ಉಡುಪಿಯಲ್ಲಿ ಸಂಕ್ರಾಂತಿ ಸಂಭ್ರಮ.. ಮೂರು ರಥೋತ್ಸವ.. ಚಿತ್ರಗಳು
ಉಡುಪಿ (ಜ. 14) ಉಡುಪಿಯಲ್ಲಿ ಸಂಭ್ರಮದ ಮಕರ ಸಂಕ್ರಾಂತಿ ವೈಭವದ..ಮೂರು ತೇರು ಉತ್ಸವ.. ಮಕರ ಸಂಕ್ರಾಂತಿಯ ಪ್ರಯುಕ್ತ ಗುರುವಾರ ರಾತ್ರಿ ಉಡುಪಿ ಕೃಷ್ಣನ ರಥಬೀದಿಯಲ್ಲಿ ಪರ್ಯಾಯ ಅದಮಾರು ಮಠದ ವತಿಯಿಂದ ವೈಭವದ ಮೂರು ರಥ ಉತ್ಸವ ನಡೆಯಿತು. ಚಿತ್ರಗಳು ಇಲ್ಲಿವೆ.

ಪರ್ಯಾಯ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥರ ಮಾರ್ಗದರ್ಶನದಲ್ಲಿ, ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯ ತೀರ್ಥರ ನೇತೃತ್ವದಲ್ಲಿ ನಡೆದ ಈ ರಥೋತ್ಸವ ನಡೆಯುತು.

ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಮತ್ತು ಶ್ರೀ ವಿದ್ಯಾರಾಜೇಶ್ವರ ತೀರ್ಥರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು ಮತ್ತು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಭಾಗವಹಿಸಿದ್ದರು.

ಮಕರಸಂಕ್ರಾಂತಿಯ ಸಪ್ತೋತ್ಸವದ ಅಂಗವಾಗಿ ಕಳೆದ 6 ದಿನಗಳಿಂದ ರಥಬೀದಿಯಲ್ಲಿ ನಿತ್ಯ ರಥೋತ್ಸವ - ಮಧ್ವಸರೋವರದಲ್ಲಿ ತೆಪ್ಪೋತ್ಸವಗಳು ನಡೆದವು. ಸಾವಿರಾರು ಮಂದಿ ಭಕ್ತರು ಈ ಉತ್ಸವಗಳಲ್ಲಿ ಭಾಗಿಯಾಗಿದ್ದರು.

ಕಳೆದೊಂದು ತಿಂಗಳಿಂದ ಕೃಷ್ಣ ದೇವರಿಗೆ ಪ್ರಾತಃ ಕಾಲದಲ್ಲಿ ಪರ್ಯಾಯ ಶ್ರೀಗಳು ಧನುರ್ಮಾಸದ ವಿಶೇಷ ಪೂಜೆಯನ್ನು ನಡೆಸುತಿದ್ದು, ಗುರುವಾರ ಮಕರ ಸಂಕ್ರಮಣದಂದು ಕೊನೆಯ ಧನುರ್ಮಾಸ ಪೂಜೆ ಸಲ್ಲಿಸಿದರು.

ಅಲ್ಲದೇ ಮಕರ ಸಂಕ್ರಮಣದ ಪ್ರಯುಕ್ತ ಪರ್ಯಾಯ ಶ್ರೀಗಳು ಕೃಷ್ಣನಿಗೆ ನೂತನ ಸುವರ್ಣ ಛತ್ರ ಸಹಿತ ವಜ್ರಕವಚ ಅಲಂಕಾರ ಮಾಡಿದ್ದು, ಭಕ್ತರ ವಿಶೇಷ ಗಮನಸೆಳೆಯಿತು.

ಮಕರ ಸಂಕ್ರಮಣದ ಮಾರನೇ ದಿನ (ಶುಕ್ರವಾರ) ಬೆಳಿಗ್ಗೆ 8 ಗಂಟೆಗೆ ರಥಬೀದಿಯಲ್ಲಿ ವೈಭವದ ಹಗಲು ರಥೋತ್ಸವ ನಡೆಯಲಿದೆ.

ಇಡೀ ಉಡುಪಿ ಬೆಳಕಿನ ಅಲಂಕಾರದಿಂದ ಕಂಗೊಳಿಸುತ್ತಿತ್ತು.

ಕಲಾತಂಡಗಳು ವಿಶೇಷ ಮೆರಗು ತಂದುಕೊಟ್ಟವು.

ಕಲಾತಂಡಗಳು ವಿಶೇಷ ಮೆರಗು ತಂದುಕೊಟ್ಟವು.

ಕೊರೋನಾ ಆತಂಕದ ನಡುವೆಯೂ ಸಂಭ್ರಮದಿಂದ ಹಬ್ಬ ಆಚರಣೆ ಮಾಡಲಾಯಿತು.

ಉಡುಪಿಯಲ್ಲಿ ಸಂಕ್ರಾಂತಿ ಸಂಭ್ರಮ.. ಮೂರು ರಥೋತ್ಸವ..