ಮಾತೆ ಮಾಣಿಕೇಶ್ವರಿ ಅಮ್ಮನವರ ಕೈಲಾಸ ಯಾತ್ರೆಯ ಕೆಲ ಫೋಟೋಸ್
ಕಲಬುರಗಿ(ಮಾ.10): ಕಲ್ಯಾಣ ಕರ್ನಾಟಕ ಭಾಗದ ನಡೆದಾಡುವ ದೇವತೆಯಾಗಿ ಭಕ್ತರ ಮನಸೂರೆಗೊಂಡಿದ್ದ ಮಾತಾಜಿ ಮಾಣಿಕೇಶ್ವರಿ ಅಮ್ಮ ಸೋಮವಾರ ಲಿಂಗದಲ್ಲಿ ಲೀನರಾಗಿದ್ದಾರೆ. ಮಾತಾ ಮಾಣಿಕೇಶ್ವರಿ ಅಮ್ಮನವರ ಕೈಲಾಸ ಯಾತ್ರೆಗೆ ಸೂರ್ಯನಂದಿ ಕ್ಷೇತ್ರದಲ್ಲಿ ಸೇರಿದ್ದ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ತಮ್ಮ ನಿರಾಹಾರ, ಶಿವಧ್ಯಾನ, ಅಂಹಿಸಾ ಬೋಧನೆಯಿಂದಲೇ ಕೋಟಿ ಕೋಟಿ ಭಕ್ತರ ಮನ ಗೆದ್ದಿದ್ದ ’ಗಿರಿ ಯೋಗಿನಿ’
ತಮ್ಮ ಸಮಾಧಿ ಸ್ಥಳವನ್ನು ಎರಡೂವರೆ ದಶಕದ ಹಿಂದೆಯೇ ಗುರುತಿಸಿದ್ದ ಮಾಣಿಕೇಶ್ವರಿ ಅಮ್ಮ
ಸೋಮವಾರ ಮಧ್ಯಾಹ್ನ ವೀರಶೈವ ಸಂಪ್ರದಾಯದಂತೆ ನೆರವೇರಿತು ಅಂತಿಮ ವಿಧಿ ವಿಧಾನ
ಶ್ರೀಶೈಲ, ಯಾನಾಗುಂದಿಯ ಪುರೋಹಿತರ ತಂಡದಿಂದ ವೇದಘೋಷ, ಪೂಜೆ
ಅಂತಿಮ ವಿಧಿಯ ಪ್ರಕಾರ ಅಮ್ಮನವರಿಗೆ ನಾಗಸಿಂಹಾಸನದಲ್ಲಿ ವಿಶೇಷ ಪೂಜೆ
ನಾಗಸಿಂಹಾಸನದ ಕೆಳಗಡೆಯಿರುವ ಲಿಂಗಾಕಾರದ ಪುಟ್ಟ ಗುಹೆಯಲ್ಲಿ ಅಮ್ಮ ಲೀನ
ತೆಲಂಗಾಣ, ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು