ಎಡಿಯೂರು ಸಿದ್ಧಲಿಂಗೇಶ್ವರನಿಗೆ 10 ಕೋಟಿ ಮೌಲ್ಯದ ಚಿನ್ನದ ತೇರು ಅರ್ಪಿಸಿದ ಭಕ್ತ

First Published Jun 5, 2020, 11:12 AM IST

ತುಮಕೂರು(ಜೂ.05): ಬಡತನ ಹಾಗೂ ಕಷ್ಟದಲ್ಲಿ ನೊಂದ ಭಕ್ತನೊಬ್ಬ ಹೊತ್ತಿದ್ದ ಹರಕೆಯನ್ನು ಭಗವಂತನಿಗೆ ಚಿನ್ನದ ತೇರು ನೀಡುವ ಮುಖಾಂತರ ಎಡಿಯೂರು ಸಿದ್ಧಲಿಂಗೇಶ್ವರನಿಗೆ ಹರಕೆ ಸಲ್ಲಿಸಿದ್ದಾರೆ. ಶಿವಕುಮಾರ್‌ ಎಂಬುವರೇ ತನ್ನ ಕಷ್ಟ ಪರಿಹರಿಸಿದ ಎಡಿಯೂರು ಸಿದ್ಧಲಿಂಗೇಶ್ವರನಿಗೆ 10 ಕೋಟಿ ವೆಚ್ಚದ ಚಿನ್ನದ ತೇರು ನೀಡುವ ಮೂಲಕ ಹರಕೆ ತೀರಿಸಿದ್ದಾರೆ.