ಮಡಿಕೇರಿಯಲ್ಲಿ ನಡೆದ ಫ್ಲವರ್ ಶೋ ಸಂಭ್ರಮ ಹೀಗಿತ್ತು..!
ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಡಿಕೇರಿಯ ರಾಜಾಸೀಟ್ ಉದ್ಯಾನವನದಲ್ಲಿ ಜಿಲ್ಲಾಡಳಿತ ಹಾಗೂ ತೋಟಗಾರಿಕ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ 2020ರ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಜನ ಸಾಗರವೇ ಹರಿದು ಬಂದಿತ್ತು. ವಿಘ್ನೇಶ್ ಭೂತನಕಾಡು ತೆಗೆದಿರುವ ಸುಂದರ ಫೋಟೋಸ್ ಇಲ್ಲಿವೆ.
ಬಿಳಿ, ಕೆಂಪು ಹೂಗಳಲ್ಲಿ ಮೂಡಿಬಂದಿರುವ ಪಕ್ಷಿ
ಮಂಜಿನ ನಗರಿನ ರಾಜಾಸೀಟ್‌ನಲ್ಲಿ ನಡೆದ ಫ್ಲವರ್ ಶೋ ಪ್ರವಾಸಿಗರನ್ನು ಆಕರ್ಷಿಸಿತು
ಹೂಗಳಿಂದಲೇ ನಿರ್ಮಿಸಲಾದ ಮಗ್ ಮತ್ತು ಕಪ್..! ಹೂಗಳ ಚಹಾ ಸೆಟ್ ಪ್ರಮುಖ ಆಕರ್ಷಣೆಯಾಗಿತ್ತು
ಹೂಗಳಲ್ಲಿಯೇ ಮೂಡಿ ಬಂದ ಸ್ವಾಮೀ ವಿವೇಕಾನಂದರ ರಚನೆ
ವಿವಿಧ ಬಣ್ಣದ ಹೂಗಳ ಪುಷ್ಪ ರಾಶಿ
ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಕೊಡಗಿನ ಸಾಂಪ್ರಾದಾಯಿಕ ವಾದ್ಯವಾದ ವಾಲಗಕ್ಕೆ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಹೆಜ್ಜೆ ಹಾಕುವ ಮೂಲಕ ಕುಣಿದು ಕುಪ್ಪಳಿಸಿದರು.
ಕಾವೇರಿ ಮಾತೆಯ ಹೂವಿನ ರಚನೆ
ರಾತ್ರಿ ವೇಳೆಯಲ್ಲಿ ವಾಟರ್ ಶೋ ಪ್ರಾವಸಿಗರನ್ನು ರಂಜಿಸಿತು
ಇಸ್ರೋ ಯಾನಕ್ಕೆ ಸಂಬಂಧಿಸಿದಂತೆಯೂ ಹೂವಿನ ರಚನೆ ಪ್ರವಾಸಿಗರನ್ನು ಸೆಳೆಯಿತು.