ರೈತರ ಆದಾಯ ದ್ವಿಗುಣಕ್ಕೆ ನೇರ ಮಾರಾಟ ಸಹಕಾರಿ: ಸಚಿವ ಪಾಟೀಲ್‌

First Published Jan 27, 2021, 10:20 AM IST

ಕೊಪ್ಪಳ(ಜ.27): ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಆದಾಯ ದ್ವಿಗುಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಉದ್ಘಾಟನೆಗೊಂಡ ರೈತರ ನೂತನ ಮಾರುಕಟ್ಟೆಯನ್ನು ಸಾರ್ವಜನಿಕರು ಹಾಗೂ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್‌ ಹೇಳಿದ್ದಾರೆ.