ರಾಜ್ಯದಲ್ಲಿ ಹೀಗಿದೆ KSRTC, BMTC ಬಸ್ ಸಂಚಾರ: ಇಲ್ಲಿವೆ ಫೋಟೋಸ್
ಬಾಗಲಕೋಟೆ, ಗದಗ ಸೇರಿ ಬೆಂಗಳೂರಿನಲ್ಲಿಯೂ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಿದೆ. 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಸಾರಿಗೆಯಲ್ಲಿ ಓಡಾಡುವ ಅವಕಾಶವಿರದಿದ್ದರೂ, ಜನ ಓಡಾಡುತ್ತಿರುವುದು ಕಂಡುಬಂದಿದೆ. ಇಲ್ಲಿವೆ ಫೋಟೋಸ್
ksrtc
ksrtc
ಮಾಸ್ಕ್ ಧರಿಸಿ , ಅಂತರ ಕಾಯ್ದುಕೊಂಡು ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಬಸ್ ಗಳಿಗೆ ಸ್ಯಾನಿಟೈಸ್ ಮಾಡುವ ಮೂಲಕ 228 ಬಸ್ ಸಂಚಾರ ಆರಂಭಿಸಿವೆ.
ಗದಗ ಜಿಲ್ಲೆಯಿಂದ ಮಂಗಳೂರು, ಬೆಂಗಳೂರು, ಕೊಪ್ಪಳ, ಶಿವಮೊಗ್ಗ, ಬಾಗಲಕೋಟೆ ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭವಾಗಿದೆ.
ksrtc
ಮೊದಲು ಪ್ರಯಾಣಿಕರ ಸ್ಕ್ರೀನಿಂಗ್ ಬಳಿಕ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. KSRTC ಸಿಬ್ಬಂದಿ ಬಸ್ ನಿಲ್ದಾಣದಿಂದ 200 ಕ್ಕೂ ಅಧಿಕ ಬಸ್ ಬಿಟ್ಟಿ
ಮೊದಲ ಬಸ್ ಬಾಗಲಕೋಟೆಯಿಂದ ಇಳಕಲ್ ಮಾಗ೯ವಾಗಿ ಸಂಚಾರಿಸಿದ್ದು, ಕೆಲವೇ ಕೆಲವು ಜನರ ಮೂಲಕ ಮೊದಲ ಬಸ್ ಪ್ರಯಾಣ ಆರಂಭಿಸಿದೆ.
ಬಾಗಲಕೋಟೆಯಲ್ಲಿ ಮೊದಲ ಬಸ್ ಸಂಚಾರ ಶುರುವಾಗಿದ್ದು, ವಿರಳವಾದ ಪ್ರಯಾಣಿಕರ ಹಿನ್ನೆಲೆಯಲ್ಲಿ 7ರ ಬದಲಾಗಿ 8:30ಕ್ಕೆ ಮೊದಲ ಬಸ್ ಸಂಚಾರ ಆರಂಭವಾಗಿದೆ.
ಗದಗ ಹೊಸ ಬಸ್ ನಿಲ್ದಾಣದಲ್ಲಿ ಗದಗ ಹುಬ್ಬಳ್ಳಿ ಬಸ್ ಗೆ ಪೂಜೆ ಮಾಡಲಾಗಿದೆ.
ಗದಗ ನಿಂದ ಹುಬ್ಬಳ್ಳಿಗೆ ಲಾಕ್ ಡೌನ್ ನಂತರ ಮೊದಲ ಬಸ್ ಮಂಗಳವಾರದಿಂದ ಆರಂಭವಾಗಿದ್ದು, ಚಾಲಕ ನಿರ್ವಾಹಕರಿಗೆ ಸ್ಯಾನಿಟೈಸರ್ ಮಾಸ್ಕ್ ಹಾಗೂ ಗ್ಲೌಜ್ ಗಳನ್ನು ನೀಡುವಂತೆ ಚಾಲಕ ನಿರ್ವಾಹಕರ ಆಗ್ರಹಿಸಿದ್ದಾರೆ.
ಪ್ರಯಾಣಿಕರಿಗೆ ಥಮ್ಓ ಟೆಸ್ಟ್ ನಡೆಸುತ್ತಿರುವ ಸಿಬ್ಬಂದಿ
ಗದಗದಲ್ಲಿ ಬಸ್‌ಗೆ ಪೂಜೆ ಮಾಡುವ ಮೂಲಕ ಸಾರಿಗೆ ಸಂಸ್ಥೆ ಸಂಚಾರ ಸೇವೆಯನ್ನು ಆರಂಭ ಮಾಡಿದೆ.