ಮಂಡ್ಯ: ಚುಂಚನಗಿರಿ ರಥೋತ್ಸವ, ಇಲ್ಲಿವೆ ಫೋಟೋಸ್
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಚುಂಚನಗಿರಿಯಲ್ಲಿ ಅದ್ದೂರಿಯಾಗಿ ಚುಂಚನಗಿರಿ ರಥೋತ್ಸವ ನಡೆಯಿತು. ಮುಂಜಾನೆ ಸೂರ್ಯೋದಯಕ್ಕೂ ಮೊದಲು ಶ್ರೀಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವಕ್ಕೆ ನಿರ್ಮಲನಂದಾನಾಥ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥೋತ್ಸವದ ಫೋಟೋಸ್ ಇಲ್ಲಿವೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಚುಂಚನಗಿರಿಯಲ್ಲಿ ಅದ್ದೂರಿಯಾಗಿ ಚುಂಚನಗಿರಿ ರಥೋತ್ಸವ ನಡೆಯಿತು.
ರಥೋತ್ಸವದಲ್ಲಿ ಜನದಟ್ಟಣೆ
ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ರಥ
ರಥೋತ್ಸವದಲ್ಲಿ ಪೊಲೀಸ್ ಬಿಗಿ ಭದ್ರತೆ
ಮುಂಜಾನೆ ಸೂರ್ಯೋದಯಕ್ಕೂ ಮೊದಲು ಶ್ರೀಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವಕ್ಕೆ ನಿರ್ಮಲನಂದಾನಾಥ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ರಥೋತ್ಸವ ಸಾಗಿದ ಬೀದಿಯಲ್ಲಿ ಕಟ್ಟಡಗಳನ್ನೂ, ಮರಗಳನ್ನೂ ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು
ರತೋತ್ಸವದ ಭಾಗವಾಗಿ ನಡೆದ ಕಾರ್ಯಕ್ರಮದ ಅದ್ಭುತ ಫೋಟೋ
ವಿಜೃಂಭಣೆಯಿಂದ ನಡೆದ ಕಾಲಭೈರವೇಶ್ವರ ಸ್ವಾಮಿ ರಥೋತ್ಸದಲ್ಲಿ ಮುಂಜಾನೆಯೇ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವಿಶೇಷ ವರ್ಣರಂಜಿತ ದೀಪಾಲಂಕಾರ, ಪುಷ್ಪಾಲಂಕಾರದಿಂದ ಸಿಂಗರಿಸಿದ್ದ ರಥಕ್ಕೆ ಭಕ್ತರು ಹಣ್ಣು, ಜವನ ಎಸೆಯುವ ಮೂಲಕ ಕಾಲಭೈರವೇಶ್ವರನ ಕೃಪೆಗೆ ಪಾತ್ರರಾದರು.
ರಥವೂ ಚುಂಚನಗಿರಿಯ ಪ್ರಮುಖ ಬೀದಿಗಳಲ್ಲಿ ಚಲಿಸಿತು.
ಇದೇ ಸಂದರ್ಭದಲ್ಲಿ ಚುಂಚನಗಿರಿ ಶ್ರೀಗಳ ಪಲ್ಲಕ್ಕಿ ಉತ್ಸವವೂ ಜೊತೆ ಜೊತೆಯಾಗಿ ನಡೆದು, ಭಕ್ತರು ಭಕ್ತಿಯಿಂದ ಸ್ವಾಮೀಜಿಗೆ ನಮಿಸಿದರು.