Puneeth Rajkumar| ಅಪ್ಪು ನೆನೆದು ಭಾವುಕರಾದ ರಮೇಶ್ ಜಾರಕಿಹೊಳಿ
ಬೆಳಗಾವಿ(ನ.14): ಪವರ್‌ಸ್ಟಾರ್(Powestar) ಪುನೀತ್ ರಾಜಕುಮಾರ್(Puneeth Rajkumar) ನೆನೆದು ಮಾಜಿ ಸಚಿವ ರಮೇಶ್ ಜಾರಕಿಹೊಳಿ(Ramesh Jarkiholi) ಅವರು ಭಾವುಕರಾದ ಘಟನೆ ಬೆಳಗಾವಿ(Belagavi) ತಾಲೂಕಿನ ಹುದಲಿ ಗ್ರಾಮದ ಕಾರ್ಯಕ್ರಮದಲ್ಲಿ ನಿನ್ನೆ(ಶನಿವಾರ) ನಡೆದಿದೆ.
ಶಿವರಾಜಕುಮಾರ್(Shivarajkumar) ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ(Fans) ಸಂಘದಿಂದ ಹುದಲಿ ಗ್ರಾಮದಲ್ಲಿ ಆಯೋಜಿಸಿದ್ದ ಅಪ್ಪುಗೆ ನುಡಿ ಗೀತನಮನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ
ಪುನೀತ್ ರಾಜಕುಮಾರ್ ಇಷ್ಟು ಸಣ್ಣ ವಯಸ್ಸಿನಲ್ಲಿ ನಮ್ಮನ್ನ ಅಗಲಿದ್ದಾರೆಂದ್ರೆ(Death) ನಂಬೋಕ್ಕೆ ಸಾಧ್ಯವಿಲ್ಲ. ಇಷ್ಟು ಸಣ್ಣ ವಯಸ್ಸಿನಲ್ಲಿ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ. ಇದರಿಂದ ನಮ್ಮ ಚಿತ್ರರಂಗ(Sandalwood) ಬಡವವಾಗಿದೆ. ಸೂರ್ಯಚಂದ್ರ ಇರೋವರೆಗೂ ಅಪ್ಪು ನೆನಪು ಸದಾಕಾಲ ಇರುತ್ತದೆ ಅಂತ ಹೇಳಿದ ರಮೇಶ್ ಜಾರಕಿಹೊಳಿ
ಡಾ.ರಾಜಕುಮಾರ್(Dr Rajkumar) ಅವರ ಮನೆತನದಲ್ಲೇ ಪುನೀತ್ ರಾಜಕುಮಾರ್ ಬಹಳ ಒಳ್ಳೆಯ ಹುಡುಗ. ಪುನೀತ್ ರಾಜಕುಮಾರ್ ಹಿರಿಯರಿಗೆ ತುಂಬಾ ಗೌರವಿಸುತ್ತಿದ್ದರು ಅಂತ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
1992 ರ ಡಿಸೆಂಬರ್ 6ರಂದು ಗೋಕಾಕ್‌ನ(Gokak) ನಮ್ಮ ನಿವಾಸಕ್ಕೆ ರಾಜಕುಮಾರ್ ಇಡೀ ಕುಟುಂಬ(Rajkumar Family) ಬಂದಿತ್ತು. ಆಗ ಪುನೀತ್ ರಾಜಕುಮಾರ್‌ಗೆ 16 ರಿಂದ 17 ವಯಸ್ಸಿರಬೇಕು. ನಮ್ಮ ತಂದೆ ತಾಯಿ ಕಾಲಿಗೆ ಹಣೆ ಹಚ್ಚಿ ನಮಸ್ಕಾರ ಮಾಡಿದ್ದರು. ಪುನೀತ್ ರಾಜಕುಮಾರ್ ಬಗ್ಗೆ ಮಾತನಾಡಬೇಕಂದ್ರೆ ತುಂಬಾ ದುಃಖ ಆಗುತ್ತದೆ. ಪುನೀತ್ ರಾಜಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ ಅಂತ ರಮೇಶ್ ಜಾರಕಿಹೊಳಿ ಅಪ್ಪು ಜೊತೆಗಿನ ನೆನಪುಗಳನ್ನ ಸ್ಮರಿಸಿಕೊಂಡಿದ್ದಾರೆ.
ಅಪ್ಪುಗೆ ನುಡಿ ಗೀತನಮನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಕಿತ್ತೂರು ಕಲ್ಮಠದ ಸ್ವಾಮೀಜಿ(Kitturu Kalmath Swamiji), ಲಖನ್ ಜಾರಕಿಹೊಳಿ(Lakhan Jarkiholi) ಸೇರಿ ಹಲವರು ನಾಯಕರು ಉಪಸ್ಥಿತಿ ವಹಿಸಿದ್ದರು.