MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Mysuru: ಪುತ್ರ ಸಂತಾನದ ನೆನಪಿಗೆ ಒಡೆಯರ್ ನೀಡಿದ 11 ಕೆಜಿ ಬಂಗಾರದ ಮುಖವಾಡ; ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ

Mysuru: ಪುತ್ರ ಸಂತಾನದ ನೆನಪಿಗೆ ಒಡೆಯರ್ ನೀಡಿದ 11 ಕೆಜಿ ಬಂಗಾರದ ಮುಖವಾಡ; ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ

ಶಿವರಾತ್ರಿಯಂದು ಮೈಸೂರಿನ ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ 11 ಕೆಜಿ ತೂಕದ ಅಪರಂಜಿ ಚಿನ್ನದ ಮುಖವಾಡವನ್ನು ಧಾರಣೆ ಮಾಡಲಾಗುತ್ತದೆ. ಜಯಚಾಮರಾಜೇಂದ್ರ ಒಡೆಯರ್ ಅವರು 1954ರಲ್ಲಿ ನೀಡಿದ ಈ ಮುಖವಾಡದ ದರ್ಶನವು ವರ್ಷಕ್ಕೊಮ್ಮೆ ಮಾತ್ರ ಲಭ್ಯವಿದೆ.

1 Min read
Author : Santosh Naik
Published : Feb 14 2026, 06:32 PM IST
Share this Photo Gallery
  • FB
  • TW
  • Linkdin
  • Whatsapp
15
11 ಕೆಜಿ ಚಿನ್ನದ ಮುಖವಾಡ
Image Credit : X

11 ಕೆಜಿ ಚಿನ್ನದ ಮುಖವಾಡ

ಶಿವರಾತ್ರಿಯ ವಿಶೇಷವಾಗಿ ಶಿವಲಿಂಗಕ್ಕೆ ಅಲಂಕರಿಸಲು ಬರೋಬ್ಬರಿ 11 ಕೆಜಿ ತೂಕದ ಅಪರಂಜಿ ಚಿನ್ನದ ಮುಖವಾಡವನ್ನು ಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತರಲಾಗಿದೆ. ಶಿವ ಮುಖವಾಡ ಮಾತ್ರವಲ್ಲೆ, ಗಂಗೆಯ ಮುಖವಾಡ ಕೂಡ ಅಪರಂಜಿ ಚಿನ್ನದ್ದಾಗಿದೆ.

25
ವರ್ಷಕ್ಕೊಮ್ಮೆ ಮಾತ್ರ ದರ್ಶನ
Image Credit : X

ವರ್ಷಕ್ಕೊಮ್ಮೆ ಮಾತ್ರ ದರ್ಶನ

ಈ ಪವಿತ್ರ ಚಿನ್ನದ ಮುಖವಾಡವನ್ನು ವರ್ಷವಿಡೀ ಖಜಾನೆಯಲ್ಲಿ ಇಡಲಾಗುತ್ತದೆಯಾದರೂ, ಕೇವಲ ಶಿವರಾತ್ರಿಯ ದಿನದಂದು ಮಾತ್ರ ಶಿವಲಿಂಗಕ್ಕೆ ಧಾರಣೆ ಮಾಡುವುದು ಇಲ್ಲಿನ ಪರಂಪರೆಯಾಗಿದೆ. ಅರಮನೆ ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆಯಂದು ಪೂಜೆ ಸಲ್ಲಿಸಲಾಗುತ್ತದೆ.

Related Articles

Related image1
Shivaratri 2023: ಮೈಸೂರು ಅರಮನೆ ತ್ರಿಣೇಶ್ವರ ದೇವಸ್ಥಾನದ ಶಿವಲಿಂಗಕ್ಕೆ 11 ಕೆ.ಜಿ ಚಿನ್ನದ ಕೊಳಗ
Related image2
Maha Shivaratri: ಶಿವರಾತ್ರಿ ಪೂಜೆ ಮುಗಿಸಿ ಮನೆಗೆ ಬರುವಾಗ ಈ ಒಂದು ವಸ್ತು ತನ್ನಿ, ಹಣದ ಸಮಸ್ಯೆ ಇರಲ್ಲ!
35
ಐತಿಹಾಸಿಕ ಹಿನ್ನೆಲೆ
Image Credit : X

ಐತಿಹಾಸಿಕ ಹಿನ್ನೆಲೆ

ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು ಪುತ್ರ ಸಂತಾನವಾದ ಸವಿನೆನಪಿಗಾಗಿ 1954ರಲ್ಲಿ ಈ ಅಮೂಲ್ಯವಾದ ಚಿನ್ನದ ಮುಖವಾಡವನ್ನು ದೇವರಿಗೆ ಕಾಣಿಕೆಯಾಗಿ ನೀಡಿದ್ದರು.

45
ಮುಖವಾಡದ ವಿಶೇಷತೆ
Image Credit : X

ಮುಖವಾಡದ ವಿಶೇಷತೆ

ಮೈಸೂರು ಮಹಾರಾಜರು ತ್ರಿಣೇಶ್ವರನಿಗೆ ಕಾಣಿಕೆ ನೀಡಿರುವ ಕೊಳಗದಲ್ಲಿ ಒಂದು ಚಿನ್ನದ ಜಟಾಮುಕುಟ, ಒಂದು ಚಿನ್ನದ ಕರ್ಣಕುಂಡಲ, ಒಂದು ಚಿನ್ನದ ತಾಟಂಕ, ಎರಡು ಲೋಲಕ, ಎರಡು ಕೆಂಪಿನ ಹರಳಿನ ಓಲೆಗಳು, ಹಣೆಯಲ್ಲಿ ಕೆಂಪು ಕಲ್ಲಿನ ತಿಲಕ, ಒಂದು ಸಣ್ಣ ಮೂಗುತಿ ಇರುವ ಒಂದು ಚಿನ್ನದ ಗಂಗೆ ನೀಡಿದ್ದಾರೆ. ಚಿನ್ನದ ಕೊಳಗವು ಏಳು ಕೆಂಪು ಕಲ್ಲುಗಳು, ಬೆಳ್ಳಿಯ ಅರ್ಧ ಚಂದ್ರ ಮತ್ತು ಬೆಳ್ಳಿಯ ಒಂದು ತಿರುಪು ಹೊಂದಿದೆ.

55
ಭಕ್ತರ ಸಾಗರ
Image Credit : X

ಭಕ್ತರ ಸಾಗರ

ವರ್ಷಕ್ಕೊಮ್ಮೆ ಮಾತ್ರ ಸಿಗುವ ಈ ಅಪರೂಪದ ದರ್ಶನವನ್ನು ಪಡೆಯಲು ಮೈಸೂರಿನಾದ್ಯಂತ ಸಾವಿರಾರು ಭಕ್ತರು ಮುಂಜಾನೆಯಿಂದಲೇ ಅರಮನೆ ಆವರಣಕ್ಕೆ ಆಗಮಿಸುತ್ತಿದ್ದು, ಭಕ್ತರಿಗಾಗಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಹಬ್ಬ
ಜ್ಯೋತಿಷ್ಯ
ದೇವಸ್ಥಾನ
ಮೈಸೂರು
ಮಹಾಶಿವರಾತ್ರಿ

Latest Videos
Recommended Stories
Recommended image1
ಬೆಂಗಳೂರಿನ ನಿವೃತ್ತ ನೇವಿ ಕ್ಯಾಪ್ಟನ್ ಹತ್ಯೆ ಪ್ರಕರಣ: ಹುಟ್ಟಿಸಿದ ತಂದೆ-ತಾಯಿಯನ್ನೇ ಕೊಂದವನ ಕೈಯಲ್ಲೇ ಅಂತ್ಯಸಂಸ್ಕಾರ!
Recommended image2
ಹೊಸಕೋಟೆ ಭೀಕರ ಅಪಘಾತದ ಇಂಪ್ಯಾಕ್ಟ್, PWD-ನ್ಯಾಷನಲ್ ಹೈವೆ ಅಥಾರಿಟಿ-ಪೊಲೀಸರಿಂದ ಜಂಟಿ ಸರ್ವೆ
Recommended image3
ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ಕನ್ನಡಿಗ ನಿಗೂಢ ಕಣ್ಮರೆ, ಪಾರ್ಕ್ ಬಳಿ ಕೊನೆಯದಾಗಿ ಕಾಣಿಸಿಕೊಂಡಾತ ಎಲ್ಲಿ ಹೋದ?
Related Stories
Recommended image1
Shivaratri 2023: ಮೈಸೂರು ಅರಮನೆ ತ್ರಿಣೇಶ್ವರ ದೇವಸ್ಥಾನದ ಶಿವಲಿಂಗಕ್ಕೆ 11 ಕೆ.ಜಿ ಚಿನ್ನದ ಕೊಳಗ
Recommended image2
Maha Shivaratri: ಶಿವರಾತ್ರಿ ಪೂಜೆ ಮುಗಿಸಿ ಮನೆಗೆ ಬರುವಾಗ ಈ ಒಂದು ವಸ್ತು ತನ್ನಿ, ಹಣದ ಸಮಸ್ಯೆ ಇರಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved