ಮಂಗಳೂರಿನಲ್ಲಿ ಭಾರೀ ಮಳೆ : ಅರಬ್ಬೀ ಸಮುದ್ರ ಪ್ರಕ್ಷುಬ್ಧ
ಮಂಗಳೂರಿನಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿದೆ. ದಡಕ್ಕೆ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳಿಂದ ಉಳ್ಳಾಲದ ಬಟ್ಟಪಾಡಿ, ಸೋಮೇಶ್ವರ, ಉಚ್ಚಿಲ ಕಡಲ ಕಿನಾರೆಯಲ್ಲಿ ಆತಂಕ ಹೆಚ್ಚಾಗಿದೆ. ಅಲೆಗಳ ಅಬ್ಬರ ಕಂಡು ಉಚ್ಚಿಲದ ಸಮುದ್ರ ಬದಿ ರೆಸಾರ್ಟ್ ನಲ್ಲಿರೋ ಪ್ರವಾಸಿಗರಲ್ಲಿಯೂ ಆತಂಕ ಮನೆ ಮಾಡಿದೆ
ಮಂಗಳೂರಿನಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಅರಬ್ಬೀ ಸಮುದ್ರ ಪ್ರಕ್ಷುಬ್ಧ
ಸಮುದ್ರ ತೀರದಲ್ಲಿ ದಡಕ್ಕೆ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳು
Mangaluru
ಉಳ್ಳಾಲದ ಬಟ್ಟಪಾಡಿ, ಸೋಮೇಶ್ವರ, ಉಚ್ಚಿಲ ಕಡಲ ಕಿನಾರೆಯಲ್ಲಿ ಅಬ್ಬರ
ಅಲೆಗಳ ಅಬ್ಬರ ಕಂಡು ಉಚ್ಚಿಲದ ಸಮುದ್ರ ಬದಿ ರೆಸಾರ್ಟ್ ನಲ್ಲಿರೋ ಪ್ರವಾಸಿಗರಿಗೆ ಆತಂಕ
ಉಚ್ಚಿಲದ ರೆಸಾರ್ಟ್ ಗೆ ಟ್ರಿಪ್ ಬಂದಿದ್ದ ಬೆಂಗಳೂರಿನ ಪ್ರವಾಸಿಗರು ಅಲೆಗಳ ಅಬ್ಬರಕ್ಕೆ ಕಂಗಾಲು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಕಡಲ ತಡಿಗೆ ಆಗಮಿಸಿದ ಪ್ರವಾಸಿಗರ ಮಾತು
ಪ್ರವಾಸಕ್ಕೆ ಅಂತ ಬಂದಿದ್ವಿ, ಆದ್ರೆ ಇಲ್ಲಿ ಸಿಕ್ಕಾಪಟ್ಟೆ ಮಳೆಯಿಂದ ಸಮುದ್ರ ಅಬ್ಬರಿಸ್ತಿದೆ
ಹೀಗಾಗಿ ಇದನ್ನ ನೋಡಿ ಭಯವಾಗ್ತಿದೆ, ಇವತ್ತೇ ಬೆಂಗಳೂರು ಹೋಗ್ತಿದೀವಿ
ನಿನ್ನೆ ರಾತ್ರಿ ಅಲೆಗಳ ಅಬ್ಬರ ಜೋರಿತ್ತು, ನೀರಿಗಿಳಿಯೋಕೆ ಹೋದಾಗ ಅಲೆ ಬಂದು ಬಡೀತು. ರೆಸಾರ್ಟ್ ನ ಕುರ್ಚಿ ಎಲ್ಲಾ ಹಾರಿ ಹೋಗಿದೆ, ನೋಡೋವಾಗ ಭಯ ಆಯ್ತು
ಇಲ್ಲಿನ ಬೀಚ್ ನೋಡೋಕೆ ಅಂತ ಬಂದಿದ್ದು, ಆದ್ರೆ ಮಳೆಯಿಂದಾಗಿ ಡೇಂಜರ್ ಆಗಿದೆ
ಮಳೆ ನಿಲ್ಲೋವರೆಗೂ ಯಾರೂ ಇಲ್ಲಿಗೆ ಬರಬೇಡಿ, ತುಂಬಾ ಅಪಾಯಕಾರಿಯಾಗಿದೆ. ಮಳೆ ಹೆಚ್ಚಾದ್ರೆ ಇಲ್ಲಿ ಫುಲ್ ಡೇಂಜರ್, ಎಲ್ಲರೂ ಹುಷಾರಾಗಿರಬೇಕು