MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಹಿಂದೂ ಮಹಿಳೆಯ ಜೊತೆಗೆ ಕಾಂಗ್ರೆಸ್ ನಾಯಕ ಷರೀಫ್ ರಾತ್ರಿ ಕಹಾನಿ: ಬೆಡ್‌ರೂಮ್‌ನಲ್ಲಿ ಗಂಡನಿಗೆ ಸಿಕ್ಕಿಬಿದ್ದ!

ಹಿಂದೂ ಮಹಿಳೆಯ ಜೊತೆಗೆ ಕಾಂಗ್ರೆಸ್ ನಾಯಕ ಷರೀಫ್ ರಾತ್ರಿ ಕಹಾನಿ: ಬೆಡ್‌ರೂಮ್‌ನಲ್ಲಿ ಗಂಡನಿಗೆ ಸಿಕ್ಕಿಬಿದ್ದ!

ಚಿಕ್ಕಮಗಳೂರಿನಲ್ಲಿ ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಯಲ್ ಷರೀಫ್, ವಿವಾಹಿತ ಮಹಿಳೆಯೊಂದಿಗೆ ಬೆಡ್‌ರೂಮ್‌ನಲ್ಲಿದ್ದಾಗ ಆಕೆಯ ಪತಿ ಮತ್ತು ಸ್ಥಳೀಯರು ಅವರನ್ನು ಹಿಡಿದಿದ್ದು, ಘಟನೆಗೆ ಸಂಬಂಧಿಸಿದಂತೆ ಪತಿ-ಪತ್ನಿ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದಾರೆ.

2 Min read
Author : Gowthami K
Published : Feb 05 2026, 12:16 PM IST
Share this Photo Gallery
  • FB
  • TW
  • Linkdin
  • Whatsapp
18
ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷನ ಲವ್ವಿಡವ್ವಿ
Image Credit : Asianet News

ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷನ ಲವ್ವಿಡವ್ವಿ

ಚಿಕ್ಕಮಗಳೂರು ನಗರದಲ್ಲಿ ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಯಲ್ ಷರೀಫ್ ಮೇಲೆ ಹಲ್ಲೆ ನಡೆದಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ವಿವಾಹಿತ ಮಹಿಳೆಯೊಬ್ಬರೊಂದಿಗೆ ಸಂಬಂಧ ಹೊಂದಿದ್ದ ಆತ ಆಕೆಯ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಗಂಡ ಪರಸ್ಪರ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ.

28
ಬೆಡ್‌ರೂಮ್ ನಲ್ಲಿ ಇದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ
Image Credit : Asianet News

ಬೆಡ್‌ರೂಮ್ ನಲ್ಲಿ ಇದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ

ಚಿಕ್ಕಮಗಳೂರು ನಗರದ ಶಂಕರಪುರ ಬಡಾವಣೆಯ ಬೆಲ್ಟ್ ರಸ್ತೆಯಲ್ಲಿರುವ ಮನೆಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಗಂಡನಿಂದ ದೂರವಾಗಿ ವಾಸಿಸುತ್ತಿದ್ದ ಮಹಿಳೆಯ ಮನೆಗೆ ರಾಯಲ್ ಷರೀಫ್ ಆಗಾಗ್ಗೆ ಬಂದು ಹೋಗುತ್ತಿದ್ದ ಇದನ್ನು ಶಂಕರಪುರ ಬಡಾವಣೆಯ ಸ್ಥಳೀಯ ಯುವಕರು ಗಮನಿಸಿದ್ದರು. ಇದೇ ಹಿನ್ನೆಲೆಯಲ್ಲಿ, ಕಳೆದ ರಾತ್ರಿ ಮಹಿಳೆಯೊಂದಿಗೆ ಬೆಡ್‌ರೂಂ ನಲ್ಲಿ ಇದ್ದಾಗ ಆಕೆಯ ಗಂಡ ಹಾಗೂ ಸ್ಥಳೀಯರು ಸೇರಿ ರಾಯಲ್ ಷರೀಫ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

Related Articles

Related image1
ಮುಸ್ಲಿಂ ದಂಪತಿಯ ಸಹಾಯಕ್ಕೆ ಬಂದ ಹಿಂದೂ ಯುವಕನ ಮೇಲೆ SDPI ಕಾರ್ಯಕರ್ತರಿಂದ ಹಲ್ಲೆ! ಯುವಕನ ತಪ್ಪಿಲ್ಲ ಎಂದರೂ ಕೇಳದೆ ಥಳಿತ!
Related image2
ವಂಟಮೂರಿ: ತಾಯಿಯನ್ನು ವಿವಸ್ತ್ರಗೊಳಿಸಿ, ಕಟ್ಟಿ ಹಾಕಿ ಹಲ್ಲೆ ನಡೆಸಿದ 12 ಮಂದಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಪ್ರಕಟ
38
ಶಂಕರಪುರ ಹುಡುಗರಿಗೆ ವಿಷಯ ತಿಳಿಸಿದ ಗಂಡನ ಮೇಲೆ ಹಲ್ಲೆ
Image Credit : Asianet News

ಶಂಕರಪುರ ಹುಡುಗರಿಗೆ ವಿಷಯ ತಿಳಿಸಿದ ಗಂಡನ ಮೇಲೆ ಹಲ್ಲೆ

ಈ ವೇಳೆ ರಾಯಲ್ ಷರೀಫ್ ಮತ್ತು ಮಹಿಳೆಯ ಗಂಡನ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ರಾಯಲ್ ಷರೀಫ್ ಆಕೆಯ ಗಂಡನಿಗೆ ಥಳಿಸಿ ಹೊಡೆದು ಕಳಿಸಿದ್ದ. ಹಲ್ಲೆಗೊಳಗಾದ ಮಹಿಳೆ ಗಂಡ ಶಂಕರಪುರ ಹುಡುಗರಿಗೆ ವಿಷಯ ತಿಳಿಸಿದ್ದನು. ಎಲ್ಲರೂ ಒಟ್ಟಿಗೆ ಮಹಿಳೆ ಮನೆಗೆ ಹೋದಾಗ ಮಾತಿಗೆ-ಮಾತು ಬೆಳೆದು ಗಲಾಟೆ, ಹಲ್ಲೆ ನಡೆದಿದೆ. ಈ ವೇಳೆ ನನ್ನ ಫ್ರೆಂಡ್ ಮನೆಗೆ ಬಂದಿದ್ದೇನೆ ಎಂದು ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಯಲ್ ಷರೀಫ್ ಸಮಜಾಯಿಷಿ ಕೊಡಲು ನೋಡಿದ್ದಾನೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದೆ.

48
ಮಹಿಳೆಯ ಹೇಳಿಕೆ
Image Credit : Asianet News

ಮಹಿಳೆಯ ಹೇಳಿಕೆ

ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದ್ದು, ಅದಕ್ಕೆ ಸ್ಪಷ್ಟನೆ ನೀಡಿರುವ ಮಹಿಳೆ ತಾರಾ, “ರಾಯಲ್ ಷರೀಫ್ ನನ್ನ ಸ್ನೇಹಿತ ಮಾತ್ರ. ನನಗೆ ಅನಾರೋಗ್ಯವಾಗಿದ್ದ ಕಾರಣ ಮಾತ್ರೆ ತರಲು ಹೇಳಿದ್ದೆ. ಮಾತ್ರೆ ತಂದ ಬಳಿಕ ನಾಲ್ಕೈದು ಜನರು ಹಿಂದಿನಿಂದ ಬಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ವಿಡಿಯೋದಲ್ಲಿರುವ ಆರೋಪಗಳೆಲ್ಲಾ ಸುಳ್ಳು” ಎಂದು ಹೇಳಿದ್ದಾಳೆ.

58
ಗಂಡನ ಗಂಭೀರ ಆರೋಪ
Image Credit : Asianet News

ಗಂಡನ ಗಂಭೀರ ಆರೋಪ

ಆದರೆ ಮಹಿಳೆಯ ಗಂಡ ಕೀರ್ತಿ ನೀಡಿರುವ ಹೇಳಿಕೆ ಸಂಪೂರ್ಣ ಭಿನ್ನವಾಗಿದೆ. “ನಿನ್ನೆ ರಾತ್ರಿ ಸುಮಾರು 10.30ರ ವೇಳೆಗೆ ಮನೆ ಬಾಗಿಲು ತೆರೆದಿತ್ತು. ಕತ್ತಲಲ್ಲಿ ನಿಂತು ನೋಡಿದಾಗ, ನನ್ನ ಹೆಂಡತಿಯ ಬೈಕಿನಲ್ಲೇ ರಾಯಲ್ ಷರೀಫ್ ಬಂದು ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡ. ನಾನು ಆಕೆಯ ತಾಯಿ, ತಮ್ಮ, ಅಕ್ಕ ಸೇರಿದಂತೆ ಸಂಬಂಧಿಕರಿಗೆ ಕರೆ ಮಾಡಿ ಸ್ಥಳಕ್ಕೆ ಬರಲು ಹೇಳಿದೆ. ನಾವು ಒಳಗೆ ಹೋದಾಗ ಇಬ್ಬರೂ ಬೆಡ್ ರೂಂನಲ್ಲಿ ಇದ್ದರು” ಎಂದು ಹೇಳಿದ್ದಾರೆ.

68
ನಾನು ಜೀವಂತವಾಗಿದ್ದೇನೆ ಅಷ್ಟೇ ಸಾಕು ಎಂದ ಗಂಡ
Image Credit : Asianet News

ನಾನು ಜೀವಂತವಾಗಿದ್ದೇನೆ ಅಷ್ಟೇ ಸಾಕು ಎಂದ ಗಂಡ

“ನನ್ನನ್ನು ನೋಡಿ ಆತ ‘ಬಾಂಬೆಯಿಂದ ಈಗ ಬಂದೆ’ ಎಂದ. ಬಾಂಬೆಯಿಂದ ಬಂದಿದ್ದರೆ ನಿನ್ನ ಮನೆಗೆ ಹೋಗಬೇಕು, ನಮ್ಮ ಮನೆಗೆ ಏಕೆ ಬಂದೆ ಎಂದು ಕೇಳಿದಾಗ, ನನ್ನ ಮೇಲೆ ಹಲ್ಲೆ ನಡೆಸಿ ಮಚ್ಚು ತಾಂಡು ಬೀಸಿದ. ಬಳಿಕ ಕಾರು ಬಂತು ಅದರಲ್ಲಿ ಪರಾರಿಯಾದ. ನಾನು ಜೀವಂತವಾಗಿದ್ದೇನೆ ಅಷ್ಟೇ ಸಾಕು” ಎಂದು ಕೀರ್ತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

78
ನಮ್ಮದು ಲವ್ ಮ್ಯಾರೇಜ್
Image Credit : Asianet News

ನಮ್ಮದು ಲವ್ ಮ್ಯಾರೇಜ್

ಇನ್ನು, “ನಾನು ಲವ್ ಮ್ಯಾರೇಜ್ ಮಾಡಿಕೊಂಡ ಕಾರಣ ಹೆತ್ತವರೇ ದೂರ ಇಟ್ಟಿದ್ದಾರೆ. ಕಳೆದ ಒಂದು ವರ್ಷದಿಂದ ನಾವು ಗಂಡ-ಹೆಂಡತಿ ಬೇರೆಬೇರೆ ವಾಸಿಸುತ್ತಿದ್ದೇವೆ. ನಮ್ಮ ನಡುವಿನ ದೂರಕ್ಕೆ ಕಾರಣವೇ ರಾಯಲ್ ಷರೀಫ್. ವರ್ಷ ಹಿಂದೆಯೂ ಗಲಾಟೆ ನಡೆದಿದ್ದು, ನನ್ನ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ಹಾಕಿಸಿದ್ದರು. ರಾಯಲ್ ಷರೀಫ್ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

88
ಪೊಲೀಸ್ ತನಿಖೆ
Image Credit : Asianet News

ಪೊಲೀಸ್ ತನಿಖೆ

ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳ ನಡುವೆ ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ವೈರಲ್ ವೀಡಿಯೋ, ಸಾಕ್ಷ್ಯಗಳು ಹಾಗೂ ಹೇಳಿಕೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಚಿಕ್ಕಮಗಳೂರು

Latest Videos
Recommended Stories
Recommended image1
ಕೋಗಿಲು ಬಡಾವಣೆ ಅಕ್ರಮ ತೆರವು : ಯಾರಿಗೂ ನಿವೇಶನ ಮಂಜೂರಾದ ದಾಖಲೆ ಇಲ್ಲ
Recommended image2
ವ್ಯಕ್ತಿಯನ್ನ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್, ಏನಿದು ಪ್ರಕರಣ?
Recommended image3
ಆರ್ಥಿಕ ಭಯೋತ್ಪಾದನೆಗೆ ಕೇಂದ್ರ ಸರ್ಕಾರ ಸಂಚು: ಪ್ರಿಯಾಂಕ್ ಖರ್ಗೆ
Related Stories
Recommended image1
ಮುಸ್ಲಿಂ ದಂಪತಿಯ ಸಹಾಯಕ್ಕೆ ಬಂದ ಹಿಂದೂ ಯುವಕನ ಮೇಲೆ SDPI ಕಾರ್ಯಕರ್ತರಿಂದ ಹಲ್ಲೆ! ಯುವಕನ ತಪ್ಪಿಲ್ಲ ಎಂದರೂ ಕೇಳದೆ ಥಳಿತ!
Recommended image2
ವಂಟಮೂರಿ: ತಾಯಿಯನ್ನು ವಿವಸ್ತ್ರಗೊಳಿಸಿ, ಕಟ್ಟಿ ಹಾಕಿ ಹಲ್ಲೆ ನಡೆಸಿದ 12 ಮಂದಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಪ್ರಕಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved