- Home
- Karnataka Districts
- ರಾಯಚೂರು: ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಕಾರು ಚಲಾಯಿಸಿ ಡಿವೈಡರ್ ಡಿಕ್ಕಿ; 'ಕಣ್ಣು ಮಂಜಾಗಿ' ಹತ್ತಿಸಿದ ಎಂದ ಭೂಪ!
ರಾಯಚೂರು: ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಕಾರು ಚಲಾಯಿಸಿ ಡಿವೈಡರ್ ಡಿಕ್ಕಿ; 'ಕಣ್ಣು ಮಂಜಾಗಿ' ಹತ್ತಿಸಿದ ಎಂದ ಭೂಪ!
ರಾಯಚೂರು ನಗರದಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಯರ್ರಾಬಿರ್ರಿ ಕಾರು ಚಾಲಯಿಸಿ ಡಿವೈಡರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರ ವಿಚಾರಣೆ ವೇಳೆ ‘ಕಣ್ಣು ಮಂಜಾಗಿ’ ಹತ್ತಿಸಿದೆ ಸಾರ್ ಎಂದಿರುವ ಭೂಪನಿಗೆ ಏನು ಹೇಳಬೇಕು?

ರಾಯಚೂರು: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅವಾಂತರ
ಕಂಠಪೂರ್ತಿ ಕುಡಿದು ಯರ್ರಾಬಿರ್ರಿ ಕಾರು ಚಲಾಯಿಸಿದ ಕುಡುಕನೋರ್ವ ಅವಾಂತರ ಸೃಷ್ಟಿಸಿದ್ದಾನೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬಿಟ್ಟು ಡಿವೈಡರ್ ಮೇಲೆ ಹತ್ತಿ ಹೊಡೆದ ಘಟನೆ ರಾಯಚೂರು ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ನಡೆದಿದೆ.
ಡಿವೈಡರ್ ಬಳಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು
ಡಿವೈಡರ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದುಬಿದ್ದಿದೆ, ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಇಷ್ಟಾದರೂ ಅದೃಷ್ಟವಶಾತ್ ಕಾರು ಚಾಲಕ ಪವಾಡ ಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತಪ್ಪಿದ ದುರಂತ
ಕಾರು ಡಿಕ್ಕಿಯಾದ ರಭವಸಕ್ಕೆ ದೊಡ್ಡ ಅನಾಹುತವೇ ಆಗುತ್ತಿತ್ತು. ಅದೃಷ್ಟವಶಾಂತ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಡಿಕ್ಕಿ ಹೊಡೆದ ತಕ್ಷಣಕ್ಕೆ ಸ್ಥಳೀಯರು ತಕ್ಷಣ ಸಹಾಯಕ್ಕೆ ದಾವಿಸಿ ಬಂದರು.
ಕಣ್ಣು ಮಂಜಾಗಿ ಕಾರು ಡಿವೈಡರ್ ಮೇಲೆ ಹತ್ತಿಸಿದೆ ಎಂದ ಭೂಪ!
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸಿದರು. ಈ ವೇಳೆ ಚಾಲಕ ಶ್ರೀನಿವಾಸ ಗೌಡ ಎಂಬಾತನ ವಿಚಾರಿಸಿದಾಗ 'ಕಣ್ಣು ಮಂಜಾಗಿ ಡಿವೈಡರ್ ಮೇಲೆ ಕಾರು ಹತ್ತಿಸಿದ್ದೇನೆ' ಎಂದು ಹೇಳಿದ್ದಾನೆ! ಕುಡಿದು ಕಾರು ಚಲಾಯಿಸಿದರೆ ಕಣ್ಣು ಮಂಜಾಗದೆ ಇನ್ನೇನಾಗುತ್ತೆ? ಎಂದ ಪೊಲೀಸರು.
ಮದ್ಯಪಾನವೇ ಅಪಘಾತಕ್ಕೆ ಕಾರಣ
ಘಟನೆ ಸಂಬಂಧ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂಬುದು ತಿಳಿದುಬಂದಿದೆ.

