ಕಲಬುರಗಿ: ಸಂಸದ ಉಮೇಶ್ ಜಾಧವ್ ಗ್ರಾಮ ವಾಸ್ತವ್ಯದ ವೇಳೆಯೇ ಭೂಕಂಪ..!
ಕಲಬುರಗಿ(ಅ.17): ಪದೇ ಪದೆ ಸಂಭವಿಸುತ್ತಿರುವ ಭೂಕಂಪನದಿಂದ ಕಂಗೆಟ್ಟ ಜಿಲ್ಲೆಯ ಗಡಿಕೇಶ್ವರ ಗ್ರಾಮದಲ್ಲಿ ಸಂಸದ ಡಾ. ಉಮೇಶ ಜಾಧವ್ ಅವರು ನಿನ್ನೆ(ಶನಿವಾರ) ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಜಾಧವ್ ಗ್ರಾಮ ವಾಸ್ತವ್ಯ ಹೊತ್ತಲ್ಲೇ ಮತ್ತೆ ಭೂಮಿ ಕಂಪಿಸಿದೆ.
ಬೆಳಗಿನ 4 ಗಂಟೆ ಸುಮಾರಿಗೆ ಭೂಮಿ ಒಳಗಿನಿಂದ ಭಾರೀ ಪ್ರಮಾಣದ ಶಬ್ದದೊಂದಿಗೆ ಲಘು ಭೂಕಂಪನವಾಗಿದೆ. ಭಾರೀ ಶಬ್ದದಿಂದ ಸರಕಾರಿ ಶಾಲೆಯಲ್ಲಿ ಮಲಗಿದ್ದ ಸಂಸದ ಜಾಧವ್ ಎಚ್ಚರಗೊಂಡಿದ್ದರು. ಈ ಮೂಲಕ ಸಂಸದ ಉಮೇಶ ಜಾಧವ್‌ಗೂ ಗ್ರಾಮದ ಜನರು ಅನುಭವಿಸುತ್ತಿರುವ ಭೂಕಂಪನದ ಬಿಸಿ ತಟ್ಟಿದೆ.
ಸಂಸದ ಉಮೇಶ್ ಜಾಧವ್ ವಾಸ್ತವ್ಯ ಹೂಡಿದ್ದ ಗಡಿಕೇಶ್ವರ ಗ್ರಾಮದಲ್ಲಿ ಮಧ್ಯರಾತ್ರಿ 1 ಗಂಟೆಯಿಂದ ಬೆಳಗಿನವರೆಗೆ ಕರೆಂಟ್ ಇರಲಿಲ್ಲ. ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲಲ್ಲೇ ಉಮೇಶ್ ಜಾಧವ್ ಸರಕಾರಿ ಶಾಲೆಯಲ್ಲಿ ರಾತ್ರಿ ಕಳೆದಿದ್ದಾರೆ.
ವಾಸ್ತವ್ಯ ಮಾಡಿರುವ ಶಾಲಾ ಕೋಣೆಗೆ ಬೀಗ ಸಹ ಇರಲಿಲ್ಲ. ಬೀಗ ಸಹ ಇಲ್ಲದ್ದನ್ನು ಸ್ವತಃ ಸಂಸದ ಉಮೇಶ ಜಾಧವ್ ಅವರೇ ಹೇಳಿಕೊಂಡಿದ್ದಾರೆ. ವಾಸ್ತವ್ಯದ ನಂತರ ಜನರಿಗೆ ಧನ್ಯವಾದ ಹೇಳಿ ರಾತ್ರಿ ಉಡುಗೆಯಲ್ಲಿಯೇ ಗಡಿಕೇಶ್ವರದಿಂದ ಸಂಸದರು ತೆರಳಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ ಬರ್ತಾರೆ. ಶೆಡ್ ನಿರ್ಮಾಣ ಸೇರಿ ಎಲ್ಲಾ ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿ ಗ್ರಾಮ ವಾಸ್ತವ್ಯಕ್ಕೆ ಮಂಗಳ ಹಾಡಿದ ಸಂಸದ ಉಮೇಶ ಜಾಧವ್