ಕೊರೋನಾ ಸೋಂಕಿತ ಗರ್ಭಿಣಿ ಡಿಸ್ಚಾರ್ಜ್: ಹೂ, ಹಣ್ಣು ಕೊಟ್ಟು ಬೀಳ್ಕೊಟ್ಟ ಸಿಬ್ಬಂದಿ

First Published 25, Apr 2020, 3:34 PM

ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಗೆ 14 ದಿನಗಳ ಹಿಂದೆ ದಾಖಲಾಗಿದ್ದ ಉ.ಕ. ಜಿಲ್ಲೆಯ ಭಟ್ಕಳದ 26 ವರ್ಷ ವಯಸ್ಸಿನ ಕೊರೋನಾ ಸೋಂಕಿತ ಗರ್ಭಿಣಿ ಸಂಪೂರ್ಣ ಗುಣಮುಖವಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತುಂಬು ಗರ್ಭಿಣಿಗೆ ಹೂ, ಹಣ್ಣು, ಸಿಹಿತಿಂಡಿಗಳನ್ನು ಕೊಟ್ಟು ಶುಭ ಹಾರೈಸಿ ಕಳುಹಿಸಿದ್ದಾರೆ ಆಸ್ಪತ್ರೆ ಸಿಬ್ಬಂದಿ. ಮನದುಂಬಿ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ ಮಹಿಳೆ ಮಾತುಗಳು ಭಾವುಕವಾಗಿದೆ. ಇಲ್ಲಿವೆ ಫೋಟೋಸ್

ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಗೆ 14 ದಿನಗಳ ಹಿಂದೆ ದಾಖಲಾಗಿದ್ದ ಉ.ಕ. ಜಿಲ್ಲೆಯ ಭಟ್ಕಳದ 26 ವರ್ಷ ವಯಸ್ಸಿನ ಕೊರೋನಾ ಸೋಂಕಿತ ಗರ್ಭಿಣಿ ಸಂಪೂರ್ಣ ಗುಣಮುಖವಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆಕೆಗೆ ಆಸ್ಪತ್ರೆಯ ವೈದ್ಯರು ಮತ್ತು ಜಿಲ್ಲಾಡಳಿತ ಮಲ್ಲಿಗೆ ಹೂವು, ಹಣ್ಣು ಮತ್ತು ಉಡುಗೊರೆಯನ್ನು ನೀಡಿ ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ಅವರು, ಆಸ್ಪತ್ರೆಗೆ ದಾಖಲಾಗುವಾಗ ತುಂಬಾ ಭಯಗೊಂಡಿದ್ದೆ, ಗರ್ಭಿಣಿಯೂ ಆಗಿರುವುದರಿಂದ ಏನಾದರೂ ತೊಂದರೆಯಾಗುತ್ತದೇನೋ ಎಂಬ ಆತಂಕವಾಗಿತ್ತು ಎಂದಿದ್ದಾರೆ.

ಮುಂದೆ ಅವಕಾಶ ಸಿಕ್ಕಿದರೆ ಹೆರಿಗೆಗೂ ನಾನು ಇದೇ ಆಸ್ಪತ್ರೆಗೆ ದಾಖಲಾಗುತ್ತೇನೆ ಎಂದೂ ಹೇಳಿದರು.

ಜಿಲ್ಲಾಧಿಕಾರಿ ಜಿ.ಜಗಜೀಶ್‌ ಅವರು ಉಡುಪಿಗೆ ಇದು ಶುಭದಿನ, ಗರ್ಭಿಣಿಗೆ ಚಿಕಿತ್ಸೆ ನೀಡುವ ಬಹಳ ದೊಡ್ಡ ಸವಾಲು ನಮ್ಮ ಮುಂದೆ ಇತ್ತು. ಆಸ್ಪತ್ರೆಯ ಡಾ. ಶಶಿಕಿರಣ್‌ ಮತ್ತವರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿ, ತಾಯಿಯ ಜೊತೆಗೆ ಮಗುವಿನ ರಕ್ಷಣೆಯನ್ನೂ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಎಸ್ಪಿ ಎನ್‌. ವಿಷ್ಣುವರ್ಧನ್‌, ಡಿಎಚ್‌ಒ ಡಾ. ಸೂಡಾ, ಕೊರೋನಾ ನೋಡಲ್‌ ಅಧಿಕಾರಿ ಡಾ. ಪ್ರಶಾಂತ್‌ ಭಟ್‌, ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್‌ ಶೆಟ್ಟಿ, ತಜ್ಞ ವೈದ್ಯ ಡಾ. ಶಶಿಕಿರಣ್‌ ಮುಂತಾದವರಿದ್ದರು

ಈ ಮಹಿಳೆ ಗರ್ಭಿಣಿಯಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ವೈದ್ಯರು ಚಿಕಿತ್ಸೆಗೆ ಹಿಂಜರಿದಿದ್ದರು.

ಆದರೆ ಉಡುಪಿ ಕೋವಿಡ್‌ ಆಸ್ಪತ್ರೆಯಲ್ಲಿ ಉಡುಪಿ ಜಿಲ್ಲೆಯ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವ ಬಗ್ಗೆ ಜಿಲ್ಲಾಡಳಿತ ಮತ್ತು ಡಾ.ಟಿ.ಎಂ.ಎ.ಪೈ ಆಸ್ಪತ್ರೆ ಮಧ್ಯೆ ಒಪ್ಪಂದವಾಗಿತ್ತು.

ಆದರೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಸೂಚನೆ ಬಂದ ಮೇಲೆ ಅವರನ್ನು ಉಡುಪಿ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿಯ ಜೊತೆಗೆ ಹೊಟ್ಟೆಯಲ್ಲಿರುವ ಮಗುವಿಗೂ ತೊಂದರೆಯಾಗದಂತೆ ಚಿಕಿತ್ಸೆ ನೀಡುವುದು ವೈದ್ಯರಿಗೆ ಅತ್ಯಂತ ಸವಾಲಿನ ಪ್ರಕರಣ ಇದಾಗಿತ್ತು.

ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ರೋಗಿಗಳಿಲ್ಲ, ಶಂಕಿತರ ಗಂಟಲದ್ರವದ ಮಾದರಿಗಳನ್ನು ನಿತ್ಯ ಕಳುಹಿಸಲಾಗುತ್ತಿದೆಯಾದರೂ ಎಲ್ಲವೂ ನೆಗೆಟಿವ್‌ ಬರುತ್ತಿವೆ.

ಉಡುಪಿ ಜಿಲ್ಲೆಯ 3 ಪಾಸಿಟಿವ್‌ ರೋಗಿಗಳು ಬಿಡುಗಡೆಯಾಗಿದ್ದು, ಪಕ್ಕದ ಉ.ಕ. ಜಿಲ್ಲೆಯ ಒಬ್ಬ ರೋಗಿಯೂ ಬಿಡುಗಡೆಗೊಂಡಿದ್ದಾರೆ.

ಮಂಗಳೂರಿನಲ್ಲಿ ಜಿಲ್ಲೆಯಲ್ಲಿ ದಾಖಲಾಗಿದ್ದ ಕಾಪುವಿನ ಕೊರೋನಾ ಪಾಸಿಟಿವ್‌ ಮಹಿಳೆ ಕೂಡ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೊರೋನಾ ಪಾಸಿಟಿವ್‌ ಪ್ರಕರಣಗಳಿಲ್ಲದೇ 27 ದಿನಗಳು ಕಳೆದಿವೆ. ಇನ್ನೊಂದು ದಿನ ಕಳೆದರೆ ಉಡುಪಿ ಕೊರೋನಾ ಮುಕ್ತ ಗ್ರೀನ್‌ ಝೋನ್‌ ಆಗಲಿದೆ.

loader