ನಾಗರಪಂಚಮಿ ವಿಶೇಷ: 10 ಜೀವಂತ ಹಾವುಗಳಿಗೆ ವಿಶೇಷ ಪೂಜೆ
ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಅದರಂತೆ ಇಲ್ಲಿ ಒಬ್ಬರು ಕಳೆದ ಅನೇಕ ವರ್ಷಗಳಿಂದ ಗಾಯಗೊಂಡ ನಾಗರ ಹಾವುಗಳನ್ನು ಸಂರಕ್ಷಿಸುವ ಜೊತೆಗೆ ನಾಗರಪಂಚಮಿಯಂದು ಅವುಗಳಿಗೆ ತನು ಎರೆದು ಪೂಜೆ ಸಲ್ಲಿಸುತ್ತಾರೆ. ಈ ಬಾರಿಯೂ 10 ಜೀವಂತ ನಾಗರಗಳಿಗೆ ಪೂಜೆ ಸಲ್ಲಿಸಿದರು.

ಉಡುಪಿ ಜಿಲ್ಲೆಯ ಮಜೂರು ಗ್ರಾಮದ ಗೋವರ್ಧನ್ ಭಟ್ ಅವರು ಕಳೆದ ಅನೇಕ ವರ್ಷಗಳಿಂದ ಗಾಯಗೊಂಡ ನಾಗರ ಹಾವುಗಳನ್ನು ಸಂರಕ್ಷಿಸುವ ಜೊತೆಗೆ ನಾಗರಪಂಚಮಿಯಂದು ಅವುಗಳಿಗೆ ತನು ಎರೆದು ಪೂಜೆ ಸಲ್ಲಿಸುತ್ತಾರೆ.

ಈ ಬಾರಿಯೂ 10 ಜೀವಂತ ನಾಗರಗಳಿಗೆ ಪೂಜೆ ಸಲ್ಲಿಸಿದರು.

ಪ್ರತೀ ನಾಗರಪಂಚಮಿಯಂದು ಅವರ ಮನೆಯಲ್ಲಿ ಒಂದೆರಡು ನಾಗರ ಹಾವವುಗಳಿರುತ್ತವೆ. ಆದರೇ ಈ ಬಾರಿ ಅತೀಹೆಚ್ಚು 10 ನಾಗರ ಹಾವುಗಳು ಶುಶ್ರೂಷೆ ಪಡೆಯುತ್ತಿದೆ.

ಇದುವರೆಗೆ ಸಾವಿರಕ್ಕೂ ಹೆಚ್ಚು ನಾಗರ ಹಾವುಗಳಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಿರುವ ಅವರನ್ನು ಜನರು ಗೌರವದಿಂದ ಹಾವಿನ ಡಾಕ್ಟರ್ ಎಂದೂ ಕರೆಯುತ್ತಾರೆ.

ಕೊರೋನಾದ ಹಿನ್ನೆಲೆಯಲ್ಲಿ ಶನಿವಾರ ಸಾರ್ವಜನಿಕರಿಗೆ ಪೂಜೆ ಅವಕಾಶ ನೀಡದೇ ತಾವೇ ಪೂಜೆ ಸಲ್ಲಿಸಿದರು.

ಪತ್ನಿ ಮತ್ತು ಇಬ್ಬರ ಮಕ್ಕಳ ಸಹಾಯದಿಂದ ಎಲ್ಲಾ ನಾಗರ ಹಾವುಗಳನ್ನು ಬೋನಿನಿಂದ ಹೊರತೆಗೆದು, ಅವುಗಳಿಗೆ ಜಲಾಭಿಷೇಕ ನಡೆಸಿ, ಆರತಿ ಬೆಳಗಿ ಪೂಜಿಸಿದರು.

ಫಲಾಪೇಕ್ಷೆ ಇಲ್ಲದೇ ನಾನಾ ರೀತಿಯಲ್ಲಿ ಗಾಯಗೊಂಡ ನಾಗರ ಹಾವುಗಳ ಬಗ್ಗೆ ಕರೆ ಬಂದ ತಕ್ಷಣ ಧಾವಿಸಿ ಅವುಗಳನ್ನು ಮನೆಗೆ ತಂದು ಸೂಕ್ತ ಚಿಕಿತ್ಸೆ ನೀಡಿ, ಗುಣಮುಖವಾದ ಮೇಲೆ ಕಾಡಿಗೆ ಬಿಟ್ಟು ತಮ್ಮ ಪ್ರಾಣಿಪ್ರೀತಿ-ಭಕ್ತಿಯನ್ನು ಮೆರೆಯುತಿದ್ದಾರೆ.