ದತ್ತಾತ್ರೇಯ ದೇವಸ್ಥಾನಕ್ಕೆ ರಮೇಶ ಜಾರಕಿಹೊಳಿ ಭೇಟಿ: ಸಾರ್ವಜನಿಕರಿಗೆ ಇಲ್ಲದ ದರ್ಶನ ಭಾಗ್ಯ ಸಚಿವರಿಗೇಕೆ?

First Published 2, Jul 2020, 12:33 PM

ಕಲಬುರಗಿ(ಜು.02): ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಇಂದು(ಗುರುವಾರ) ಜಿಲ್ಲೆಯ ಗಾಣಗಾಪುರದ ಪ್ರಸಿದ್ಧ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು, ಮಹಾಮಾರಿ ಕೊರೋನಾ ಹಾವಳಿಯಿಂದ ಜುಲೈ 7 ರ ವರೆಗೆ ದತ್ತಾತ್ರೇಯ ದೇವಸ್ಥಾನ ಸಾರ್ವಜನಿಕರಿಗೆ ನಿರ್ಬಂಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಸಾರ್ವಜನಿಕರಿಗೆ ಇಲ್ಲದ ದರ್ಶನ ಭಾಗ್ಯ ಸಚಿವರಿಗೇಕೆ ? ದೇವರ ಸನ್ನಿಧಿಯಲ್ಲೂ ಸಚಿವರಿಗೊಂದು ನಿಯಮ, ಸಾರ್ವಜನಿಕರಿಗೊಂದು ನಿಯಮ ಯಾಕೆ? ಎಂದು ಪ್ರಶ್ನಿಸಿದ್ದಾರೆ.  

<p>ಬೆಳ್ಳಂಬೆಳಿಗ್ಗೆ ಗಾಣಗಾಪುರದ ಪ್ರಸಿದ್ಧ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದ ಸಚಿವ ರಮೇಶ್‌ ಜಾರಕಿಹೊಳಿ </p>

ಬೆಳ್ಳಂಬೆಳಿಗ್ಗೆ ಗಾಣಗಾಪುರದ ಪ್ರಸಿದ್ಧ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದ ಸಚಿವ ರಮೇಶ್‌ ಜಾರಕಿಹೊಳಿ 

<p>ಸ್ಥಳೀಯ ಬಿಜೆಪಿ ಮುಖಂಡರ ಜೊತೆ ನಿರ್ಬಂಧ ಇರುವ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಸಚಿವ ಜಾರಕಿಹೊಳಿ </p>

ಸ್ಥಳೀಯ ಬಿಜೆಪಿ ಮುಖಂಡರ ಜೊತೆ ನಿರ್ಬಂಧ ಇರುವ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಸಚಿವ ಜಾರಕಿಹೊಳಿ 

<p>ಸಾರ್ವಜನಿಕರಿಗೆ ಇಲ್ಲದ ದರ್ಶನ ಭಾಗ್ಯ ಸಚಿವರಿಗೇಕೆ? ದೇವರ ಸನ್ನಿಧಿಯಲ್ಲೂ ಸಚಿವರಿಗೊಂದು ನಿಯಮ, ಸಾರ್ವಜನಿಕರಿಗೊಂದು ನಿಯಮ ಏಕೆ? ಎಂದು ಪ್ರಶ್ನಿಸುತ್ತಿರುವ ಜನರು </p>

ಸಾರ್ವಜನಿಕರಿಗೆ ಇಲ್ಲದ ದರ್ಶನ ಭಾಗ್ಯ ಸಚಿವರಿಗೇಕೆ? ದೇವರ ಸನ್ನಿಧಿಯಲ್ಲೂ ಸಚಿವರಿಗೊಂದು ನಿಯಮ, ಸಾರ್ವಜನಿಕರಿಗೊಂದು ನಿಯಮ ಏಕೆ? ಎಂದು ಪ್ರಶ್ನಿಸುತ್ತಿರುವ ಜನರು 

<p>ಆದೇಶ ಉಲ್ಲಂಘಿಸಿ ಸಚಿವರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ </p>

ಆದೇಶ ಉಲ್ಲಂಘಿಸಿ ಸಚಿವರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ 

loader