ಗಂಗಾವತಿ: ತುಂಬಿದ ಮುಕ್ಕುಂಪ ಕೆರೆಗೆ ಶಾಸಕ ಪರಣ್ಣ ಮುನವಳ್ಳಿ ಬಾಗಿನ ಅರ್ಪಣೆ

First Published 2, Oct 2020, 11:01 AM

ಗಂಗಾವತಿ(ಅ.02): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುಕ್ಕುಂಪ ಗ್ರಾಮದ ಕೆರೆಗೆ ಶಾಸಕ ಪರಣ್ಣ ಮುನವಳ್ಳಿ ಮತ್ತು ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಅವರು ಗುರುವಾರ ಬಾಗಿನ ಅರ್ಪಿಸಿದ್ದಾರೆ. 

<p>ಪ್ರಸ್ತುತ ವರ್ಷ ನಿರಂತರವಾಗಿ ಮಳೆಯಾಗುತ್ತಿರುವು​ದ​ರಿಂದ ಕೆರೆಗೆ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ ಬಾಗಿನ ಅರ್ಪಿಸಿದ್ದಾರೆ.&nbsp;</p>

ಪ್ರಸ್ತುತ ವರ್ಷ ನಿರಂತರವಾಗಿ ಮಳೆಯಾಗುತ್ತಿರುವು​ದ​ರಿಂದ ಕೆರೆಗೆ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ ಬಾಗಿನ ಅರ್ಪಿಸಿದ್ದಾರೆ. 

<p>ಇದೇ ವೇಳೆ ಮಾತನಾಡಿದ ಶಾಸಕ ಮುನವಳ್ಳಿ, ಈ ವರ್ಷ ಸಮರ್ಪಕವಾಗಿ ಮಳೆಯಾಗುತ್ತಿರುವು​ದರಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ. ತುಂಗಭದ್ರಾ ಜಲಾಶಯಕ್ಕೆ ನೀರು ಬರುತ್ತಿರುವು​ದರಿಂದ ಈ ಭಾಗದ ರೈತರಿಗೆ ಬತ್ತದ ಬೆಳೆ ಬೆಳೆಯಲು ಅನುಕೂಲವಾಗಿದೆ ಎಂದರು.</p>

ಇದೇ ವೇಳೆ ಮಾತನಾಡಿದ ಶಾಸಕ ಮುನವಳ್ಳಿ, ಈ ವರ್ಷ ಸಮರ್ಪಕವಾಗಿ ಮಳೆಯಾಗುತ್ತಿರುವು​ದರಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ. ತುಂಗಭದ್ರಾ ಜಲಾಶಯಕ್ಕೆ ನೀರು ಬರುತ್ತಿರುವು​ದರಿಂದ ಈ ಭಾಗದ ರೈತರಿಗೆ ಬತ್ತದ ಬೆಳೆ ಬೆಳೆಯಲು ಅನುಕೂಲವಾಗಿದೆ ಎಂದರು.

<p>ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಮಾತನಾಡಿ, ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ವಿಠಲಾಪುರ ಕೆರೆಗಳು ಸೇರಿದಂತೆ 6 ಕೆರೆಗಳಿಗೆ ನೀರು ಭರ್ತಿ ಮಾಡುವ ಕಾರ್ಯಕ್ಕೆ ಶಾಸಕರು ಮುತುವರ್ಜಿವಹಿಸಿ ಯೋಜನೆ ಜಾರಿಗೆ ತಂದಿದ್ದಾರೆ. ಅವರಿಗೆ ಯಾವಾಗಲು ಬೆನ್ನಲುಬಾಗಿ ನಿಲ್ಲುತ್ತೇವೆ ಎಂದರು.</p>

ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಮಾತನಾಡಿ, ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ವಿಠಲಾಪುರ ಕೆರೆಗಳು ಸೇರಿದಂತೆ 6 ಕೆರೆಗಳಿಗೆ ನೀರು ಭರ್ತಿ ಮಾಡುವ ಕಾರ್ಯಕ್ಕೆ ಶಾಸಕರು ಮುತುವರ್ಜಿವಹಿಸಿ ಯೋಜನೆ ಜಾರಿಗೆ ತಂದಿದ್ದಾರೆ. ಅವರಿಗೆ ಯಾವಾಗಲು ಬೆನ್ನಲುಬಾಗಿ ನಿಲ್ಲುತ್ತೇವೆ ಎಂದರು.

<p>ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್‌.ಎಂ. ಸಿದ್ದರಾಮಸ್ವಾಮಿ, ಎಪಿಎಂಸಿ ಮಾಜಿ ಅದ್ಯಕ್ಷ ನೀಲಪ್ಪ, ನಗರಸಭೆ ಮಾಜಿ ಅದ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಜಿಪಂ ಮಾಜಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಸಿದ್ದಪ್ಪ ನೀರಲೂಟಿ ಸೇರಿದಂತೆ ಪ್ರಮುಖರು ಇದ್ದರು.</p>

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್‌.ಎಂ. ಸಿದ್ದರಾಮಸ್ವಾಮಿ, ಎಪಿಎಂಸಿ ಮಾಜಿ ಅದ್ಯಕ್ಷ ನೀಲಪ್ಪ, ನಗರಸಭೆ ಮಾಜಿ ಅದ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಜಿಪಂ ಮಾಜಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಸಿದ್ದಪ್ಪ ನೀರಲೂಟಿ ಸೇರಿದಂತೆ ಪ್ರಮುಖರು ಇದ್ದರು.

loader