MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಸಿದ್ದಾಪುರ To ಶಿರಸಿ: ಸಾರಿಗೆ ಬಸ್ ವೇಳಾಪಟ್ಟಿ ಬದಲಾವಣೆ, ವಿದ್ಯಾರ್ಥಿಗಳ ಹೋರಾಟದ ಫಲ

ಸಿದ್ದಾಪುರ To ಶಿರಸಿ: ಸಾರಿಗೆ ಬಸ್ ವೇಳಾಪಟ್ಟಿ ಬದಲಾವಣೆ, ವಿದ್ಯಾರ್ಥಿಗಳ ಹೋರಾಟದ ಫಲ

ಸಿದ್ದಾಪುರದಿಂದ ವಾಜಗದ್ದೆ, ನಾಣಿಕಟ್ಟಾ ಮಾರ್ಗವಾಗಿ ಶಿರಸಿಗೆ ಸಂಚರಿಸುವ ಸಾರಿಗೆ ಬಸ್‌ನ ಸಮಯವನ್ನು  ಬದಲಾಯಿಸಲಾಗಿದೆ. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ನಿರಂತರ ಹೋರಾಟದ ಫಲವಾಗಿ ಈ ಬದಲಾವಣೆ ಮಾಡಲಾಗಿದ್ದು, ಇದು ಪ್ರಯಾಣಿಕರ ಬಹುಕಾಲದ ಸಮಸ್ಯೆಗೆ ಪರಿಹಾರ ನೀಡಿದೆ.

1 Min read
Author : Kannadaprabha News
Published : May 14 2026, 07:20 AM IST
Share this Photo Gallery
  • FB
  • TW
  • Linkdin
  • Whatsapp
15
ಸಿದ್ದಾಪುರ To ಶಿರಸಿ
Image Credit : Social Media

ಸಿದ್ದಾಪುರ To ಶಿರಸಿ

ಸಿದ್ದಾಪುರದಿಂದ ವಾಜಗದ್ದೆ, ನಾಣಿಕಟ್ಟಾ ಮಾರ್ಗವಾಗಿ ಶಿರಸಿಗೆ ಸಂಚರಿಸುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಬೆಳಗ್ಗೆ 9.30ಕ್ಕೆ ಇದ್ದ ಸಮಯವನ್ನು 9 ಗಂಟೆಗೆ ಮಾರ್ಪಡಿಸಿ ಸಂಸ್ಥೆ ಅಧಿಕೃತ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ಕಳೆದ ಆರು ವರ್ಷಗಳಿಂದ ಪ್ರಯಾಣಿಕರು ಅನುಭವಿಸುತ್ತಿದ್ದ ತೊಂದರೆಗೆ ಕೊನೆಗೂ ಪರಿಹಾರ ಸಿಕ್ಕಂತಾಗಿದೆ.

Add Asianetnews Kannada as a Preferred SourcegooglePreferred
25
ಸಮಯ ಬದಲಾಗಿದ್ದು ಯಾಕೆ?
Image Credit : Social Media

ಸಮಯ ಬದಲಾಗಿದ್ದು ಯಾಕೆ?

ಸುಮಾರು 20 ವರ್ಷಗಳಿಂದ ಈ ಬಸ್ ಬೆಳಗ್ಗೆ 8.45ಕ್ಕೆ ಸರಿಯಾಗಿ ಸಂಚರಿಸುತ್ತಿತ್ತು. ಆದರೆ, ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಜಾರಿಗೆ ತಂದ ಮಾರ್ಗ ಮತ್ತು ಸಮಯ ಬದಲಾವಣೆಯ ನಿಯಮಗಳಿಂದಾಗಿ, ಈ ಬಸ್ಸಿನ ಸಮಯವನ್ನು 9.30ಕ್ಕೆ ಮುಂದೂಡಲಾಗಿತ್ತು. ಈ ಬದಲಾವಣೆಯಿಂದ ಸಾರ್ವಜನಿಕರಿಗೆ ತೀವ್ರ ಅನನುಕೂಲವಾಗುತ್ತಿತ್ತು.

Related Articles

Related image1
ಯಮಲೋಕಕ್ಕೆ ರಹದಾರಿಯಾದ ಶಿರಸಿ-ಹಾವೇರಿ ರೋಡ್: ಗುತ್ತಿಗೆದಾರರೇ ಕಾರಣ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ
Related image2
ಶಿರಸಿ-ಬಿಸಿಲಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳಿಗೆ ತಾತ್ಕಾಲಿಕ ನಿಷೇಧ; ಪರ್ಯಾಯ ಮಾರ್ಗ ಸೂಚನೆ
35
 ಹೋರಾಟದ ಫಲ
Image Credit : Social Media

ಹೋರಾಟದ ಫಲ

ಅಂದು ಹಿರಿಯ ಅಧಿಕಾರಿಗಳು ಕೆಲವೇ ತಿಂಗಳಲ್ಲಿ ಸಮಯವನ್ನು ಸರಿಪಡಿಸುವ ಭರವಸೆ ನೀಡಿದ್ದರೂ, ಅದು ಜಾರಿಯಾಗಿರಲಿಲ್ಲ. ವರ್ಷಗಟ್ಟಲೆ ಕಳೆದರೂ ಯಾವುದೇ ಸ್ಪಂದನೆ ಸಿಗದ ಕಾರಣ ಸಾರ್ವಜನಿಕರು ಇದರ ಆಸೆಯನ್ನೇ ಕೈಬಿಟ್ಟಿದ್ದರು. ಆದರೆ, ಸಾರ್ವಜನಿಕರ ನಿರಂತರ ಒತ್ತಡ ಮತ್ತು ಹೋರಾಟದ ಫಲವಾಗಿ ಸಾರಿಗೆ ಸಂಸ್ಥೆ ಈಗ ಎಚ್ಚೆತ್ತುಕೊಂಡು ಸಮಯ ಬದಲಾವಣೆ ಮಾಡಿದೆ.

45
ವೇಳಾಪಟ್ಟಿ ಬದಲಾವಣೆ
Image Credit : Social Media

ವೇಳಾಪಟ್ಟಿ ಬದಲಾವಣೆ

ಈ ವೇಳಾಪಟ್ಟಿ ಬದಲಾವಣೆಯು ಈ ಭಾಗದ ಪ್ರಯಾಣಿಕರಲ್ಲಿ ಹರ್ಷ ತಂದಿದೆ. ವಿಶೇಷವಾಗಿ ಸಿದ್ದಾಪುರದಿಂದ ಕೊಲಸಿರ್ಸಿ, ಬಿದ್ರಕಾನ್, ಮುತ್ತಿಗೆ, ಕವಲಕೊಪ್ಪ ಹಾಗೂ ಹಾರ್ಸಿಕಟ್ಟಾ ಕಡೆಗೆ ತೆರಳುವ ಶಿಕ್ಷಕರು ಈವರೆಗೆ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಿತ್ತು. ಬಸ್ 9.30ಕ್ಕೆ ಬಿಡುತ್ತಿದ್ದರಿಂದ ವಾಜಗದ್ದೆ ಭಾಗದ ಜನರಿಗೆ ಶಿರಸಿ ಹಾಗೂ ಸಿದ್ದಾಪುರಕ್ಕೆ ತೆರಳಲು ವಿಳಂಬವಾಗುತ್ತಿತ್ತು. ಈಗ ಸಮಯ ಬದಲಾವಣೆಯಿಂದ ಶಾಲಾ ಮಕ್ಕಳು ಹಾಗೂ ನಾಣಿಕಟ್ಟಾ ಸರ್ಕಾರಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಅನುಕೂಲವಾಗಲಿದೆ.

55
ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಬೇಡಿಕೆಗೆ
Image Credit : Social Media

ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಬೇಡಿಕೆಗೆ

ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ವೇಳಾಪಟ್ಟಿ ಪರಿಷ್ಕರಿಸಿದ ಉತ್ತರ ಕನ್ನಡ ವಿಭಾಗದ ಸಾರಿಗೆ ಅಧಿಕಾರಿಗಳಿಗೆ ಬಿದ್ರಕಾನ್, ಮುತ್ತಿಗೆ, ಹಾರ್ಸಿಕಟ್ಟಾ ಹಾಗೂ ವಾಜಗದ್ದೆ ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಉತ್ತರ ಕನ್ನಡ

Latest Videos
Recommended Stories
Recommended image1
ಶಾಲೆ-ಕಾಲೇಜಿನಲ್ಲಿ ಹಿಜಾಬ್ ನಿಷೇಧ ರದ್ದು, ಕೇಸರಿ ಶಾಲು ಧರಿಸುವಂತಿಲ್ಲ, ಶಿಕ್ಷಣ ಸಚಿವರ ಎಚ್ಚರಿಕೆ ಏನು?
Recommended image2
Karnataka News Live: ಬಂಗಾರಪೇಟೆ: ಮಷಿನ್‌ಗನ್‌ನ 135 ಜೀವಂತ ಬುಲೆಟ್‌ ಪತ್ತೆ
Recommended image3
ಬಾಳೆಹೊನ್ನೂರಿನ ಮಸೀದಿಕೆರೆಯಲ್ಲಿ ಕಡಿದ ಸ್ಥಿತಿಯಲ್ಲಿ ಹಸುವಿನ ತಲೆ ಪತ್ತೆ! ಗೋ ಕಳ್ಳರ ಕೃತ್ಯವೇ? ಹಿಂದೂ ಸಂಘಟನೆಗಳನ್ನು ಬೆದರಿಸುವ ತಂತ್ರವೇ?
Related Stories
Recommended image1
ಯಮಲೋಕಕ್ಕೆ ರಹದಾರಿಯಾದ ಶಿರಸಿ-ಹಾವೇರಿ ರೋಡ್: ಗುತ್ತಿಗೆದಾರರೇ ಕಾರಣ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ
Recommended image2
ಶಿರಸಿ-ಬಿಸಿಲಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳಿಗೆ ತಾತ್ಕಾಲಿಕ ನಿಷೇಧ; ಪರ್ಯಾಯ ಮಾರ್ಗ ಸೂಚನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved