ಕೊಪ್ಪಳ: ಪತ್ನಿ ಸಮೇತ ಕೊರೋನಾ ಲಸಿಕೆ ಪಡೆದ ಸಂಸದ ಸಂಗಣ್ಣ ಕರಡಿ

First Published Mar 5, 2021, 2:21 PM IST

ಕೊಪ್ಪಳ(ಮಾ.05): ಮಹಾಮಾರಿ ಕೋವಿಡ್‌ ವೈರಸ್‌ ವಿರುದ್ಧ ಹೋರಾಡಲು ಸಂಸದ ಸಂಗಣ್ಣ ಕರಡಿ ಅವರು ತಮ್ಮ ಪತ್ನಿ ಸಮೇತ ಇಂದು(ಶುಕ್ರವಾರ) ಕೊರೋನಾ ಲಸಿಕೆಯನ್ನ ಹಾಕಿಸಿಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರಲ್ಲಿ ಕೊರೋನಾ ಲಸಿಕೆ ಬಗ್ಗೆ ಇರುವ ಭಯವನ್ನ ಹೋಗಲಾಡಿಸುವ ಪ್ರಯತ್ನವನ್ನ ಮಾಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಏಮ್ಸ್‌ನಲ್ಲಿ ಕೊರೋನಾ ಲಸಿಕೆಯನ್ನ ಹಾಕಿಸಿಕೊಂಡಿದ್ದರು. ಪ್ರಧಾನಿ ಮೋದಿ ಕೋವಿಡ್‌ ಲಸಿಕೆ ಹಾಕಿಸಿಕೊಂಡ ಬಳಿಕ ದೇಶಾದ್ಯಂತ ಲಸಿಕೆಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ.