ಚಿನ್ನಾಭರಣ ಜತೆ ಗಣಪತಿ ವಿಸರ್ಜನೆ... ಮಾಸ್ಟರ್ ಪ್ಲಾನ್ ಮಾಡಿ ಕೊನೆಗೂ ಹೆಕ್ಕಿ ತೆಗೆದರು!
ಕುಮಟಾ(ಸೆ. 15) ಕುಮಟಾದ ಮಳಲಿ ಗೋನೆಹಳ್ಳಿಯ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಮೂರ್ತಿಗೆ ತೊಡಿಸಿದ್ದ ಚಿನ್ನದ ಉಂಗುರ ಹಾಗೂ ಬೆಳ್ಳಿಯ ಸರಪಳಿ ಸಮೇತ ವಿಸರ್ಜನೆ ಮಾಡಲಾಗಿದ್ದು, ತದನಂತರ ದೇವರಬಾವಿಯ ವಿನಯ್ ನಾಯಕ ಹಾಗೂ ತಂಡ ಕೆರೆಯಿಂದ ಆಭರಣಗಳನ್ನು ಹುಡುಕಿ ಕೊಟ್ಟು ಭೇಷ್ ಎನಿಸಿಕೊಂಡಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆ ಮಾಡುವ ಸಮಯದಲ್ಲಿ, ಅಚಾತುರ್ಯದಿಂದ ಗಣಪತಿಗೆ ತೊಡಿಸಿದ್ದ ಚಿನ್ನದ ಉಂಗುರ ಹಾಗೂ ಬೆಳ್ಳಿಯ ಸರಪಳಿ ಸಮೇತ ವಿಸರ್ಜನೆ ಮಾಡಲಾಗಿತ್ತು.
ಚಿನ್ನದ ಆಭರಣ ಜತೆ ಮೂರ್ತಿ ಮುಳುಗಿಸಿ ಅಚಾತುರ್ಯ ನಡೆದಿದ್ದು ಗೊತ್ತಾಗಿದೆ. ಕೆರೆಯಲ್ಲಿ ಮಣ್ಣು ಕರಡಿದ್ದ ನೀರು ತುಂಬಿದ್ದು ಏನು ಮಾಡಬೇಕು ಎನ್ನುವುದು ಗೊತ್ತಾಗಲಿಲ್ಲ.
ಸ್ಕೂಬಾ ಡೈವಿಂಗ್ ಉಪಕರಣಗಳನ್ನು ಬಳಸಿ ಆಭರಣಗಳನ್ನು ಪತ್ತೆಮಾಡಲಾಗಿದೆ. ತಂಡ ಮಾಡಿದ ಉಪಾಯಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವಿನಯ್ ನಾಯಕ ಹಾಗೂ ತಂಡ ಈ ತಂಡವು ಕೆರೆಯಲ್ಲಿ ಮುಳುಗಿ ಆಭರಣಗಳನ್ನು ಹುಡುಕಿಕೊಟ್ಟಿದೆ. ವಿನಯ್ ನಾಯಕ ಹಾಗೂ ತಂಡದವರ ಈ ಕಾರ್ಯಕ್ಕೆ ಮಳಲಿ ಹಾಗೂ ಮೊರಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ರಾಘವ ನಾಯಕ, ರೋಹಿತ್ ನಾಯಕ, ಅಕ್ಷಯ ನಾಯಕ ಹಾಗೂ ತೊರ್ಕೆ ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ ನಾಯಕ ದೇವರಭಾವಿ ಧನ್ಯವಾದ ಅರ್ಪಿಸಿದ್ದಾರೆ.
ಕುಮಟಾದ ಮಳಲಿ ಗೋನೆಹಳ್ಳಿಯ ಸಾರ್ವಜನಿಕ ಗಣೇಶ ಮೂರ್ತಿಯನ್ನು ತೊಡಿಸಿದ್ದ ಚಿನ್ನದ ಉಂಗುರ ಹಾಗೂ ಬೆಳ್ಳಿಯ ಸರಪಳಿ ಸಮೇತ ವಿಸರ್ಜನೆ ಮಾಡಲಾಗಿದ್ದು, ತದನಂತರ ದೇವರಬಾವಿಯ ವಿನಯ್ ನಾಯಕ ಹಾಗೂ ತಂಡ ಕೆರೆಯಿಂದ ಆಭರಣಗಳನ್ನು ಹುಡುಕಿ ಕೊಟ್ಟು ಭೇಷ್ ಎನಿಸಿಕೊಂಡಿದ್ದಾರೆ.