ಬೀದಿಗೆ ಬಿದ್ದ 10 ಕುಟುಂಬಗಳಿಗೆ ತಾತ್ಕಾಲಿಕ ಸೂರು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದ ಶ್ರೀರಾಮುಲು!
ಕಳೆದ ಹತ್ತು ದಿನಗಳ ಹಿಂದೆ ತಾಳೂರು ರಸ್ತೆ ಹೆಚ್ಎಲ್ಸಿ ಸಬ್ ಕೆನಾಲ್ (ನಂಬರ್ 6 ಡಿವಿಜನ್ ಕ್ಯಾನಲ್) ಮೇಲೆ ಇರೋ ಹತ್ತಕ್ಕೂ ಹೆಚ್ಚು ಗುಡಿಸಲುಗಳನ್ನು ತೆರವು ಮಾಡಲಾಗಿತ್ತು. ತೆರವು ಕಾರ್ಯಾಚರಣೆ ವೇಳೆ ಮನೆ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದ ಬಡಜನರು. ಬಡಜನರಿಗೆ ಸೂರು ನಿರ್ಮಿಸಿಕೊಡುವ ಮೂಲಕ ಮಾನವೀತೆ ಮರೆದಿರುವ ಮಾಜಿ ಸಚಿವ ಶ್ರೀರಾಮುಲು.
ಚಿಕ್ಕದಾಗಿ ಸೂರು ನಿರ್ಮಿಸಿಕೊಂಡು ಬೀದಿಗೆಯಲ್ಲಿ ಮಲಗಿದ್ದ ಕುಟುಂಬಗಳನ್ನು ಕಂಡು ಮರುಗಿದ್ದ ಶ್ರೀರಾಮುಲು, ಸಂತ್ರಸ್ತರನ್ನು ಭೇಟಿ ಮಾಡಿ ಅವರ ಸಂಕಷ್ಟದಲ್ಲಿ ಭಾಗಿಯಾಗಿ ತತ್ಕಾಲಿಕವಾಗಿ ಗುಡಿಸಲು ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಸುಮಾರು ಹತ್ತು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಮಳೆಯಲ್ಲೇ ಬೀದಿಯಲ್ಲೇ ಊಟ ಸ್ನಾನ ಮಲಗುವ ಸ್ಥಿತಿಯಲ್ಲಿದ್ದ ಕುಟುಂಬಗಳು. ಸ್ಥಳದಲ್ಲಿ ನಾಲ್ಕು ತಾಸು ಮುಕ್ಕಾಂ ಹೂಡುವ ಮೂಲಕ ಗುಡಿಸಲು ನಿರ್ಮಾಣ ಮಾಡಿದ್ದಾರೆ ಜೊತೆಗೆ ಹತ್ತು ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ದಾನ್ಯವನ್ನು ವಿತರಣೆ ಮಾಡಿದ್ದಾರೆ.
ಸ್ಥಳೀಯ ಪ್ರಭಾವಿ ನಾಯಕರ ಕುಮ್ಮಕ್ಕಿನಿಂದಾಗಿ ಕಳೆದ ನಲವತ್ತು ವರ್ಷಗಳಿಂದ ವಾಸ ಮಾಡುತ್ತಿರುವ ಬಡವರನ್ನ ಒಕ್ಕಲೆಬ್ಬಿಸಲಾಗಿದೆ. ಗುಡಿಸಲು ತೆರವು ಮಾಡಿದ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಪೋನ್ ನಲ್ಲಿ ಮಾತನಾಡುವ ಮೂಲಕ ರಾಜ್ಯದಲ್ಲಿ ಡೆಂಗ್ಯೂ ತಾಂಡವವಾಡ್ತಿದೆ. ಮಳೆಗಾಲ ಇದೆ ಬೀದಿಗೆ ಬಿದ್ದ ಹತ್ತು ಕುಟುಂಬಲ್ಲಿ ಪುಟ್ಟ ಪುಟ್ಟ ಮಕ್ಕಳಿವೆ ಇಲ್ಲಿಯೂ ಡೆಂಗ್ಯೂ ಬಂದರೆ ಯಾರು ಹೊಣೆ ಎಂದು ತರಾಟೆಗೆ ತೆಗೆದುಕೊಂಡರು.
ಬಳ್ಳಾರಿಯಲ್ಲಿ ಅದೆಷ್ಟೋ ಜನರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಅವರಿಗೊಂದು ಬಡವರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು. ಅಲ್ಲದೇ ನಿಯಮದ ಪ್ರಕಾರ ತೆರವು ಮಾಡಲಿ ಆದರೆ ತೆರವು ಮಾಡಿದವರಿಗೆ ಮತ್ತೊಂದು ಕಡೆ ಸೂರನ್ನು ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು.