ಫ್ಯಾಕ್ಟರಿ ಅಗ್ನಿ ದುರಂತ: ತಪ್ಪಿತಸ್ಥರ ವಿರುದ್ಧ ಕ್ರಮ ಸಚಿವ ಸುಧಾಕರ್‌

First Published 13, Nov 2020, 8:30 AM

ಬೆಂಗಳೂರು(ನ.13): ಹೊಸಗುಡ್ಡದಹಳ್ಳಿ ರೇಖಾ ಕಾರ್ಖಾನೆಯಲ್ಲಿ ಅನಧಿಕೃತವಾಗಿ ರಾಸಾಯನಿಕ ದಾಸ್ತಾನು ಮಾಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ. ಈ ಸಂಬಂಧ ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. 

<p>ಮೈಸೂರು ರಸ್ತೆಯ ಹೊಸಗುಡ್ಡಹಳ್ಳಿಯ ಸಂಭವಿಸಿದ್ದ ಅಗ್ನಿ ಅವಘಡ ಘಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಡಾ.ಕೆ.ಸುಧಾಕರ್‌&nbsp;</p>

ಮೈಸೂರು ರಸ್ತೆಯ ಹೊಸಗುಡ್ಡಹಳ್ಳಿಯ ಸಂಭವಿಸಿದ್ದ ಅಗ್ನಿ ಅವಘಡ ಘಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಡಾ.ಕೆ.ಸುಧಾಕರ್‌ 

<p>ಈ ಗೋದಾಮಿನಲ್ಲಿ ಸ್ಯಾನಿಟೆಸರ್‌ ಸೇರಿದಂತೆ ರಾಸಾಯನಿಕ ಸಂಗ್ರಹಿಸಿಟ್ಟಿದ್ದ ಬಗ್ಗೆ ದೂರುಗಳು ಬಂದಿವೆ. ಸ್ಯಾನಿಟೈಸರ್‌ ಸಂಗ್ರಹ ಮಾಡಿಡಲು ಆರೋಗ್ಯ ಇಲಾಖೆಯಡಿ ಬರುವ ಡ್ರಗ್‌ ಕಂಟ್ರೋಲರ್‌ ಸಂಸ್ಥೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ರಾಸಾಯನಿಕವನ್ನು ಬೇರೆ ಕಂಪನಿಗಳು ಖರೀದಿಸಿದರೂ ಅದು ಸಹ ಕಾನೂನು ಉಲ್ಲಂಘನೆ. ತನಿಖೆ ನಡೆಸಿ, ತಪ್ಪು ಮಾಡಿದ್ದರೆ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.</p>

ಈ ಗೋದಾಮಿನಲ್ಲಿ ಸ್ಯಾನಿಟೆಸರ್‌ ಸೇರಿದಂತೆ ರಾಸಾಯನಿಕ ಸಂಗ್ರಹಿಸಿಟ್ಟಿದ್ದ ಬಗ್ಗೆ ದೂರುಗಳು ಬಂದಿವೆ. ಸ್ಯಾನಿಟೈಸರ್‌ ಸಂಗ್ರಹ ಮಾಡಿಡಲು ಆರೋಗ್ಯ ಇಲಾಖೆಯಡಿ ಬರುವ ಡ್ರಗ್‌ ಕಂಟ್ರೋಲರ್‌ ಸಂಸ್ಥೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ರಾಸಾಯನಿಕವನ್ನು ಬೇರೆ ಕಂಪನಿಗಳು ಖರೀದಿಸಿದರೂ ಅದು ಸಹ ಕಾನೂನು ಉಲ್ಲಂಘನೆ. ತನಿಖೆ ನಡೆಸಿ, ತಪ್ಪು ಮಾಡಿದ್ದರೆ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

<p>ಈ ಕಾರ್ಖಾನೆಯ ಅಕ್ರಮ ದಾಸ್ತಾನು ವಿಚಾರದಲ್ಲಿ ಡ್ರಗ್‌ ಕಂಟ್ರೋಲರ್‌ಗಳು ಕರ್ತವ್ಯ ಲೋಪವೆಸಗಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಇಂತಹ ಮತ್ತಷ್ಟು ಅನಾಹುತ ನಡೆಯದಂತೆ ತಡೆಯಲು ಜನವಸತಿ ಪ್ರದೇಶಗಳಲ್ಲಿರುವ ಕಾರ್ಖಾನೆಗಳನ್ನು ಗುರುತಿಸಿ ಸ್ಥಳಾಂತರಿಸುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.</p>

ಈ ಕಾರ್ಖಾನೆಯ ಅಕ್ರಮ ದಾಸ್ತಾನು ವಿಚಾರದಲ್ಲಿ ಡ್ರಗ್‌ ಕಂಟ್ರೋಲರ್‌ಗಳು ಕರ್ತವ್ಯ ಲೋಪವೆಸಗಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಇಂತಹ ಮತ್ತಷ್ಟು ಅನಾಹುತ ನಡೆಯದಂತೆ ತಡೆಯಲು ಜನವಸತಿ ಪ್ರದೇಶಗಳಲ್ಲಿರುವ ಕಾರ್ಖಾನೆಗಳನ್ನು ಗುರುತಿಸಿ ಸ್ಥಳಾಂತರಿಸುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

<p>ಅಗ್ನಿ ದುರಂತದಲ್ಲಿ ಕೆಲವರ ಮನೆಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಉಂಟಾಗಿರುವ ನಷ್ಟ ಪ್ರಮಾಣದ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತರು ವರದಿ ನೀಡಲಿದ್ದಾರೆ. ಆನಂತರ ನಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಜೊತೆ ಸಮಾಲೋಚಿಸಿ ಸಂತ್ರಸ್ತರಿಗೆ ಪರಿಹಾರ ನೀಡಿಕೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.&nbsp;</p>

ಅಗ್ನಿ ದುರಂತದಲ್ಲಿ ಕೆಲವರ ಮನೆಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಉಂಟಾಗಿರುವ ನಷ್ಟ ಪ್ರಮಾಣದ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತರು ವರದಿ ನೀಡಲಿದ್ದಾರೆ. ಆನಂತರ ನಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಜೊತೆ ಸಮಾಲೋಚಿಸಿ ಸಂತ್ರಸ್ತರಿಗೆ ಪರಿಹಾರ ನೀಡಿಕೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.