂಸದರಿಗೆ ಟ್ವೀಟ್ ಮಾಡಿ ಆಗ್ರಹ

ತುಳುವನ್ನು 8ನೇ ಪರಿಚ್ಛೇಧಕ್ಕೆ ಸೇರಿಸುವ ಬೇಡಿಕೆಗೆ ಮನ್ನಣೆ ನೀಡದ ಹಿನ್ನೆಲೆ

ಕೇಂದ್ರ ಮತ್ತು ರಾಜ್ಯ ಸರ್ಕಾರ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆ ಪ್ರತ್ಯೇಕ ತುಳು ರಾಜ್ಯದ ಬೇಡಿಕೆ

ದೇಶದಲ್ಲೇ ತುಳುನಾಡು ಸ್ಟೇಟ್ ಹ್ಯಾಷ್ ಟ್ಯಾಗ್ ನಂಬರ್ 2 ಟ್ರೆಂಡಿಂಗ್

ತುಳುನಾಡು ಪ್ರತ್ಯೇಕ ರಾಜ್ಯ ಘೋಷಣೆ ಬೇಡಿಕೆಗೆ ಹಲವರಿಂದ ವಿರೋಧ

ಹಲವು ನೆಟ್ಟಿಗರಿಂದ ಪ್ರತ್ಯೇಕ ರಾಜ್ಯ ಬೇಡಿಕೆಗೆ ಭಾರೀ ವಿರೋಧ

ಜೋರಾದ ತುಳುನಾಡು ರಾಜ್ಯದ ಬೇಡಿಕೆ

ಕೇಂದ್ರದವರೆಗೂ ಹೋಯ್ತು ಪ್ರತ್ಯೇಕ ರಾಜ್ಯದ ಬೇಡಿಕೆ
