ಮುಂಡಗೋಡ-ಸವದತ್ತಿ: ಭಕ್ತರ ಬಹುದಿನದ ಕನಸು ನನಸು, ನೂತನ ಬಸ್‌ಗೆ ಶಾಸಕ ಹೆಬ್ಬಾರ್ ಚಾಲನೆ
ಮಂಗಳವಾರ ಮುಂಡಗೋಡ ಬಸ್ ನಿಲ್ದಾಣದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರು ಮುಂಡಗೋಡ-ಸವದತ್ತಿ ನೂತನ ಬಸ್ ಸೇವೆಗೆ ಹಸಿರು ನಿಶಾನೆ ತೋರಿದರು. ಈ ಹೊಸ ಬಸ್ ಸೇವೆಯು ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಉತ್ತರ ಕನ್ನಡ ಜಿಲ್ಲೆಯ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಅನುಕೂಲಕರವಾಗಲಿದೆ.

ಮುಂಡಗೋಡು ನಿಲ್ದಾಣದಿಂದ ಸವದತ್ತಿ
ಇಲ್ಲಿನ ಬಸ್ ನಿಲ್ದಾಣದಲ್ಲಿ ನೂತನವಾಗಿ ಮುಂಡಗೋಡ-ಸವದತ್ತಿ ನೂತನ ಬಸ್ ಸೇವೆಗೆ ಮಂಗಳವಾರ ಶಾಸಕ ಶಿವರಾಮ ಹೆಬ್ಬಾರ ಹಸಿರು ನಿಶಾನೆ ತೋರಿದರು. ಈ ಭಾಗದಿಂದ ಸವದತ್ತಿಗೆ ತೆರಳುವ ಭಕ್ತರಿಗೆ ಈ ಬಸ್‌ಗೆ ಅನುಕೂಲವಾಗಲಿದೆ.
ಮುಂದಿನ ದಿನಗಳಲ್ಲಿ ಹೊಸ ಬಸ್‌ಗಳಿಗೆ ಚಾಲನೆ; ಶಾಸಕರ ಭರವಸೆ
ಈ ಸಂದರ್ಭ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಭಕ್ತರು ಹಾಗೂ ಸಾರ್ವಜನಿಕರಿಗೆ ಧಾರ್ಮಿಕ ಕ್ಷೇತ್ರವಾದ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಸುಲಭವಾಗಿ ಸಂಚಾರ ಮಾಡಲು ಈ ನೂತನ ಬಸ್ ಸೇವೆ ಅನುಕೂಲಕರವಾಗಲಿದೆ. ಪುಣ್ಯ ಕ್ಷೇತ್ರ ಸೇರಿದಂತೆ ಅಗತ್ಯವಿರುವ ಕಡೆಗೆ ಹಂತ ಹಂತವಾಗಿ ಬಸ್ ಸೇವೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಬಸ್ ಸೇವೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಸಾರ್ವಜನಿಕರು ಈ ಬಸ್ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ನೂತನ ಬಸ್ ಸೇವೆ ಆರಂಭ
ಧಾರ್ಮಿಕ ಕ್ಷೇತ್ರವಾದ ಸೌವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಭಕ್ತರು ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಈ ಹೊಸ ಬಸ್ ಸೇವೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂಬ ವಿಶ್ವಾಸವಿದೆ. ಸಾರ್ವಜನಿಕರು ಈ ನೂತನ ಬಸ್ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡುತ್ತೇನೆ.
ಹಲವು ಗಣ್ಯರ ಉಪಸ್ಥಿತಿ
ಈ ಸಂದರ್ಭ ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ, ಜಿಪಂ ಮಾಜಿ ಸದಸ್ಯ ರವಿಗೌಡ ಪಾಟೀಲ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವೈ.ಪಿ. ಬುಜಂಗಿ, ಮಾರ್ಕೆಟಿಂಗ್ ಸೊಸೈಟಿ ನಿರ್ದೇಶಕ ಪರಶುರಾಮ ತಹಸೀಲ್ದಾರ, ಕಾಂಗ್ರೆಸ್ ಹಿಂದುಳಿದ ವರ್ಗ ಸಮಿತಿಯ ತಾಲೂಕಾಧ್ಯಕ್ಷ ದೇವು ಪಾಟೀಲ್, ಪ್ರಚಾರ ಸಮಿತಿಯ ಅಧ್ಯಕ್ಷ ಕೆಂಜೋಡಿ ಗಲಬಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮ್ಮದ್‌ಗೌಸ್ ಮಕಾನದಾರ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಧರ್ಮರಾಜ ನಾಡಿಗೇರ, ಪ್ರಮುಖರಾದ ರಾಜು ಗುಬ್ಬಕ್ಕನವರ, ನಿತಿನ್ ರಾಯ್ಕರ, ಗೋಪಾಲ ಪಾಟೀಲ್, ರಜಾ ಫಠಾಣ, ರಫೀಕ್ ಇನಾಮದಾರ್ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಂಡಗೋಡ ಘಟಕದ ವ್ಯವಸ್ಥಾಪಕ ಎಸ್.ಎಂ. ಕುರ್ತಕೋಟಿ ಮುಂತಾದವರಿದ್ದರು

